ಕಠ್ಮಂಡು: ಆಗಸ್ಟ್ 26ರಂದು ಬೋಟೆಕೋಶಿ ನದಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ (Nepal Flash Flood) ಮೃತಪಟ್ಟವರ ಸ್ಮರಣಾರ್ಥ ನೇಪಾಳ ಸೋಮವಾರ ರಾಷ್ಟ್ರೀಯ ಶೋಕಾಚರಣೆ ದಿನವನ್ನು (National Mourning Day) ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಸರ್ಕಾರಿ ಕಚೇರಿಗಳು ಹಾಗೂ ವಿದೇಶಗಳಲ್ಲಿರುವ ನೇಪಾಳದ ರಾಯಭಾರ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು.
ನೇಪಾಳದ ಪ್ರಧಾನಮಂತ್ರಿ ಹಾಗೂ ಸಚಿವ ಸಂಪುಟ ಕಚೇರಿಯಲ್ಲಿ ಸೆ.3ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರವಾಹದಲ್ಲಿ ಮೃತಪಟ್ಟವರ ಗೌರವಾರ್ಥ ಸೆ.7ರಂದು ರಾಷ್ಟ್ರೀಯ ಶೋಕಾಚರಣೆ ನಡೆಸಲು ನಿರ್ಧರಿಸಲಾಗಿತ್ತು. ಇದನ್ನೂ ಓದಿ: ಸಮಾವೇಶಕ್ಕೆ ಕರೆಯೋದು, ಬಿಡೋದು ಆಯೋಜಕರಿಗೆ ಬಿಟ್ಟದ್ದು, ಅದು ನಮ್ಮ ತಂದೆಯ ಕಾರ್ಯಕ್ರಮ ಅಲ್ಲ: ಯತೀಂದ್ರ

ರಸುವಾ ಜಿಲ್ಲೆಯಲ್ಲಿ ಬೋಟೆಕೋಶಿ ನದಿಯಲ್ಲಿ ಉಂಟಾದ ಭಾರೀ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಜೀವಹಾನಿ ಸಂಭವಿಸಿದ್ದು, ಮನೆಗಳು, ರಸ್ತೆಗಳು, ಸೇತುವೆಗಳು, ಜಲವಿದ್ಯುತ್ ಯೋಜನೆಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. ಪ್ರವಾಹದ ಪರಿಣಾಮ ತ್ರಿಶೂಲಿ ನದಿಯ ಕೆಳಭಾಗದಲ್ಲಿರುವ ನುವಾಕೋಟ್ ಮತ್ತು ಧಾದಿಂಗ್ ಜಿಲ್ಲೆಗಳೂ ತೀವ್ರವಾಗಿ ಬಾಧಿತವಾಗಿವೆ. ಹಲವು ಪ್ರದೇಶಗಳಲ್ಲಿ ಜನರು ಸ್ಥಳಾಂತರಗೊಂಡಿದ್ದು, ಸಾರಿಗೆ, ವಿದ್ಯುತ್ ಮತ್ತು ನೀರು ಪೂರೈಕೆ ವ್ಯವಸ್ಥೆಗೂ ಅಡಚಣೆಯಾಗಿದೆ. ಇದನ್ನೂ ಓದಿ: ಕಾರು – ಮಿನಿ ಗೂಡ್ಸ್ ವಾಹನ ನಡುವೆ ಭೀಕರ ಅಪಘಾತ; ಮೂವರು ಮಹಿಳೆಯರು ದುರ್ಮರಣ
ಮುಂದುವರಿದ ರಕ್ಷಣಾ ಕಾರ್ಯಾಚರಣೆ:
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೇಪಾಳ ಸೇನೆ, ನೇಪಾಳ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ಸಂಸ್ಥೆಗಳು ಶೋಧ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿಸಿವೆ. ಲಭ್ಯ ಮಾಹಿತಿಯ ಪ್ರಕಾರ, 13,391 ಮಂದಿಯನ್ನು ರಕ್ಷಿಸಲಾಗಿದೆ. ಒಟ್ಟು 21,465 ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿಯೋಜಿತರಾಗಿದ್ದಾರೆ. ನೇಪಾಳ ಪೊಲೀಸ್ ಮಾಹಿತಿಯಂತೆ, ಭಾನುವಾರ ಸಂಜೆ ವೇಳೆಗೆ 1,342 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ, ಇನ್ನೂ 3,992 ಮಂದಿ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ನಮ್ಮ ಬದುಕಿನಲ್ಲಿ ದೇಶದ ಪಾತ್ರ ಮರೆಯದಿರಿ: ಪೇಜಾವರ ಶ್ರೀ

ಪತ್ತೆಯಾದ ಮೃತದೇಹಗಳಲ್ಲಿ 530 ಪುರುಷರು ಮತ್ತು 328 ಮಹಿಳೆಯರಿದ್ದು, 495 ಮೃತದೇಹಗಳನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ. ಮೃತರು ಹಾಗೂ ಅವರ ಸಂಬಂಧಿಕರಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಗುರುತಿಸುವ ಪ್ರಕ್ರಿಯೆ ಮುಂದುವರಿದಿದೆ. ಇದನ್ನೂ ಓದಿ: Guwahati Murder | ಪತ್ನಿ ಕೊಂದು ಬೆರಳುಗಳು ಪೀಸ್ ಪೀಸ್ – ರುಂಡ ಕತ್ತರಿಸಿ ಫ್ರಿಜ್‌ನಲ್ಲಿಟ್ಟಿದ್ದ ಪತಿ!
ಪ್ರವಾಹದಿಂದ ಉಂಟಾದ ಭಾರಿ ಹಾನಿಯ ನಡುವೆ ಪರಿಹಾರ, ಪುನರ್‌ನಿರ್ಮಾಣ ಮತ್ತು ನಾಪತ್ತೆಯಾದವರ ಶೋಧ ಕಾರ್ಯಗಳು ಮುಂದುವರಿದಿದ್ದು, ಸಂತ್ರಸ್ತ ಕುಟುಂಬಗಳ ದುಃಖದೊಂದಿಗೆ ನೇಪಾಳ ರಾಷ್ಟ್ರೀಯ ಶೋಕಾಚರಣೆಯ ಮೂಲಕ ಮೃತರಿಗೆ ಗೌರವ ಸಲ್ಲಿಸುತ್ತಿದೆ. ಇದನ್ನೂ ಓದಿ: ಪಕ್ಷದ ಹಿರಿಯರಿಗೆ ಹೀಗಾ ಅವಮಾನ ಮಾಡೋದು? – ಮಹದೇವಪ್ಪ ಪರ ಬ್ಯಾಟ್ ಬೀಸಿ ಬೈರತಿ ವಿರುದ್ಧ ಪ್ರತಾಪ್ ಕಿಡಿ
