ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣಾ (Karnataka MLC Polls) ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ನ ಐವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್‌ನ ಗೋವಿಂದರಾಜು ಸೋಲನುಭವಿಸಿದ್ದಾರೆ.
ಕಾಂಗ್ರೆಸ್ – ಗೆದ್ದ ಅಭ್ಯರ್ಥಿಗಳು
* ಬಿ.ಕೆ.ಹರಿಪ್ರಸಾದ್: ಪಡೆದ ಮತಗಳು 30
* ತಿಪ್ಪಣ್ಣಪ್ಪ ಕಮಕನೂರು: 30 ಮತ
* ಪಿ.ವಿ.ಮೋಹನ್: 29 ಮತ
* ಬಿ.ಎಸ್.ಶಿವಣ್ಣ: 30 ಮತ
* ವಿನಯ್ ಕಾರ್ತಿಕ್ (5ನೇ ಅಭ್ಯರ್ಥಿ): 32 ಮತ
ಬಿಜೆಪಿ – ಗೆದ್ದ ಅಭ್ಯರ್ಥಿಗಳು
* ಆರ್.ರಘು: 29 ಮತಗಳು
* ಲಿಂಗರಾಜು ಪಾಟೀಲ್: 27 ಮತ
ಜೆಡಿಎಸ್ – ಸೋತ ಮೈತ್ರಿ ಅಭ್ಯರ್ಥಿ
* ಗೋವಿಂದರಾಜು: ಪಡೆದ ಮತಗಳು 14
222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 11 ಹೆಚ್ಚುವರಿ ಮತಗಳು ಸಿಕ್ಕಿವೆ. ಬಿಜೆಪಿಯ 7 ಮತ್ತು ಜೆಡಿಎಸ್‌ನ 4 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ.
ಕ್ರಾಸ್ ವೋಟಿಂಗ್ ಪರಿಣಾಮ ಬಿಜೆಪಿಯ ಲಿಂಗರಾಜು ಪಾಟೀಲ್ ಗೆಲುವಿನ ಕೋಟಾ ತಲುಪಿರಲಿಲ್ಲ. ಅಭ್ಯರ್ಥಿ ಗೆಲ್ಲಲು 27.63 ಮತ ಪಡೆಯಬೇಕು. ಆದರೆ, ಲಿಂಗರಾಜ ಪಾಟೀಲ್ 27 ಮತಗಳನ್ನು ಪಡೆದಿದ್ದರು. ಆದರೆ, ಮೈತ್ರಿ ಅಭ್ಯರ್ಥಿಯಾಗಿ ಸೋತ ಜೆಡಿಎಸ್‌ನ ಗೋವಿಂದರಾಜು 14 ಮತ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಎಲಿಮಿನೇಷನ್ ರೌಂಡ್‌ನಲ್ಲಿ ಲಿಂಗರಾಜು ಪಾಟೀಲ್‌ಗೆ ಗೆಲುವು ಸಾಧಿಸಿದ್ದಾರೆ.
