* ಚಿನ್ನ ದರ ಹೆಚ್ಚಳ – ಬೆಂಗಳೂರಲ್ಲಿ ದರ ಎಷ್ಟು?
* ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಾ?
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ (US Iran Wart) ಸಂಘರ್ಷ ಅಂತ್ಯಗೊಂಡು ಶಾಂತಿ ಒಪ್ಪಂದ ಘೋಷಣೆ ಬೆನ್ನಲ್ಲೇ ಕಚ್ಚಾ ತೈಲ (Crude OilP ಬೆಲೆಗಳಲ್ಲಿ ಇಳಿಕೆಯಾಗಿದೆ.
WTI ಕಚ್ಚಾ ತೈಲ ಇಂದು ಬ್ಯಾರೆಲ್‌ಗೆ ಸುಮಾರು 80 ಡಾಲರ್‌ಗೆ ಇಳಿದರೆ, ಬ್ರೆಂಟ್ ಕಚ್ಚಾ ತೈಲವು ಸುಮಾರು 4% ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 83.82 ಡಾಲರ್‌ಗೆ ತಲುಪಿದೆ. ಇದನ್ನೂ ಓದಿ: ಇರಾನ್ ಜೊತೆ ಶಾಂತಿ ಒಪ್ಪಂದ ಪೂರ್ಣ.. ಹಾರ್ಮುಜ್ ಜಲಸಂಧಿ ಓಪನ್: ಟ್ರಂಪ್ ಘೋಷಣೆ
ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದ ಘೋಷಿಸಿದ್ದು, ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಒಪ್ಪಿಕೊಂಡಿವೆ. ಹೀಗಾಗಿ, ಕಚ್ಚಾ ತೈಲ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಈ ಬೆಳವಣಿಗೆಯು ಜಾಗತಿಕ ಇಂಧನ ಪೂರೈಕೆಯಲ್ಲಿನ ಅಡಚಣೆಗಳ ಬಗೆಗಿದ್ದ ಕಳವಳ ನಿವಾರಣೆ ಮಾಡಿದೆ. ವಿಶ್ವಾದ್ಯಂತ ಇಂಧನ ಬೆಲೆಗಳು ಕಡಿಮೆಯಾಗುವ ಭರವಸೆಯನ್ನು ಹುಟ್ಟುಹಾಕಿದೆ.

ಪೆಟ್ರೋಲ್, ಡೀಸೆಲ್ ದರ ಇಳಿಯುತ್ತಾ?
ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿತ್ತು. ಇದರಿಂದ ಭಾರತದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಇತ್ತೀಚಿನ ತಿಂಗಳುಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಹೆಚ್ಚಿಸಿದ್ದವು. ಈಗ ತೈಲ ಬೆಲೆ ಇಳಿಕೆಯಾಗಿದ್ದು, ಭಾರತದ ಇಂಧನ ದರವೂ ಕಡಿಮೆಯಾಗುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯದಿಂದ ಬರುವ ಇಂಧನ ಪೂರೈಕೆಯ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿದೆ. ದೇಶದ ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದುಗಳ ಹೆಚ್ಚಿನ ಪಾಲು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತಿತ್ತು. ಯುದ್ಧದಿಂದ ತೈಲ ಆಮದಿನಲ್ಲೂ ವ್ಯತ್ಯಯವಾಗಿತ್ತು. ಈಗ ಕೊನೆಗಾಣಿಸಿ ಮಾರ್ಗವನ್ನು ಮತ್ತೆ ತೆರೆಯುವುದರಿಂದ ಪೂರೈಕೆಯಲ್ಲಿ ಸುಧಾರಣೆ ಆಗಬಹುದು. ಆಮದು ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಭಾರತಕ್ಕೆ ನೇರವಾಗಿ ಪ್ರಯೋಜನವಾಗಬಹುದು. ಇದನ್ನೂ ಓದಿ: ಇರಾನ್-ಅಮೆರಿಕಾ ಸಂಘರ್ಷ ಅಂತ್ಯ; 14 ಅಂಶಗಳ ಅಡಿ ಉಭಯ ರಾಷ್ಟ್ರಗಳ ಶಾಂತಿ ಒಪ್ಪಂದ
ಚಿನ್ನ ದರ ಏರಿಕೆ
ಯುಎಸ್-ಇರಾನ್ ಶಾಂತಿ ಒಪ್ಪಂದ ಘೋಷಣೆ ಬೆನ್ನಲ್ಲೇ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ. ಶುಕ್ರವಾರದಂದು ಪ್ರತಿ ಗ್ರಾಂಗೆ 12,863.27 ರೂಪಾಯಿ ಇದ್ದ ಚಿನ್ನದ ಬೆಲೆ ಈಗ 13,191.86 ರೂಪಾಯಿಗಳಿಗೆ ತಲುಪಿದೆ. 10 ಗ್ರಾಂ ಚಿನ್ನದ ದರ 1,31,917 ರೂಪಾಯಿಗೆ ತಲುಪಿದೆ.
ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶನಿವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 245 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,51,530 ರೂ. ತಲುಪಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 225 ರೂ. ಏರಿದ್ದು, ಹತ್ತು ಗ್ರಾಂಗೆ 1,38,900 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 184 ರೂ. ಏರಿಕೆಯಾಗಿ, ಹತ್ತು ಗ್ರಾಂಗೆ 1,13,650 ರೂ. ಗೆ ತಲುಪಿದೆ.
