ಬೆಂಗಳೂರು: ಪಬ್ನಲ್ಲಿ ಗಲಾಟೆ ಮಾಡಿಕೊಂಡಿದ್ದ ಯುಟ್ಯೂಬರ್ ಅಮುಕು ಡುಮುಕು ಮಂಜು (Amuku Dumuku Manja) ವಿರುದ್ಧ ಇದೀಗ ಮತ್ತೊಂದು ಎಫ್ಐಆರ್ (FIR) ದಾಖಲಾಗಿದೆ.
ಈ ಹಿಂದೆ ಪಬ್ನಲ್ಲಿ ಗಲಾಟೆ ಆಗಿತ್ತು. ಇದೀಗ ಪಕ್ಕದ ಮನೆಯವರ ಜೊತೆ ಗಲಾಟೆಯಾಗಿದೆ. ಪಕ್ಕದ ಮನೆಯ ವಿಕ್ರಂ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ (Yeshwantpur Police Station) ಅಮುಕು ಡುಮುಕು ಮಂಜ @ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಮಾತಾಡೋ ತಾಕತ್ ಇಲ್ಲ ಅಂದ್ರೆ ರಾಜೀನಾಮೆ ಕೊಡಿ – ನಯನಾ ಮೋಟಮ್ಮ ವಿರುದ್ಧ ಜೆಡಿಎಸ್ ಭೋಜೇಗೌಡ ಕಿಡಿ
ದೂರುದಾರ ವಿಕ್ರಂ ಹಾಗೂ ಮಂಜು ಅಕ್ಕಪಕ್ಕದ ಮನೆಯವರೇ ಆಗಿದ್ದು, ಇದೀಗ ಮಂಜುನಾಥ್ ತಮ್ಮ ಸಿದ್ದ ಎಂಬಾತನ ವಿಚಾರವಾಗಿ ಕಿರಿಕ್ ನಡೆದಿದೆ. ಈ ವೇಳೆ ಎರಡು ಮನೆಯವರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.
ಸದ್ಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಅವರು ಕೂಡ ವಿಕ್ರಂ ವಿರುದ್ಧ ದೂರು ನೀಡಿದ್ದು, ದೂರು-ಪ್ರತಿದೂರು ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.ಇದನ್ನೂ ಓದಿ: ಕೃತಕ ಪನ್ನೀರ್ ತಯಾರಿಕ ಘಟಕಗಳ ಮೇಲೆ ಬೃಹತ್ ದಾಳಿ – ಲೀಟರ್ಗಟ್ಟಲೇ ಪಾಮ್ ಆಯಿಲ್ ಚೆಲ್ಲಿದ ಅಧಿಕಾರಿಗಳು
