ಗುವಾಹಟಿ: ಕೆಲ ದಿನಗಳ ಹಿಂದ ತಮಿಳಿನಲ್ಲಿ ಇರೈವನ್ ಎಂಬ ಸಿನಿಮಾ ತೆರೆ ಕಂಡಿತ್ತು. ಜಯಂ ರವಿ ನಾಯಕನಾಗಿ, ರಾಹುಲ್ ಬೋಸ್ ಖಳನಾಯಕನಾಗಿ ನಟಿಸಿರುವ ಈ ಚಿತ್ರ ಯುವತಿಯರಿಗೆ ಮೈನಡುಗಿಸುವಂತಿತ್ತು. ಈ ಸಿನಿಮಾದಲ್ಲಿ ಮದುವೆಯಾಗದ ಯುವತಿಯರನ್ನ ಕಿಡ್ನ್ಯಾಪ್ ಮಾಡಿ ಕ್ರೂರವಾಗಿ ಕೊಲ್ಲುವ ವ್ಯಕ್ತಿ, ಅವರ ಚೀರಾಟ.. ಕೂಗಾಟ… ನರಳಾಟ ಕಂಡು-ಕೇಳಿ ಆನಂದಿಸುತ್ತಾನೆ. ಅಬ್ಬಬ್ಬಾ… ತೆರೆಯ ಮೇಲೆ ಕಾಣುವ ಈ ಸಿನಿಮಾ ನೋಡಿದ್ರೆನೇ ಮೈ ನಡುಗುತ್ತೆ ಅಂದ್ಮೇಲೆ ನಿಜ ಜೀವದಲ್ಲಿ ನಡೆದ್ರೆ ಹೇಗಿರುತ್ತೆ ಅಲ್ವಾ?
ಇದರ ಹಾದಿಯಲ್ಲೇ ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಲಿವ್ ಇನ್ ಗೆಳತಿ (Live In Girlfriend) ಶ್ರದ್ಧಾ ವಾಕರ್ ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಅಂತಹದ್ದೇ ಪ್ರಕರಣವೊಂದು ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಇದನ್ನೂ ಓದಿ: ರಕ್ತ ಚರಿತ್ರೆ – ಸೈಕೋ ಹಂತಕರ ಲೋಕದಲ್ಲಿ…..!

ಮದ್ವೆಯಾಗಿ ಕೆಲವೇ ತಿಂಗಳುಗಳಾಗಿದ್ದ 25 ವರ್ಷದಾಕೆ ನಿನ್ನೆ (ಭಾನುವಾರ) ಗುವಾಹಟಿಯಲ್ಲಿರುವ (Guwahati) ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ಮಹಿಳೆಯನ್ನ ರಿಯಾ ತಾಲುಕ್‌ದಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮದ್ವೆಯಾಗುವಂತೆ ಒತ್ತಡ – ಲಿವ್ ಇನ್ ಗೆಳತಿ ಕೊಂದು ಶವವನ್ನ 8 ತಿಂಗಳು ಫ್ರಿಡ್ಜ್‌ನಲ್ಲಿಟ್ಟಿದ್ದ ಸೈಕೋ
ಸೆ.6ರಂದು ನೆರೆಹೊರೆಯವರು ಅಪಾರ್ಟ್‌ಮೆಂಟ್‌ನಿಂದ (Apartment) ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ದಂಪತಿ ಎರಡು ದಿನಗಳಿಂದ ಕಾಣಿಸಿಕೊಂಡಿರಲಿಲ್ಲ ಮತ್ತು ಅವರ ಮೊಬೈಲ್ ಫೋನ್‌ಗಳೂ ಸ್ವಿಚ್ ಆಫ್ ಆಗಿದ್ದವು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ರು.

ಪೊಲೀಸರು ಬಳಿಕ ಅಪಾರ್ಟ್‌ಮೆಂಟ್‌ನ ಬೀಗ ಒಡೆದು ಒಳಗೆ ಪರಿಶೀಲಿಸಿದಾಗ ಮಹಿಳೆಯ (Guwahati Women) ಛಿದ್ರಗೊಂಡ ಶವ ಪತ್ತೆಯಾಯಿತು. ಆಕೆಯ ಬೆರಳುಗಳನ್ನ ಅರ್ಧದಷ್ಟು ಕತ್ತರಿಸಲಾಗಿತ್ತು. ಶವ ಕೊಳೆಯುತ್ತಿತ್ತು, ಆದರೆ ತಲೆ ಕಾಣೆಯಾಗಿತ್ತು. ಮನೆಯಲ್ಲಿನ ಶೋಧದ ವೇಳೆ, ಮಹಿಳೆಯ ತಲೆಯನ್ನ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಫ್ರಿಜ್‌ನಲ್ಲಿ ಇಟ್ಟಿರೋದು ಗೊತ್ತಾಯಿತು.
ಆಕೆಯ ಪತಿ ಮನೆಯಲ್ಲಿ ಇರಲಿಲ್ಲ. ಶುಕ್ರವಾರದಂದು ಆತನನ್ನು ಕೊನೆಯ ಬಾರಿ ನೋಡಿದ್ದಾಗಿ ನೆರೆಹೊರೆಯವರು ತಿಳಿಸಿದ್ದಾರೆ. ನಂತರ ಶವ ಹಾಗೂ ಪತ್ತೆಯಾದ ತಲೆಯನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಭಾನುವಾರ ರಾತ್ರಿ ಮಹಿಳೆಯ ಪತಿ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ. ನಂತರ ತನಿಖಾಧಿಕಾರಿಗಳು ಆರೋಪಿಯ ಹೇಳಿಕೆ ದಾಖಲಿಸಿಕೊಂಡು, ಇದುವರೆಗೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳೊಂದಿಗೆ ಅದನ್ನ ಪರಿಶೀಲಿಸುವ ನಿರೀಕ್ಷೆಯಿದೆ. ಹತ್ಯೆಯ ಹಿಂದಿನ ಉದ್ದೇಶವೇನು ಎಂಬುದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಅಲ್ಲದೇ, ಆರೋಪಿ ಯಾವ ಸಂದರ್ಭಗಳಲ್ಲಿ ಪೊಲೀಸರಿಗೆ ಶರಣಾದ ಎಂಬ ಬಗ್ಗೆಯೂ ಯಾವುದೇ ವಿವರಗಳನ್ನು ನೀಡಲಾಗಿಲ್ಲ.
ಪ್ರಕರಣದ ತನಿಖೆ ಮುಂದುವರಿದಿದ್ದು, ಘಟನೆಯ ಸುತ್ತಮುತ್ತ ನಡೆದಿರುವ ಘಟನೆಗಳ ಸರಣಿ ಹಾಗೂ ಇತರರ ಯಾರಾದರೂ ಸಂಭವನೀಯ ಭಾಗವಹಿಸುವಿಕೆ ಇದೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
