ಬಾಲಿವುಡ್ ನಟಿ ಮೌನಿ ರಾಯ್ (Mouni roy) ಮತ್ತು ದಿಶಾ ಪಟಾನಿ (Disha Patani) ನಡುವಿನ ಸಂಬಂಧದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Gossip) ಹರಿದಾಡುತ್ತಿದ್ದ ವದಂತಿಗಳಿಗೆ ಮೌನಿ ರಾಯ್ ಸ್ಪಷ್ಟನೆ ನೀಡಿದ್ದಾರೆ.
ನಾನೇನು ‘ಗೇ’ (Gay) ಅಲ್ಲ. ದಿಶಾ ಪಟಾನಿ ನನ್ನ ಆಪ್ತ ಸ್ನೇಹಿತೆ ಮಾತ್ರ ಎಂದು ಮೌನಿ ರಾಯ್ ಹೇಳಿದ್ದಾರೆ.
ಬಾಲಿವುಡ್ ಬೆಸ್ಟ್‌ಫ್ರೆಂಡ್ಸ್‌ಗಳೆಂದು ಕರೆಸಿಕೊಳ್ಳುವ ಪ್ರಮುಖ ತಾರೆಯರಲ್ಲಿ ನಟಿ ದಿಶಾ ಪಟಾನಿ ಮತ್ತು ಮೌನಿ ರಾಯ್ ಜೋಡಿ ಕೂಡ ಒಂದು. ಇವರಿಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವುದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಇವರಿಬ್ಬರ ಕ್ಲೋಸ್‌ನೆಸ್ ನೋಡಿ ನೆಟ್ಟಿಗರು ಇವರಿಬ್ಬರ ನಡುವೆ ಸ್ನೇಹಕ್ಕಿಂತ ಮೀರಿದ ಸಂಬಂಧವಿದೆ. ಇಬ್ಬರು ಪ್ರೀತಿಸುತ್ತಿದ್ದಾರೆ ಎಂದೆಲ್ಲಾ ಚರ್ಚೆಗಳು ನಡೆಯುತ್ತಲೇ ಇವೆ. ಇದಷ್ಟೇ ಅಲ್ಲ ಇತ್ತೀಚೆಗೆ ಮೌನಿ ರಾಯ್ ಪತಿ ಸೂರಜ್ ನಂಬಿಯಾರ್ ಜೊತೆ ಡಿವೋರ್ಸ್ ಪಡೆದು ಬೇರ್ಪಟ್ಟಿದ್ದಕ್ಕೆ ದಿಶಾ ಪಟಾನಿಯೇ ಕಾರಣ ಎಂಬ ಊಹಾಪೋಹಗಳು ಕೂಡ ಹರಿದಾಡಿದ್ದವು. ಆದರೆ ಈ ವದಂತಿಗಳಿಗೆಲ್ಲ ಮೌನಿ ರಾಯ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಇಂಡಸ್ಟ್ರಿಗೆ ಶಾಕ್ ಕೊಟ್ಟ ಸಲ್ಮಾನ್ ಖಾನ್ ಬಾಲ್ಡ್ ಲುಕ್
ಈ ಕುರಿತು ಪ್ರತಿಕ್ರಿಯಿಸಿ ಮೌನಿ, ದಿಶಾ ನನ್ನ ಒಳ್ಳೆಯ ಸ್ನೇಹಿತೆ. ಸುಖ-ದುಃಖದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಲ್ಲುವ ಗೆಳತಿ ಅಷ್ಟೇ. ಕೇವಲ ಫೋಟೋಗಳು ಅಥವಾ ವಿಡಿಯೋಗಳ ಆಧಾರದ ಮೇಲೆ ಸಂಬಂಧಗಳ ಬಗ್ಗೆ ನಿರ್ಧಾರಕ್ಕೆ ಬರಬಾರದು ಎಂದು ಅವರು ಹೇಳಿದ್ದಾರೆ.
ಇಂತಹ ಸ್ನೇಹವನ್ನು ತಪ್ಪಾಗಿ ಅರ್ಥೈಸಿ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದು ಮೌನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೌನಿ ರಾಯ್ ಮತ್ತು ದಿಶಾ ಪಟಾನಿ ಹಲವು ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದು, ವದಂತಿಗಳ ನಡುವೆಯೂ ತಮ್ಮ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ಮತ್ತೊಂದು ಮದುವೆಯಾದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಮಾಜಿ ಪತಿ
