– ಮೋದಿ ಮೌನವನ್ನು ಪ್ರಶ್ನಿಸಿ ವಾಗ್ದಾಳಿ
ನವದೆಹಲಿ: ಅಮೆರಿಕದ (America) ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಒಬ್ಬ ಕೋಲ್ಡ್ ಮರ್ಡರರ್ (Cold Murderer) ಎಂದು ಕಿಡಿಕಾರಿದ್ದಾರೆ.
ಒಮಾನ್ ಕರಾವಳಿಯ (Oman Coast) ಸಮೀಪ ಪಲಾವು ಧ್ವಜದ ಎಂಟಿ ಸೆಟ್ಟೆಬೆಲ್ಲೊ (Settebello) ತೈಲ ಟ್ಯಾಂಕರ್ ಮೇಲೆ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ಡೊನಾಲ್ಡ್ ಟ್ರಂಪ್ ಭಾರತೀಯರ ಜೀವಹಾನಿಗೆ ನೀವು ಉತ್ತರಿಸಲೇಬೇಕು. ನೀವು ಒಬ್ಬ ನಿರ್ದಯ ಹಾಗೂ ಕೋಲ್ಡ್ ಮರ್ಡರರ್ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೈಸೂರು ಪಬ್ ಅಗ್ನಿ ದುರಂತ: 175 ರೂ. ಆಫರ್, ಬೆಂಕಿ ಹರಡಲು ಒಳಾಂಗಣ ವಿನ್ಯಾಸವೇ ಕಾರಣ?
ಅದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿರುವ ಅವರು, ಭಾರತೀಯರ ಜೀವಹಾನಿಯಂತಹ ಗಂಭೀರ ವಿಷಯದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿದ್ದಾರೆ. ಮೂವರು ಭಾರತೀಯರು ಮೃತಪಟ್ಟಿದ್ದರೂ ಪ್ರಧಾನಿ ಮೋದಿ ಮೌನವಾಗಿರುವುದು ದುರದೃಷ್ಟಕರ. ಶೀಘ್ರದಲ್ಲೇ ಭಾರತಕ್ಕೆ ಬಲಿಷ್ಠ ನಾಯಕತ್ವ ದೊರೆಯಲಿದೆ. ಭಾರತೀಯರ ಜೀವಕ್ಕೆ ಹಾನಿ ಮಾಡಿದವರನ್ನು ಹೊಣೆಗಾರರನ್ನಾಗಿ ಮಾಡುವ ಸರ್ಕಾರ ದೇಶಕ್ಕೆ ಬೇಕಿದೆ. ಭಾರತದ ಹಿತಾಸಕ್ತಿ ಮತ್ತು ಭಾರತೀಯರ ಜೀವದ ವಿಚಾರದಲ್ಲಿ ಯಾವುದೇ ವಿದೇಶಿ ನಾಯಕರು ನಿರ್ಲಕ್ಷ್ಯವಾಗಿ ವರ್ತಿಸಲು ಅವಕಾಶ ನೀಡಬಾರದು. ದೇಶಕ್ಕೆ ಬಲಿಷ್ಠ ನಾಯಕತ್ವದ ಅಗತ್ಯವಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಆದಾಯದ ಮೂಲ ಯಾವುದು – 8 ಪ್ರಶ್ನೆ ಕೇಳಿ ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಪ್ರಶ್ನೆ
ಇದಕ್ಕೂ ಮೊದಲು ಟ್ರಂಪ್ ಅವರು ಮೋದಿ ಅವರನ್ನು ಭಾರತದ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಮಂತ್ರಿ ಎಂದು ಅಭಿನಂದಿಸಿದ ಹಿನ್ನೆಲೆಯಲ್ಲಿ ಮೋದಿ ಕೃತಜ್ಞತೆ ಸಲ್ಲಿಸಿದ್ದನ್ನು ಕೇಜ್ರಿವಾಲ್ ಟೀಕಿಸಿದ್ದರು. ಭಾರತೀಯ ನಾವಿಕರ ಸಾವಿನಂತಹ ಸೂಕ್ಷ್ಮ ಸಂದರ್ಭದಲ್ಲಿಯೂ ಪ್ರಧಾನಿ ಟ್ರಂಪ್‌ಗೆ ಧನ್ಯವಾದ ತಿಳಿಸಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಮಂದಿಗೆ ಗಾಯ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ ನಾಲ್ಕು ದಿನಗಳಲ್ಲಿ ಒಮಾನ್ ಕರಾವಳಿಯ ಬಳಿ ಭಾರತೀಯ ಸಿಬ್ಬಂದಿ ಇದ್ದ ಮೂರು ವಾಣಿಜ್ಯ ಹಡಗುಗಳು ಅಮೆರಿಕದ ಸೇನಾ ದಾಳಿಗೆ ಗುರಿಯಾಗಿವೆ. ಈ ದಾಳಿಯಲ್ಲಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕತಾರ್ ಮಧ್ಯಸ್ಥಿಕೆ.. 17 ಗಂಟೆಗಳ ಸಭೆ; ಯುಎಸ್-ಇರಾನ್ ಶಾಂತಿ ಒಪ್ಪಂದ ಹೇಗಾಯ್ತು?
