ಬೆಂಗಳೂರು: ಗಾಯಕಿ ಎಸ್. ಜಾನಕಿಯವರ (S.Janaki) ಹೆಸರು ಅಜರಾಮರವಾಗಿಸುವ ಕೆಲಸ ಮಾಡಬೇಕು. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.
ನಗರದಲ್ಲಿ (Bengaluru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಗಾಯಕಿ ಜಾನಕಿಯವರ ನಿಧನದ ವಿಚಾರವಾಗಿ ಪ್ರತಿಕ್ರಿಯಿಸಿದರು. ಎಸ್.ಜಾನಕಿಯವರು 50 ವರ್ಷಗಳ ಕಾಲ ಸಂಗೀತ ಸೇವೆ ಮಾಡಿದ್ದಾರೆ. ಸುಮಾರು 40 ಸಾವಿರ ಹಾಡುಗಳಿಗೆ ಅವರು ಧ್ವನಿ ನೀಡಿದ್ದಾರೆ ಎಂದರು. ಇದನ್ನೂ ಓದಿ: ಸೂರ್ಯ, ಚಂದ್ರ ಇರೋವರೆಗೂ ಜಾನಕಿ ಅಮ್ಮ ಶಾಶ್ವತ – ವಿಜಯ ಪ್ರಕಾಶ್ ಭಾವುಕ
ಅವರ ಕುಟುಂಬಸ್ಥರಿಗೆ ಚೆನ್ನೈಗೆ ಪಾರ್ಥಿವ ಶರೀರ ಕೊಂಡೊಯ್ಯುವುದಾದರೆ ವ್ಯವಸ್ಥೆ ಮಾಡಿ ಕೊಡುತ್ತೇನೆ ಎಂದೆ. ಆದರೆ ಅವರ ಕುಟುಂಬದವರು ಇಲ್ಲ, ನಮ್ಮ ಅಜ್ಜಿ ಆಸೆ ಮೈಸೂರಿನಲ್ಲೇ ಮಾಡಬೇಕು ಎಂದರು. ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಕಲಬುರಗಿಗೆ ಹೊರಟಿದ್ದರು. ಅವರಿಗೂ ಮನವಿ ಮಾಡಿ ಅಲ್ಲೇ ಇರಲು ಹೇಳಿದ್ದೇನೆ. ಅವರಿಗೆ ಅಂತಿಮ ಗೌರವ ಸಲ್ಲಿಸುವ ವ್ಯವಸ್ಥೆ ಮಾಡಿದ್ದೇವೆ. ನಾನು ಮೈಸೂರಿಗೆ ಹೋಗಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ನೋಡಿಕೊಳ್ತಾರೆ ಎಂದರು. ಇದನ್ನೂ ಓದಿ: ಜಾನಕಿ ಅಮ್ಮನ ನೆನಪಿಗಾಗಿ ಮೈಸೂರು ವಿವಿಯಲ್ಲಿ ಸಂಗೀತ ಅಧ್ಯಯನ ಪೀಠ ತೆರೆಯಬೇಕು – ಸರ್ಕಾರಕ್ಕೆ ಜಯಮಾಲ ಮನವಿ
