ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡ, ತಮಿಳು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸೋಕೆ ಅವಕಾಶ ಪಡೆದುಕೊಂಡಿದ್ದ ಸಂಯುಕ್ತಾ, ಇದೀಗ ಸ್ಟಾರ್ ನಟನ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ದೊಡ್ಡ ಅವಕಾಶವೊಂದು ಹುಡುಕಿಕೊಂಡು ಬಂದಿದೆ.
ತಮಿಳಿನಲ್ಲಿ ಸದ್ಯ ವಿಕ್ರಮ್ ಚಿಯಾನ್ ಅವರ ಸಿನಿಮಾ ಸೆಟ್ಟೇರುತ್ತಿದ್ದು, ಈ ಚಿತ್ರದಲ್ಲಿ ಸಂಯುಕ್ತ ನಟಿಸುತ್ತಿದ್ದಾರೆ. ಇದು ಚಿಯಾನ್ ಅವರ 63ನೇ ಸಿನಿಮಾವಾಗಿದೆ. ಆನಂದ್ ಶಂಕರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸುದ್ದಿ ಸಹಜವಾಗಿಯೇ ಸಂಯುಕ್ತಾ ಹೆಗ್ಡೆ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ರೀಲ್ಸ್, ಜಿಮ್ ನಲ್ಲಿ ಕಸರತ್ತು ಮಾಡಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿದ್ದ ಸಂಯುಕ್ತಾ ಇದೀಗ ಬಂಪರ್ ಆಫರ್ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಇದೊಂದು ಫ್ಯಾಮಿಲಿ ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ಕನ್ನಡದ ನಟಿಗೆ ಯಾವ ರೀತಿಯ ಪಾತ್ರ ಕೊಟ್ಟಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
