– ಮೈತ್ರಿ ಅಭ್ಯರ್ಥಿ ಗೋವಿಂದರಾಜುಗೆ ಹೀನಾಯ ಸೋಲು
– ಬಿಜೆಪಿ & ಜೆಡಿಎಸ್ ಮೈತ್ರಿಗೆ ಅಡ್ಡಮತದಾನದ ಶಾಪ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಜಯ ಸಾಧಿಸಿದ್ದಾರೆ. ಅಡ್ಡಮತದ ಪರಿಣಾಮ ಮೈತ್ರಿ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ.
ಚುನಾವಣೆಯಲ್ಲಿ ಒಂದು ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಫಲಿತಾಂಶದಲ್ಲಿ ಮೈತ್ರಿಗೆ ಶಾಕ್ ಆಗಿದೆ. ಅಡ್ಡಮತದಾನದ ಪರಿಣಾಮ ಮೈತ್ರಿ ಅಭ್ಯರ್ಥಿ ಗೋವಿಂದರಾಜು ಸೋಲು ಕಂಡಿದ್ದಾರೆ.
5ನೇ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನಯ್ ಕಾರ್ತಿಕ್‌ಗೆ 32 ಮತಗಳು ಬಿದ್ದಿವೆ. ನಿರೀಕ್ಷೆಗಿಂತ ಹೆಚ್ಚು ಮತಗಳು ಬಂದು ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಆದರೆ, ಗೋವಿಂದರಾಜುಗೆ ಕೇವಲ 14 ಮತಗಳು ಸಿಕ್ಕಿವೆ. ಬಿಜೆಪಿಯಿಂದ 7 ಮತ್ತು ಜೆಡಿಎಸ್‌ನಿಂದ 4 ಕ್ರಾಸ್ ವೋಟಿಂಗ್ ಆಗಿದೆ. ಈ ಎರಡೂ ಪಕ್ಷಗಳ ಮತ ಗಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
