ಏಳು ವರ್ಷಗಳ ಕಾಲ ಪ್ರೀತಿಸಿ, ಕಳೆದ ಫೆಬ್ರವರಿಯಲ್ಲಿ ಮದುವೆಯಾದವರು ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ವಿಜಯ್ ದೇವರಕೊಂಡ. ಮದುವೆಯ ದಿನ ತಾಳಿ ಕಟ್ಟುವ ವೇಳೆ ಖುಷಿಯಿಂದ ಕಣ್ಣೀರು ಹಾಕಿದ್ದ ರಶ್ಮಿಕಾ, ತಮ್ಮ ಬಾಳ ಸಂಗಾತಿ ವಿಜಯ್‌ರನ್ನು(Vijay Deverakonda) ಎಷ್ಟು ಪ್ರೀತಿಸುತ್ತಾರೆ ಎಂಬುದು ಅವರ ವರ್ತನೆಯಲ್ಲೇ ಕಾಣಿಸುತ್ತಿತ್ತು. ಇದೀಗ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಕ್ಯೂ & ಎ (ಪ್ರಶ್ನೆ ಮತ್ತು ಉತ್ತರ) ಸಂವಾದ ನಡೆಸಿದ್ದ ರಶ್ಮಿಕಾ, ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆ ಉತ್ತರಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಈ ಪೈಕಿ ಒಂದು ಪ್ರಶ್ನೋತ್ತರ ವಿಶೇಷ ಗಮನ ಸೆಳೆದಿದೆ. ಅಭಿಮಾನಿಯೊಬ್ಬರು, ನೀವು ಮಾಡಿರುವ ಅತ್ಯಂತ ಸಂತೋಷದ ಕೆಲಸ ಯಾವುದು? ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ರಶ್ಮಿಕಾ, ನಾನು ಮಾಡಿರುವ ಅತ್ಯಂತ ಸಂತೋಷದ ಕೆಲಸ ಎಂದರೆ ನನ್ನ ಆತ್ಮೀಯ ಸ್ನೇಹಿತನೊಂದಿಗೆ ಮದುವೆಯಾಗಿರುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಿರಿಕ್ ಹುಡುಗಿಗೆ ಬಂಪರ್ ಆಫರ್
ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೆಲವೇ ತಿಂಗಳುಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಬಳಿಕ ಹಂಚಿಕೊಂಡಿದ್ದ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲೂ, ವಿಜಯ್ ತಮ್ಮ ಜೀವನದಲ್ಲಿ ಎಷ್ಟು ಮಹತ್ವದ ವ್ಯಕ್ತಿ ಎಂಬುದನ್ನು ರಶ್ಮಿಕಾ ಹೇಳಿಕೊಂಡಿದ್ದರು. ಈಗ ಮತ್ತೊಮ್ಮೆ ತಮ್ಮ ಪತಿಯ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ನಾನೇನು ‘ಗೇ’ ಅಲ್ಲ – ವೈರಲ್ ಗಾಸಿಪ್‌ಗೆ ಬ್ರೇಕ್ ಹಾಕಿದ ಮೌನಿ ರಾಯ್
