ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಈಗ ಹಾಲಿವುಡ್‌ನಲ್ಲೂ(Hollywood) ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಮತ್ತು ಟಬು ಅವರ ಬಳಿಕ, ದಿಶಾ ಕೂಡ ಹಾಲಿವುಡ್ ಸಿನಿಮಾ ಮೂಲಕ ಅಂತರರಾಷ್ಟ್ರೀಯ ಸಿನಿ ವೇದಿಕೆಗೆ ಕಾಲಿಡುತ್ತಿದ್ದಾರೆ.
ದಿಶಾ ಪಟಾನಿ, ಆಸ್ಕರ್ ಪ್ರಶಸ್ತಿ ವಿಜೇತ ನಟ ಕೆವಿನ್ ಸ್ಪೇಸಿ ನಿರ್ದೇಶನದ ‘Hooligards Saga: The Portal of Force’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ಬಗ್ಗೆ ಮಾತನಾಡಿರುವ ದಿಶಾ, ಕೆವಿನ್ ಸ್ಪೇಸಿ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಕೆವಿನ್ ಸ್ಪೇಸಿ ಅದ್ಭುತ ನಿರ್ದೇಶಕ. ಅವರು ನಟರಿಗೆ ಸಾಕಷ್ಟು ಸ್ವಾತಂತ್ರ್ಯ ಕೊಡುತ್ತಾರೆ. ಪ್ರತಿಯೊಂದು ಸೀನ್‌ಗೂ ನಮ್ಮ ಭಾವನೆಗಳನ್ನು ಹೇಗೆ ತೋರಿಸಬೇಕು ಎಂದು ಚರ್ಚೆ ಮಾಡುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ್ದು ನನಗೆ ಹೊಸ ಅನುಭವ ಎಂದು ಹೇಳಿದ್ದಾರೆ.
ಹಾಲಿವುಡ್‌ನಲ್ಲಿ ಅವಕಾಶ ಪಡೆಯುವುದು ಸುಲಭವಲ್ಲ. ಭಾರತದಲ್ಲೇ ಕುಳಿತು ಹಾಲಿವುಡ್‌ನಲ್ಲಿ ಪಾತ್ರ ಸಿಗುತ್ತದೆ ಎಂದು ನಿರೀಕ್ಷೆ ಮಾಡಬಾರದು. ಆಡಿಷನ್, ಏಜೆನ್ಸಿ, ವೀಸಾ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ದಾಟಬೇಕು. ಅಲ್ಲಿಗೆ ಹೋಗಿ, ಅಲ್ಲೇ ಇದ್ದು ಪ್ರಯತ್ನ ಮಾಡಿದರೆ ಮಾತ್ರ ಅವಕಾಶಗಳು ಹೆಚ್ಚಾಗುತ್ತವೆ. ಇನ್ನು ಹಾಲಿವುಡ್‌ನಲ್ಲಿ ಆಡಿಷನ್ ಪ್ರಕ್ರಿಯೆ ತುಂಬಾ ವೃತ್ತಿಪರವಾಗಿರುತ್ತದೆ. ಕೆಲವೊಮ್ಮೆ ನಿಮ್ಮ ಹಿಂದಿನ ಕೆಲಸ ನೋಡಿ ಅವಕಾಶ ಸಿಗಬಹುದು. ಆದರೆ, ಹೆಚ್ಚಿನ ಪಾತ್ರಗಳಿಗೆ ಆಡಿಷನ್ ಕಡ್ಡಾಯವಾಗಿರುತ್ತದೆ ಎಂದು ದಿಶಾ ಹೇಳಿದ್ದಾರೆ. ಇದನ್ನೂ ಓದಿ; ಮೈಸೂರಿನ ನೆಚ್ಚಿನ ತೋಟದಲ್ಲೇ ಎಸ್. ಜಾನಕಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ
ಈ ಸಿನಿಮಾದ ಮೂಲಕ ದಿಶಾ ಪಟಾನಿ ಜಾಗತಿಕ ಸಿನಿ ಪ್ರೇಕ್ಷಕರ ಮುಂದೆ ತಮ್ಮ ಪ್ರತಿಭೆ ತೋರಿಸಲು ಸಜ್ಜಾಗಿದ್ದಾರೆ. ಹಾಲಿವುಡ್‌ನಲ್ಲಿ ಅವರ ಮೊದಲ ಸಿನಿಮಾ ಯಾವ ಮಟ್ಟಿಗೆ ಸದ್ದು ಮಾಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ; ಜಾನಕಿ ಅಮ್ಮ ಮೊದಲು, ಕೊನೆಯ ಹಾಡು ಹಾಡಿದ್ದು, ಗಾಯನ ನಿಲ್ಲಿಸಿದ್ದು ಮೈಸೂರಿನಲ್ಲೇ!
