ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ (West Bengal) ಮತಪಟ್ಟಿ ಪರಿಷ್ಕರಣೆ ವೇಳೆ 96 ಲಕ್ಷ ವೋಟ್‌ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಮಮತಾ ಬ್ಯಾನರ್ಜಿ (Mamata Banerjee) ಆರೋಪ ಮಾಡಿದ್ದಾರೆ. ಇದು ನಿಜವೇ ಆಗಿದ್ದರೆ, ಇದು ಎಷ್ಟರ ಮಟ್ಟಿಗೆ ಕಾನೂನಾತ್ಮಕವಾಗಿದೆ ಎಂಬುದನ್ನು ನೋಡಬೇಕು ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು . ಈ ವೇಳೆ, ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಹೇಗೆ ನಡೆದುಕೊಂಡಿದ್ದಾರೆ ಎಂದು ಗೊತ್ತಿದೆ. ಎಸ್‌ಐಆರ್ ವೇಳೆ 96 ಲಕ್ಷಕ್ಕೂ ಅಧಿಕ ವೋಟ್ ಡಿಲಿಟ್ ಮಾಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದರು. ಏನೇ ಆದರೂ ಬಿಜೆಪಿ ಸರ್ಕಾರ ರಚನೆ ಮಾಡಬೇಕು ಎಂದು ಹಾಗೆ ಮಾಡಿದ್ದಾರೆ. ಎಷ್ಟರ ಮಟ್ಟಿಗೆ ಇದು ಕಾನೂನಾತ್ಮಕವಾಗಿದೆ ಅನ್ನೋದನ್ನ ನೋಡಬೇಕು. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಉಮೇಶ್ ಮೇಟಿಗೆ ಗೆಲುವು – ಕಾಂಗ್ರೆಸ್‌ನಿಂದ ವಿಜಯೋತ್ಸವ
ದಾವಣಗೆರೆ ಲೀಡಿಂಗ್ ಕಡಿಮೆ ಇದೆ ಎಂಬ ವಿಚಾರವಾಗಿ, ಇಷ್ಟು ಬೇಗ ಹೇಳೋದು ಸಮಂಜಸ ಅಲ್ಲ. ಎರಡು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಸಮರ್ಥ್ ಈಗ ಮುನ್ನಡೆಯಲ್ಲಿ ಇದ್ದಾರೆ. ಕೊನೆವರೆಗೂ ಕಾದು ನೋಡಬೇಕು. ನನಗೆ ಬಂದ ಮಾಹಿತಿ ಪ್ರಕಾರ ಎರಡು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ.
ಪುದುಚೇರಿಯಲ್ಲಿ ಬಿಜೆಪಿ ಗೆಲ್ಲುತ್ತದೆ ಎನ್ನುತ್ತಿದ್ದರು, ಅದೇ ಥರ ಆಗಿದೆ. ತಮಿಳುನಾಡಿನಲ್ಲಿ ಡಿಎಂಕೆಗೆ ಹಿನ್ನಡೆ ಆಗಿದೆ. ವಿಜಯ್‌ಗೆ ಸಿನಿಮಾ ಅಲೆ ಇದೆ. ಅದು ಮತ ಆಗಿ ಕನ್ವರ್ಟ್ ಆಗುತ್ತಾ ಅಂತ ಹೇಳಲಾಗ್ತಿತ್ತು. ಈಗ ಅವರಿಗೆ ಮುನ್ನಡೆ ಸಿಗ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಫಲಿತಾಂಶ Live Updates












