– ಭದ್ರತೆ ಹಿಂಪಡೆದ ಕಾರಣದಿಂದಲೇ ರಾಜೀವ್ ಗಾಂಧಿ ಹತ್ಯೆಯಾಯ್ತಾ? – ವಿಪಕ್ಷ ನಾಯಕನ ಆರೋಪ ಏನು?
– ರಾಹುಲ್, ಪ್ರಿಯಾಂಕಾ ಜೊತೆ ಸೋನಿಯಾ ಗಾಂಧಿ ಭಾವನಾತ್ಮಕ ಮಾತುಕತೆ
– ಪುಸ್ತಕದಲ್ಲಿ ಹೇಳದ ಸಂಗತಿಗಳನ್ನ ಮಕ್ಕಳ ಮುಂದೆ ಬಿಚ್ಚಿಟ್ಟ ಸೋನಿಯಾ
ನವದೆಹಲಿ: Belonging: A Journey of Love ಪುಸ್ತಕ ಪ್ರಕಟವಾದ ಬಳಿಕ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ತಮ್ಮ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಭಾವನಾತ್ಮಕ ಮಾತುಕತೆ ನಡೆಸಿದ್ದಾರೆ. ಪುಸ್ತಕದಲ್ಲಿ ಉಲ್ಲೇಖಿಸದ ಎಷ್ಟೋ ಸಂಗತಿಗಳನ್ನು ಮಕ್ಕಳ ಮುಂದೆ ಸೋನಿಯಾ ಬಿಚ್ಚಿಟ್ಟಿದ್ದಾರೆ.
ತಾಯಿ ಮತ್ತು ಸಹೋದರಿ ಜೊತೆ ಕುಳಿತು ಮಾತನಾಡುತ್ತಿರುವ ವೀಡಿಯೊವನ್ನು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪುಸ್ತಕದಲ್ಲಿ ಉಲ್ಲೇಖಿಸದ ರಹಸ್ಯಗಳನ್ನು ಸೋನಿಯಾ ತಮ್ಮ ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿಗೆ ಸಾವರ್ಕರ್ ಮೊಮ್ಮಗನಿಂದ ಲೀಗಲ್ ನೋಟಿಸ್
ಮಾತುಕತೆ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಅದೊಂದು ಪ್ರಸ್ತಾವನೆ ಯೋಜನೆಯ ಪ್ರಕಾರ ನಡೆಯಲಿಲ್ಲ ಮತ್ತು ನನ್ನ 7ನೇ ಹುಟ್ಟುಹಬ್ಬಕ್ಕೂ ಅದು ಸಾಧ್ಯವಾಗಲಿಲ್ಲ. 2004ರ ನಿರ್ಧಾರದಿಂದ ಕೆಲವರಿಗೆ ನಿರಾಳತೆ, ಇನ್ನು ಕೆಲವರಿಗೆ ಸಂತೋಷವಾಗಿತ್ತು. ಅಪ್ಪನ ಭದ್ರತೆಯನ್ನು ಹಿಂತೆಗೆದುಕೊಳ್ಳುವುದರ ಹಿಂದೆ ಒಂದು ಉದ್ದೇಶವಿತ್ತು ಎಂದು ರಾಜೀವ್ ಗಾಂಧಿ (Rajiv Gandhi) ಹತ್ಯೆಗೆ ಈ ನಿರ್ಧಾರವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
The proposal didn’t go according to plan and neither did my seventh birthday.
The decision in 2004 gave some of us relief but others joy.
There was an intention behind withdrawing Papa’s security.
And even after 500+ pages there are some things Ma has left out of her book.
Priyanka and I sat down with our mother to talk through all of it. Going back to those memories brought back the joy, the laughter and even the pain we felt at the time.
Ma’s journey of Belonging has been full of enormous love and terrible tragedy, and she has met all of it with dignity and courage.
— Rahul Gandhi (@RahulGandhi) November 24, 2026
500ಕ್ಕೂ ಹೆಚ್ಚು ಪುಟಗಳ ಪುಸ್ತಕದಲ್ಲೂ ಅಮ್ಮ ಸೋನಿಯಾ ಗಾಂಧಿ ಕೆಲವು ವಿಚಾರಗಳನ್ನು ಉಲ್ಲೇಖಿಸಿಲ್ಲ. ಪ್ರಿಯಾಂಕಾ ಮತ್ತು ನಾನು ನಮ್ಮ ತಾಯಿಯೊಂದಿಗೆ ಕುಳಿತು ಎಲ್ಲವನ್ನೂ ಚರ್ಚಿಸಿದೆವು. ಆ ನೆನಪುಗಳಿಗೆ ಹಿಂತಿರುಗಿದಾಗ ಆ ಸಮಯದಲ್ಲಿ ನಾವು ಅನುಭವಿಸಿದ ಸಂತೋಷ, ನಗು ಮತ್ತು ನೋವು ಮತ್ತೆ ಮರುಕಳಿಸಿತು. ಅಮ್ಮನ ಸಂಬಂಧದ ಪ್ರಯಾಣವು ಅಗಾಧ ಪ್ರೀತಿ ಮತ್ತು ಭಯಾನಕ ದುರಂತದಿಂದ ತುಂಬಿತ್ತು. ಅವರು ಅದನ್ನೆಲ್ಲ ಘನತೆ ಮತ್ತು ಧೈರ್ಯದಿಂದ ಎದುರಿಸಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ತಾಯಿ ಸೋನಿಯಾ ಗಾಂಧಿ ಜೊತೆಗಿನ ಹಳೆಯ ನೆನಪುಗಳನ್ನು ರಾಹುಲ್, ಪ್ರಿಯಾಂಕಾ ಗಾಂಧಿ ಮೆಲುಕು ಹಾಕಿದರು.
