ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆ (Punjab Assembly Elections) ಹಿನ್ನೆಲೆ ಬಿಜೆಪಿ (BJP), ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಿಸಿವೆ.
ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಪಕ್ಷ ಮೈತ್ರಿಕೂಟದಿಂದ ಹೊರಬಂದ ಆರು ವರ್ಷಗಳ ನಂತರ, ಮುಂಬರುವ ಪಂಜಾಬ್ ಚುನಾವಣೆಗೆ ಎರಡೂ ಪಕ್ಷಗಳು ತಮ್ಮ ಮೈತ್ರಿಯನ್ನು ಘೋಷಿಸಿವೆ. ಗುರು ಪುರಬ್ ಸಂದರ್ಭದಲ್ಲಿ ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್, ಗೃಹ ಸಚಿವ ಅಮಿತ್ ಶಾ ಮತ್ತು ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಮೈತ್ರಿಕೂಟದ ಘೋಷಣೆ ಮಾಡಿದರು.
ಕಳೆದ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಹಳೆಯ ಮಿತ್ರಪಕ್ಷಗಳು ಮತ್ತೆ ಒಂದಾಗುವ ಬಗ್ಗೆ ಸಾಕಷ್ಟು ಊಹಾಪೋಹ ಕೇಳಿಬಂದಿತ್ತು. ಆ ಬೆನ್ನಲ್ಲೇ ಎರಡೂ ಪಕ್ಷಗಳು ಮೈತ್ರಿ ಘೋಷಿಸಿವೆ. ಇದನ್ನೂ ಓದಿ: 2ನೇ ಸುತ್ತಿನ ಮಾತುಕತೆಗೂ ಮುನ್ನವೇ ಸೀಟುಗಳ ಡಿಮ್ಯಾಂಡ್ 130ಕ್ಕೆ ಇಳಿಸಿದ ಕಾಂಗ್ರೆಸ್; ʻAʼ ವರ್ಗದ ಸ್ಥಾನ ಹೆಚ್ಚಿಸಲು ಪಟ್ಟು
ಎನ್ಡಿಎಯ ಹಳೆಯ ಮಿತ್ರ ಪಕ್ಷ ಅಕಾಲಿ ದಳ ಈಗ ಎನ್ಡಿಎಗೆ ಮರಳಿರುವುದು ಬಹಳ ಸಂತೋಷದ ವಿಷಯ ಎಂದು ಅಮಿತ್ ಶಾ ಮೈತ್ರಿಕೂಟವನ್ನು ಘೋಷಿಸುತ್ತಾ ಹೇಳಿದರು. ಮೈತ್ರಿಕೂಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿಯೆಯನ್ನು ನೆನಪಿಸಿಕೊಂಡ ಅಮಿತ್ ಶಾ, ಅಭಿವೃದ್ಧಿಯ ಬಗ್ಗೆ ಪ್ರಧಾನಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಮೈತ್ರಿಕೂಟವನ್ನು ‘ಹಿಂದೂ-ಸಿಖ್ ಸಹೋದರತ್ವದ ಸಂಕೇತ’ ಎಂದು ಕರೆದಿದ್ದಾರೆ ಎಂದು ಹೇಳಿದರು.
ಬಿಜೆಪಿ ಮತ್ತು ಅಕಾಲಿ ದಳದ ನಡುವೆ ಆಳವಾದ ಬಾಂಧವ್ಯ ಇರುವಂತೆಯೇ ಬಾದಲ್ ಸಾಹಬ್ ನಮ್ಮೊಂದಿಗೆ ಆಳವಾದ, ದೀರ್ಘಕಾಲದ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಈ ಮೈತ್ರಿ ಪಂಜಾಬ್ನಲ್ಲಿ ಮಾತ್ರವಲ್ಲ, ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ಹಿಂದೂ-ಸಿಖ್ ಸಹೋದರತ್ವದ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾನು ನಂಬುತ್ತೇನೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಇದನ್ನೂ ಓದಿ: ಯುಪಿ ವಿಧಾನಸಭೆ ಚುನಾವಣೆ; ಕಾಂಗ್ರೆಸ್ಗೆ 54 ಕ್ಷೇತ್ರಗಳ ಪಟ್ಟಿ ನೀಡಿದ ಎಸ್ಪಿ
