– ವಿಜಯಪುರ, ಬಾಗಲಕೋಟೆಗೆ ಭೇಟಿ ನೀಡಲಿರುವ ಜೆಡಿಎಸ್ ತಂಡ
ಬೆಂಗಳೂರು: ರಾಜ್ಯದಲ್ಲಿ 2026ರ ಮುಂಗಾರು (Monsoon Rain) ವೈಪರೀತ್ಯದಿಂದ ಒಂದೆಡೆ ಭಾರಿ ಮಳೆ-ಪ್ರವಾಹದಿಂದ ಅಪಾರ ಹಾನಿಯಾಗಿದ್ದರೆ, ಮತ್ತೊಂದೆಡೆ ಶೇ.40ರಿಂದ 43ರಷ್ಟು ಮಳೆ ಕೊರತೆಯಿಂದ ಬರಗಾಲದ (Drought) ಛಾಯೆ ಆವರಿಸಿದೆ. ಈ ಹಿನ್ನೆಲೆ ನಾಳೆಯಿಂದ (ಜು.13) ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಿಖಿಲ್, ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ನೆಲವನ್ನೇ ನಂಬಿರುವ ಅನ್ನದಾತ ಕಣ್ಣೀರು ಸುರಿಸುತ್ತಿರುವುದು ನಮ್ಮ ಹೃದಯವನ್ನು ಕಲಕಿದೆ. ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜನತಾದಳ (ಜಾತ್ಯತೀತ) ಪಕ್ಷದಿಂದ ವಿಶೇಷ ಅಧ್ಯಯನ ತಂಡಗಳನ್ನು ರಚಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಅರೆಸ್ಟ್
ನಿಖಿಲ್ ಕುಮಾರಸ್ವಾಮಿ ಜುಲೈ 13ರಿಂದ 15ರವರೆಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಜುಲೈ 14ರಂದು ವಿಜಯಪುರ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿಯೇ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಂತರ ಜುಲೈ 15ರಂದು ಬಾಗಲಕೋಟೆ ಬಾದಾಮಿಯಲ್ಲಿ ರೈತರನ್ನು ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: Twisha Sharma Case: ನೇಣು ಬಿಗಿದುಕೊಳ್ಳಲು ಜಿಮ್ ಬೆಲ್ಟ್ ಬಳಸಿದ್ದ ತ್ವಿಷಾ? – ಏಮ್ಸ್ ವರದಿಯಲ್ಲೇನಿದೆ?
ನಮ್ಮ ತಂಡಗಳು ನೆರೆ ಹಾಗೂ ಬರ ಪೀಡಿತ ಪ್ರದೇಶಗಳಿಗೆ ನೇರವಾಗಿ ಭೇಟಿ ನೀಡಿ, ಸಂತ್ರಸ್ತ ರೈತ ಕುಟುಂಬಗಳನ್ನು ಸಂಪರ್ಕಿಸಿ ಅವರ ಸಂಕಷ್ಟಗಳನ್ನು ಆಲಿಸಲಿವೆ. ರೈತರಿಗೆ ಅರ್ಹ ಪರಿಹಾರ ಸಿಗುವವರೆಗೂ ನಾವು ಹೋರಾಡಲಿದ್ದೇವೆ ಎಂದು ನಿಖಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಜಾನಕಿಯವರ ಹೆಸರು ಅಜರಾಮರವಾಗಿಸುವ ಕೆಲಸ ಮಾಡಬೇಕು: ಡಿಕೆಶಿ
ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಅಧ್ಯಯನ ತಂಡದ ಅಧ್ಯಕ್ಷರಾದ ಬಂಡೆಪ್ಪ ಕಾಶಂಪೂರ್, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಶಾಸಕರಾದ ಶರಣಗೌಡ ಕಂದಕೂರ್, ಭೀಮನಗೌಡ ಬಸನಗೌಡ ಪಾಟೀಲ್, ಕೆ. ನೇಮಿರಾಜ್ ನಾಯ್ಡು, ಶ್ರೀಮತಿ ಕರೆಮ್ಮ ನಾಯ್ಡು, ರಾಜಾ ವೆಂಕಟಪ್ಪ ನಾಯಕ್, ದೊಡ್ಡಪ್ಪಗೌಡ ಪಾಟೀಲ್, ಸೋಮನಗೌಡ ಪಾಟೀಲ್ ಸೇರಿ ಒಟ್ಟು 21 ಜನರ ತಂಡ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: Bengaluru | ಶೌಚಕ್ಕೆ ಹೋಗಬೇಕೆಂದು ಒಂಟಿ ಮಹಿಳೆ ಮನೆಗೆ ನುಗ್ಗಿದ್ದ ಡೆಲಿವರಿ ಬಾಯ್ ಅರೆಸ್ಟ್
