ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ (Karnataka MLC Polls) ಬಿಜೆಪಿಯ ಮೂವರು ಶಾಸಕರಿಂದ ಅಡ್ಡಮತದಾನ ಆಗಿದೆ. ಅವರ ವಿರುದ್ಧ ಶಿಸ್ತುಕ್ರಮ ನಿಶ್ಚಿತ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ತಿಳಿಸಿದರು.
ಮೇಲ್ಮನೆ ಚುನಾವಚಣೆ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ (BJP) ಲಿಂಗರಾಜು ಪಾಟೀಲ್, ರಘು ಕೌಟಿಲ್ಯ ಗೆದ್ದಿದ್ದಾರೆ. ನಮ್ಮ ಮೂರು ವೋಟುಗಳು ಕ್ರಾಸ್ ಆಗಿದೆ ಅಂತ ಮಾಹಿತಿ ಬಂದಿದೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಗೊತ್ತಾಗುತ್ತೆ. ಅವರ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ನಿಶ್ಚಿತ. ನಮ್ಮ ಒಂದು ಮತ ಅಸಿಂಧು ಆಗಿದೆ. ನಾಲ್ಕು ವೋಟು ಜೆಡಿಎಸ್‌ಗೆ ಕೊಟ್ಟಿದ್ದೀವಿ ಎಂದು ಹೇಳಿದರು. ಇದನ್ನೂ ಓದಿ: ಪರಿಷತ್ ಚುನಾವಣೆ; ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರಿಗೆ ಗೆಲುವು
ನಮ್ಮಿಂದ ಮೂರು ಮತ ಕ್ರಾಸ್ ಆಗಿರೋದು ನಮಗೆ ಖಚಿತ ಆಗಿದೆ. ಅವರ ವಿರುದ್ಧ ಶಿಸ್ತು ಕ್ರಮ ಆಗುತ್ತೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಚರ್ಚೆ ಮಾಡ್ತೇವೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ. ಆಗ ಯಾರು ಅಡ್ಡಮತದಾನ ಮಾಡಿದ್ದಾರೆ ಅಂತ ಗೊತ್ತಾಗುತ್ತದೆ. ಈ ಫಲಿತಾಂಶಕ್ಕೂ ನಮ್ಮಲ್ಲಿ ಸ್ಥಾನಗಳ ಬದಲಾವಣೆ ಆಗುವುದಕ್ಕೂ ಸಂಬಂಧ ಇಲ್ಲ. ಜೆಡಿಎಸ್‌ಗೆ ನಾಲ್ಕು ವೋಟ್ ಹಾಕಲು ನಾವು ಹೇಳಿದ್ವಿ. ಅವರಿಗೆ ಹಾಕಿದ್ದಾರೆ ಅಂತಾ ಅಂದುಕೊಂಡಿದ್ದೀವಿ ಎಂದರು.
ಬಿ.ವೈ.ವಿಜಯೇಂದ್ರ ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಲಿಂಗರಾಜು ಪಾಟೀಲ್, ರಘು ಕೌಟಿಲ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಿಂಗಾರಾಜು ಪಾಟೀಲ್‌ಗೆ 30 ಮತ ಅಲರ್ಟ್ ಮಾಡಿದ್ವಿ. ಅದರಲ್ಲಿ ಮೂರು ವೋಟ್ ಅಡ್ಡಮತದಾನವಾಗಿದೆ. ರಘು ಕೌಟಿಲ್ಯಗೆ ಕೊಟ್ಟ 30 ವೋಟ್‌ನಲ್ಲಿ ಒಂದು ವೋಟ್ ಅಸಿಂಧು ಆಗಿದೆ. ಯಾರು ಅಡ್ಡಮತದಾನ ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಲ್ಲವೂ ಮಾಹಿತಿ ಸಿಕ್ಕ ಮೇಲೆ ಪಕ್ಷ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಪರಿಷತ್ ಚುನಾವಣೆ; ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಜಯ – ಮೈತ್ರಿ ಅಭ್ಯರ್ಥಿ ಸೋಲು
