– ಜೂ.19ಕ್ಕೆ ಮುಹೂರ್ತ ಫೈನಲ್
ವಾಷಿಂಗ್ಟನ್: ಕತಾರ್ (Qatar) ಮಧ್ಯಸ್ಥಿಕೆಯಲ್ಲಿ ಸುಮಾರು 17 ಗಂಟೆಗಳ ಮಾತುಕತೆ ಬಳಿಕ ಕೊನೆಗೂ ಅಮೆರಿಕ ಮತ್ತು ಇರಾನ್ ಸಂಘರ್ಷ (US-Iran Deal) ಕೊನೆಗೊಳಿಸಿ ಶಾಂತಿ ಒಪ್ಪಂದ ಮಾಡಿಕೊಂಡಿವೆ. ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲು ಶುಕ್ರವಾರಕ್ಕೆ (ಜೂ.19) ಮುಹೂರ್ತವನ್ನು ಉಭಯ ದೇಶಗಳು ಫೈನಲ್ ಮಾಡಿವೆ.
ಶಾಂತಿ ಒಪ್ಪಂದದ ಫೈನಲ್ ಡೀಲ್‌ಗೆ ಕತಾರ್ ಮಧ್ಯಸ್ಥಿಕೆ ವಹಿಸಿತ್ತು. ಇರಾನ್‌ನ ಟೆಹ್ರಾನ್‌ನಲ್ಲಿ ಸತತ ಸರಣಿ ಸಭೆಗಳು ನಡೆದವು. ಕತಾರ್‌ನಿಂದ ಸತತ 17 ಗಂಟೆಗಳ ಮಧ್ಯಸ್ಥಿಕೆ ಸಭೆ ನಡೆಯಿತು. ಬಳಿಕ ರಾಜತಾಂತ್ರಿಕ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಯಿತು. ಕೊನೆಗೆ ಟೆಹ್ರಾನ್‌ನಿಂದ ಕತಾರ್ ಪ್ರತಿನಿಧಿಗಳು ಹೊರಟರು. ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದ; ಕಚ್ಚಾ ತೈಲ ಬೆಲೆ ಭಾರಿ ಇಳಿಕೆ
ಅಂತಿಮ ಸಹಿಗೆ ಮುನ್ನ ಈ ವಾರ ದೋಹಾದಲ್ಲಿ ಎರಡೂ ದೇಶಗಳ ಪ್ರತಿನಿಧಿಗಳ ಸಿದ್ಧತಾ ಸಭೆ ನಡೆಯಲಿದೆ. ಈ ಸಭೆ ಬಳಿಕ ಸ್ವಿಜರ್ಲೆಂಡ್‌ನಲ್ಲಿ ಫೈನಲ್ ಡೀಲ್‌ಗೆ ಜೂ.19 ರಂದು ಅಧಿಕೃತವಾಗಿ ಸಹಿ ಹಾಕಲಾಗುವುದು.
ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣ ಮತ್ತು ಶಾಶ್ವತವಾಗಿ ಕೊನೆಗೊಳಿಸುವುದಾಗಿ ಘೋಷಿಸಲು ಅಮೆರಿಕ ಮತ್ತು ಇರಾನ್ ಒಪ್ಪಂದಕ್ಕೆ ಬಂದಿವೆ ಎಂದು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಸೋಮವಾರ ಮುಂಜಾನೆ ಘೋಷಿಸಿದ್ದರು. ಇದನ್ನೂ ಓದಿ: ಮತ್ತೊಂದು ‘ಪೆಟ್ರೋ ಡಾಲರ್’ ಒಪ್ಪಂದಕ್ಕೆ ಟ್ರಂಪ್ ಮಾಸ್ಟರ್ ಪ್ಲಾನ್- ಮಧ್ಯಪ್ರಾಚ್ಯದ 20% ಆದಾಯಕ್ಕೆ ಅಮೆರಿಕ ಬೇಡಿಕೆ!
