ನಾಗತಿಹಳ್ಳಿ ಚಂದ್ರಶೇಖರ್(Nagathihalli Chandrashekhar) ಮತ್ತು ಮನೋ ಮೂರ್ತಿ(Mano Murthy) ಅವರ ಜೋಡಿ ಕನ್ನಡ ಸಿನಿಪ್ರೇಮಿಗಳ ಮನದಲ್ಲಿ ಸದಾ ವಿಶೇಷ ಸ್ಥಾನ ಪಡೆದಿದೆ. ಅಮೆರಿಕಾ ಅಮೆರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ ಮತ್ತು ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಹಲವು ಚಿತ್ರಗಳ ಮೂಲಕ ಈ ಜೋಡಿ ನೆನಪಿನಲ್ಲಿ ಉಳಿಯುವ ಸಂಗೀತವನ್ನು ನೀಡಿದೆ.
ಈಗ ಆ ಪ್ರಿಯ ಜೋಡಿ ಮತ್ತೆ ಅಮೆರಿಕಾ ಅಮೆರಿಕಾ 2(America America 2) ಮೂಲಕ ಒಂದಾಗುತ್ತಿದೆ. ‘ಫ್ರೆಂಡ್ಶಿಪ್ ಡೇ’ಯಾದ ಆಗಸ್ಟ್ 2ರಂದು ತಮ್ಮ ಸ್ನೇಹದ ನೆನಪನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಅವರು ವಿಶೇಷ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕಾ ಅಮೆರಿಕಾ 2 ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಮನೋ ಮೂರ್ತಿ ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಗೌರವದ ಬಗ್ಗೆ ಉಪದೇಶ ನೀಡುವ ಮೊದಲು ತಮ್ಮ ಹೇಳಿಕೆ ನೆನಪಿಸಿಕೊಳ್ಳಬೇಕು – ಕಂಗನಾ ರಣಾವತ್ ವಿರುದ್ಧ ರಮ್ಯಾ ಕಿಡಿ

ಸ್ನೇಹ ಮತ್ತು ಸೃಜನಶೀಲ ಸಹಯೋಗಕ್ಕೆ ಗೌರವ ಸಲ್ಲಿಸುವಂತೆ ಈ ಪ್ರಕಟಣೆ ಹೊರಬಿದ್ದಿದೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಮತ್ತು ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
