ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿರ್ಮಾಪಕ ವಿಜಯ್ ಜೊತೆ ನಿರ್ದೇಶಕ ಪ್ರಶಾಂತ್ ನೀಲ್ ಒಡನಾಟ ಆಳವಾದದ್ದು. ಕೆಜಿಎಫ್, ಕೆಜಿಎಫ್ 2, ಸಲಾರ್ ಚಿತ್ರಗಳಂಥಹ ಬಿಗ್ ಬಜೆಟ್ ಹಾಗೂ ಬಿಗ್ ಸಕ್ಸಸ್ ಸಿನಿಮಾಗಳನ್ನ ಈ ಜೋಡಿ ಕೊಟ್ಟಿದೆ. ಆದರೆ, ಸಲಾರ್ ಚಿತ್ರದ ಜೊತೆಯಲ್ಲೇ ಇವರ ಕಾಂಬೋ ಮುಗಿದುಹೋಯ್ತಾ ಅನ್ನೋ ಚರ್ಚೆಯೂ ಇತ್ತು. ಕಾರಣ ಸಲಾರ್ ಬಿಡುಗಡೆ ಬಳಿಕ ಇವರ ಜೋಡಿ ಬೇರೆ ಚಿತ್ರ ಘೋಷಿಸಿರಲಿಲ್ಲ. ಆದರೆ, ಇದೀಗ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಆಪ್ತ ಸಮಾಲೋಚನೆ ಮಾಡುತ್ತಿರುವ ಫೋಟೋ ರಿವೀಲ್ ಆಗಿದ್ದು, ವೈರಲ್ ಆಗತೊಡಗಿದೆ. ಈ ಹಿನ್ನೆಲೆ ಸಾಕಷ್ಟು ಗಾಸಿಪ್‌ಗಳು ಶುರುವಾಗಿದೆ.

`ಸಲಾರ್’ ಬಳಿಕ `ಸಲಾರ್ 2′ ತುರ್ತಾಗಿ ಘೋಷಣೆ ಆಗದ ಕಾರಣ `ಸಲಾರ್ 2′ ಡ್ರಾಪ್ ಎಂಬ ಮಾತು ಕೇಳಿಬಂತು. ಈ ಹಿಂದೆ `ಕೆಜಿಎಫ್ 3′ ಘೋಷಣೆಯಾಗಿದ್ದರೂ ಕೆಜಿಎಫ್‌ನ ಮೂವರು ಸೃಷ್ಟಿಕರ್ತರು ಅಂದರೆ ಯಶ್, ಪ್ರಶಾಂತ್, ವಿಜಯ್ ಕಿರಗಂದೂರ್ ಬೇರೆ ಬೇರೆ ದಿಕ್ಕಿನಲ್ಲಿ ಪ್ರಯಾಣ ಪ್ರಾರಂಭಿಸಿದ್ರು. ಹೀಗಾಗಿ ಇವೆರಡೂ ಘೋಷಣೆಯಾದ ಚಿತ್ರಗಳ ಸುಳಿವೇ ಇರಲಿಲ್ಲ. ಆದರೆ, ಈ ಭೇಟಿ ಹೊಸ ಹಿಂಟ್ ಕೊಟ್ಟಿದೆ.
ಕೆಲವರ ಚರ್ಚೆ ಪ್ರಕಾರ, ಸಲಾರ್-2 ಚಿತ್ರದ ಮಾತುಕತೆ ಎಂದೇ ಹೇಳುತ್ತಿದ್ದಾರೆ. ಆದರೆ, ಮತ್ತೆ ಕೆಲವರು ಕೆಜಿಎಫ್ 3 ಪ್ಲ್ಯಾನ್ ಇರಬಹುದು ಎಂದು ಉಹಿಸುತ್ತಿದ್ದಾರೆ. ಆದರೆ ಈ ನಡುವೆ ಸೀಕ್ವೆಲ್ ಚಿತ್ರಗಳ ಹಿಂದೆ ಓಡದೆ ಬೇರೆ ಸಿನಿಮಾ ಘೋಷಣೆಯಾದ್ರೆ ಅದು ಅಭಿಮಾನಿಗಳಿಗೆ ನಿಜಕ್ಕೂ ಸರ್ಪ್ರೈಸ್.
