ಮುಂಬೈ: ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಸಲ್ಮಾನ್ ಖಾನ್ (Salman Khan) ಹೊಸ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸಂಪೂರ್ಣ ತಲೆಕೂದಲು ತೆಗೆಸಿಕೊಂಡಿರುವ ಸಲ್ಮಾನ್ ಖಾನ್ ಬಾಲ್ಡ್ ಲುಕ್‌ನಲ್ಲಿ (Bald Look) ಕ್ಯಾಮೆರಾ ಮುಂದೆ ಪೋಸ್ ನೀಡಿದ್ದಾರೆ.
‘ಲಗಾನ್’ ಚಿತ್ರದ 25ನೇ ವರ್ಷದ ಸಂಭ್ರಮದ ಅಂಗವಾಗಿ ನಟ ಅಮೀರ್ ಖಾನ್ (Aamir Khan)ಬಾಲಿವುಡ್ ತಾರೆಯರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಹೊಸ ಲುಕ್‌ನಲ್ಲೇ ಆಗಮಿಸಿದ್ದರು. ಸಲ್ಮಾನ್ ಖಾನ್ ಅವರನ್ನು ಈ ಅವತಾರದಲ್ಲಿ ಕಂಡು ಖುದ್ದು ಅಮೀರ್ ಖಾನ್, ಕರೀನಾ ಕಪೂರ್ (Kareena Kapoor) ಸೇರಿದಂತೆ ಹಲವರು ಶಾಕ್ ಆಗಿದ್ದಾರೆ.ಇದನ್ನೂ ಓದಿ: ಮತ್ತೊಂದು ಮದುವೆಯಾದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಮಾಜಿ ಪತಿ
ಬಾಲ್ಡ್ ಲುಕ್ ಜೊತೆಗೆ ಸಾಕಷ್ಟು ತೂಕ ಇಳಿಸಿಕೊಂಡಿರುವ ಸಲ್ಮಾನ್ ಖಾನ್, ತಮ್ಮ ಸೂಪರ್ ಹಿಟ್ ‘ತೇರೆ ನಾಮ್’ ಚಿತ್ರದ ಲುಕ್ ಅನ್ನು ನೆನಪಿಸುವಂತೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ದೈತ್ಯಕಾಯ ಮತ್ತು ಫಿಟ್ ಬಾಡಿಗೆ ಹೆಸರುವಾಸಿಯಾಗಿರುವ ಸಲ್ಮಾನ್ ಖಾನ್, 60ನೇ ವಯಸ್ಸಿನಲ್ಲೂ ತಮ್ಮ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರ ಈ ಹೊಸ ಲುಕ್ ಮುಂಬರುವ ಸಿನಿಮಾಗಾಗಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ವಂಶಿ ನಿರ್ದೇಶನದ ಚಿತ್ರಕ್ಕಾಗಿ ಅವರು ಈ ರೀತಿಯ ಮೇಕ್‌ಓವರ್ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಇದನ್ನೂ ಓದಿ: ವಿಜಯ್, ಸಂಗೀತಾ ವಿಚ್ಛೇದನ ಅರ್ಜಿ ಇಂದು ವಿಚಾರಣೆ – ಪತ್ನಿ ಜೊತೆ ರಾಜಿ ಮಾಡ್ಕೊಳ್ತಾರಾ ದಳಪತಿ?
