ಚಾಮರಾಜನಗರ: ಜೂಜಾಟ ನಿಲ್ಲಿಸಲು ಹೋದ ಪೊಲೀಸರ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಗಡಿಭಾಗವಾದ ತಮಿಳುನಾಡಿನ ಕೊಂಗಳ್ಳಿಬೆಟ್ಟ ಸಮೀಪ ನಡೆದಿದೆ.
ತಮಿಳುನಾಡಿನ ತಾಳವಾಡಿ ಪೊಲೀಸರನ್ನು ಸುತ್ತುವರೆದು ಜೂಜಾಟದ ತಂಡ ಹಲ್ಲೆ ಮಾಡಿದೆ. ಕಾರ್ತಿಕ ಮಾಸ ಹಿನ್ನೆಲೆ ಕೊಂಗಳ್ಳಿ ಬೆಟ್ಟಕ್ಕೆ ಅಪಾರ ಭಕ್ತರ ಸಮೂಹ ಬಂದಿತ್ತು. ಕೆಲವರು ದೇವಾಲಯ ಬಳಿ ಜೂಜಾಟ ಆಡುತ್ತಿದ್ದ ಮಾಹಿತಿ ಅರಿತು ಪೊಲೀಸರು ತೆರಳಿದ್ದರು. ಪೊಲೀಸರು ಬರುತ್ತಿದ್ದಂತೆ ಜೂಜಾಟದ ತಂಡ ಸುತ್ತುವರೆದು ಹಲ್ಲೆ ನಡೆಸಿದೆ.
ತಾಳವಾಡಿ ಪೊಲೀಸ್ ಠಾಣೆಯ ಪಿಎಸ್ಐ ವಾಸು, ಕಾನ್ಸ್ಟೇಬಲ್ಗಳಾದ ಮಾರ್ಟಿನ್, ರಮೇಶ್ ಎಂಬವರಿಗೆ ಗಾಯವಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ಜೂಜುಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಜೂಜುಕೋರರಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿ ತಾಳವಾಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆ ಸಂಬಂಧ ತಮಿಳುನಾಡಿನ ತಾಳವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
