ಚಿಕ್ಕಮಗಳೂರು: ಭಾರೀ ಗಾಳಿ ಮಳೆಯಿಂದ (Rain) ಶೃಂಗೇರಿ ತಾಲೂಕಿನ ಹುಲುಗಾರುಬೈಲ್ ಬಳಿ ರಸ್ತೆಗೆ ಬೃಹತ್ ಮರವೊಂದು ಬಿದ್ದಿದೆ. ಪರಿಣಾಮ ಸಿರಿಮನೆ ಫಾಲ್ಸ್‌ಗೆ (Sirimane Falls) ತೆರಳುವ ಮಾರ್ಗ ಬಂದ್ ಆಗಿದೆ.
ಮರ ಬಿದ್ದಿದ್ದರಿಂದ ಸುಮಾರು ಎರಡು ಗಂಟೆಯಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಭಾನುವಾರ ಆಗಿರುವುದರಿಂದ ಫಾಲ್ಸ್‌ಗೆ ತೆರಳಲು ಪ್ರವಾಸಿಗರು ಬಂದಿದ್ದು, ಪರದಾಡುತ್ತಿದ್ದಾರೆ. ಸ್ಥಳೀಯರು ಮರ ತೆರವುಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಮುಳ್ಳಯ್ಯನಗಿರಿಯಲ್ಲಿ ನಿರಂತರ ಮಳೆಯಿಂದ ಗುಡ್ಡ ಕುಸಿತ – ಸ್ಥಳೀಯರಿಗೆ ಜಿಲ್ಲಾಡಳಿತ ಎಚ್ಚರಿಕೆ
ಮಳೆಯಿಂದಾಗಿ ಗ್ರಾಮದ ಸುತ್ತಮುತ್ತ ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ
ನಿರಂತರವಾಗಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಶೃಂಗೇರಿಯಲ್ಲಿ ಅಪಾಯದ ಮಟ್ಟ ಮೀರಿ ತುಂಗಾ ನದಿ (Tunga River) ಹರಯುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಳೆ ಕೊರತೆ ಅನುಭವಿಸುತ್ತಿದ್ದ ಮಲೆನಾಡಲ್ಲಿ 2 ದಿನದಲ್ಲಿ ಚಿತ್ರಣವೇ ಬದಲಾಗಿದೆ. ಇದನ್ನೂ ಓದಿ: ಬೆಳ್ತಂಗಡಿಯ ಮುಂಡಾಜೆಯಲ್ಲಿ ದಾಖಲೆಯ 348.5 ಮಿ.ಮೀ ಮಳೆ – ಕರ್ನಾಟಕದಲ್ಲಿ ಎಲ್ಲಿ ಎಷ್ಟು ಮಳೆ?
