ತಮಿಳುನಾಡಿನ (Tamil Nadu) ಸಿಎಂ ದಳಪತಿ ವಿಜಯ್ (Vijay) ಆಡಳಿತ ಕುರಿತಾದ ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ಬರುತ್ತಿವೆ. ಈಗಾಗಲೇ ವಿಜಯ್ ಅವರ ಪಕ್ಷವನ್ನು ಸೇರಿಕೊಳ್ಳುವುದಕ್ಕಾಗಿ ರಾಘವ್ ಲಾರೆನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಮತ್ತೋರ್ವ ಸ್ಟಾರ್ ನಟನ ಪತ್ನಿ ಕೂಡ ವಿಜಯ್ ಕುರಿತಾಗಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ರಜನಿಕಾಂತ್(Rajinikanth) ಕೂಡ ಹೊಸ ಪಕ್ಷ ಕಟ್ಟಬೇಕಿತ್ತು. ಕೊರೊನಾ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ಇದೇ ವೇಳೆ ರಜನಿಕಾಂತ್ ಜೊತೆ ಕೈ ಜೋಡಿಸುವುದಾಗಿ ರಾಘವ್ ಲಾರೆನ್ಸ್ ಕೂಡ ಹೇಳಿದ್ದರು. ರಜನಿ ಹೊಸ ಪಕ್ಷದ ಕನಸು ಕೈ ಬಿಟ್ಟ ಕಾರಣದಿಂದಾಗಿ ಲಾರೆನ್ಸ್ ಕೂಡ ಹಿಂದೆ ಸರಿದರು. ಇದೀಗ ಟಿವಿಕೆ (TVK) ಪಕ್ಷ ಸೇರಲು ರಾಘವ್ ನಿರ್ಧಾರ ಮಾಡಿದ್ದಾರೆ. ಇದೇ ಹೊತ್ತಲ್ಲಿ ರಜನಿ ಪತ್ನಿ ಕೂಡ ಲತಾ(Latha Rajinikanth) ಕೂಡ ವಿಜಯ್ ಕುರಿತಾಗಿ ಮಾತಾಡಿದ್ದಾರೆ. ಇದನ್ನೂ ಓದಿ: ಗೆಳೆಯನೊಂದಿಗೆ ಮದುವೆಯಾಗಿದ್ದು ನನ್ನ ಜೀವನದ ಅತ್ಯಂತ ಸಂತೋಷದ ಕೆಲಸ ಎಂದ ರಶ್ಮಿಕಾ

ಲತಾ ರಜನಿಕಾಂತ್ ಅವರು ಈಗಾಗಲೇ ಸಿಂಗಪ್ಪೆಣ್ ಎಂಬ ಸಂಘಟನೆಯನ್ನು ಶುರು ಮಾಡಿದ್ದಾರೆ. ಈ ಸಂಘಟನೆಯ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಮುಂದೊಂದು ದಿನ ಈ ಎಲ್ಲ ಶಕ್ತಿಯನ್ನು ವಿಜಯ್ ಗೆ ಅರ್ಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲತಾ ಅವರು ಕೂಟ ಟಿವಿಕೆ ಜೊತೆ ಇರುತ್ತಾರೆ ಅನ್ನುವ ಮಾತು ಕೇಳಿ ಬರುತ್ತಿದೆ.
ವಿಜಯ್ ಸರಕಾರದ ಬಗ್ಗೆ ಮೆಚ್ಚುಗೆ ಸೂಚಿಸಿರುವ ಲತಾ ರಜನಿಕಾಂತ್, ಇಂದಿನ ಪರಿಸ್ಥಿತಿಯಲ್ಲಿ ತಾವು ವಿಜಯ್ ಜೊತೆ ಇರುವುದಾಗಿ ಹೇಳಿದ್ದಾರೆ. ಲತಾ ಅವರು ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿವೆ.
