ಹಾವೇರಿ: ಖ್ಯಾತ ಬಹುಭಾಷಾ ಗಾಯಕಿ ಎಸ್.ಜಾನಕಿ (S Janaki) ಅವರು ದೈಹಿಕವಾಗಿ ಅವರು ಇಂದು ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಹಾಡುಗಳು ಮತ್ತು ಸಂಗೀತದ ಮೂಲಕ ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ರಾಜ್ಯ ಸರ್ಕಾರ ಮೈಸೂರಿನಲ್ಲಿ ಎಸ್. ಜಾನಕಿ ಅವರ ನೆನಪಿನಲ್ಲಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಸಲಹೆ ನೀಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಜಾನಕಿ ಅವರು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸತತವಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಅವರು ಸಂಗೀತ ಸೇವೆ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿದಂತೆ ಬರೋಬ್ಬರಿ 17 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಅವರು, ಪ್ರತಿಯೊಂದು ಹಾಡಿನಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರು ಹಾಡಿದ ಎಲ್ಲಾ ಹಾಡುಗಳು ಜನಪ್ರಿಯವಾಗಿವೆ ಎಂದು ಅವರ ಸಾಧನೆಯನ್ನು ಸ್ಮರಿಸಿದರು. ಇದನ್ನೂ ಓದಿ: ಜಾನಕಿಯವರ ಹೆಸರು ಅಜರಾಮರವಾಗಿಸುವ ಕೆಲಸ ಮಾಡಬೇಕು: ಡಿಕೆಶಿ
ಧ್ವನಿಯ ಏರಿಳಿತ ಅವರ ವಿಶಿಷ್ಟ ಶಕ್ತಿ:
ಎಸ್. ಜಾನಕಿ ಅವರ ಧ್ವನಿಯ ಬದಲಾವಣೆ ಅಥವಾ ಮಾಡ್ಯುಲೇಶನ್ ಅತ್ಯಂತ ವಿಶಿಷ್ಟವಾಗಿತ್ತು. ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ವಯೋವೃದ್ಧರ ಧ್ವನಿಯವರೆಗೂ ಎಲ್ಲ ತರಹದ ಹಾಡುಗಳನ್ನು ಹಾಡುವ ಅದ್ಭುತ ಶಕ್ತಿ ಅವರಿಗೆ ಒಲಿದಿತ್ತು. ಅವರು ಸಾಕ್ಷಾತ್ ಸರಸ್ವತಿಯ ಪ್ರತಿರೂಪದಂತಿದ್ದರು. ದೈಹಿಕವಾಗಿ ಅವರು ಇಂದು ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಹಾಡುಗಳು ಮತ್ತು ಸಂಗೀತದ ಮೂಲಕ ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ಇದನ್ನೂ ಓದಿ: ಜಾನಕಿ ಅಮ್ಮ ಮೊದಲು, ಕೊನೆಯ ಹಾಡು ಹಾಡಿದ್ದು, ಗಾಯನ ನಿಲ್ಲಿಸಿದ್ದು ಮೈಸೂರಿನಲ್ಲೇ!
ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ:
ಎಸ್. ಜಾನಕಿ ಅವರಿಗೆ ಮೈಸೂರಿನ ಬಗ್ಗೆ ಅಪಾರವಾದ ಒಲವಿತ್ತು. ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಇಚ್ಛೆ ಹೊಂದಿದ್ದ ಅವರು, ತಮ್ಮ ಅಂತಿಮ ಸಂಸ್ಕಾರವೂ ಮೈಸೂರಿನಲ್ಲೇ ನಡೆಯಬೇಕೆಂದು ಬಯಸಿದ್ದರು. ಇದು ಅವರಿಗೆ ಕನ್ನಡಿಗರು ಮತ್ತು ಕರ್ನಾಟಕದ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸೂರ್ಯ, ಚಂದ್ರ ಇರೋವರೆಗೂ ಜಾನಕಿ ಅಮ್ಮ ಶಾಶ್ವತ – ವಿಜಯ ಪ್ರಕಾಶ್ ಭಾವುಕ
ಮೈಸೂರಿನಲ್ಲಿ ಎಸ್. ಜಾನಕಿ ಅವರ ನೆನಪಿನಲ್ಲಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು. ಅವರು ಹಾಡಿರುವ ವಿವಿಧ ಪ್ರಕಾರದ ಹಾಡುಗಳ ಸಂಗ್ರಹ, ಅವರು ಹಾಡಿದ ರೀತಿಗಳ ಬಗ್ಗೆ ಸಂಶೋಧನೆ ನಡೆಸಲು ಮತ್ತು ಸಂಗೀತ ಕಲಿಯುವ ಆಸಕ್ತಿಯುಳ್ಳ ಯುವ ಪ್ರತಿಭೆಗಳಿಗೆ ತರಬೇತಿ ಹಾಗೂ ಸ್ಫೂರ್ತಿ ನೀಡುವಂತಹ ವ್ಯವಸ್ಥೆಯನ್ನು ಆ ಸ್ಮಾರಕದಲ್ಲಿ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಇದನ್ನೂ ಓದಿ: ಮಗನ ಅಗಲಿಕೆಯ ನೋವಿನಲ್ಲಿದ್ರಾ ಜಾನಕಮ್ಮ? – ಬದುಕಿನ ಕೊನೆಯ ದಿನಗಳಲ್ಲಿ ಹೇಳಿದ ಮನದಾಳದ ಮಾತುಗಳು
ದಸರಾದಲ್ಲಿ ಕಂಬಳ ಸಮಿತಿ ತೀರ್ಮಾನ:
ಇದೇ ವೇಳೆ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ದಸರಾದಲ್ಲಿ ಕಂಬಳ ಆಯೋಜನೆ ಮಾಡುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವುದು ಸಹಜ. ಆದರೆ, ಈ ಬಗ್ಗೆ ಅಂತಿಮ ನಿರ್ಧಾರವನ್ನು ಮೈಸೂರು ದಸರಾ ಸಮಿತಿಯೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಾನಕಿ ಅಮ್ಮನ ನೆನಪಿಗಾಗಿ ಮೈಸೂರು ವಿವಿಯಲ್ಲಿ ಸಂಗೀತ ಅಧ್ಯಯನ ಪೀಠ ತೆರೆಯಬೇಕು – ಸರ್ಕಾರಕ್ಕೆ ಜಯಮಾಲ ಮನವಿ
