-ಕೂತು ಸೋಮಾರಿಗಳಾಗಿದ್ದಾರೆ, ಸ್ವತಃ ಕ್ರಿಯಾಶೀಲರಾಗಬೇಕೆಂದು ಪಾದಯಾತ್ರೆ ಮಾಡ್ತಿದ್ದಾರೆ
ರಾಯಚೂರು: ನಿನ್ನೆ (ಸೆ.6) ಬೆಂಗಳೂರಿನಲ್ಲಿ ನಡೆದಿರೋದು ಅಹಿಂದ ಸಭೆ ಅಲ್ಲ. ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ಕಾರ್ಯಕ್ರಮ ಆಗಿದೆ. ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲ ಅಂತ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಹಿಂದುಳಿದ ಒಕ್ಕೂಟ ಸಮಾವೇಶಕ್ಕೆ ಸಚಿವ ಸತೀಶ್ ಜಾರಕಿಹೊಳಿಗೆ ಆಹ್ವಾನ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅಹಿಂದ ಯಾರ ಸ್ವತ್ತು ಅಲ್ಲ ನಿಜ, ಅದರಲ್ಲಿ ತಪ್ಪೇನಿಲ್ಲ. ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲ, ಯಾವುದೇ ರಾಜಕೀಯ ಕಾರ್ಯಕ್ರಮ ಅಲ್ಲ. ಕರೆಯೋದು, ಬಿಡೋದು ಆಯೋಜಕರಿಗೆ, ಒಕ್ಕೂಟದವರಿಗೆ ಬಿಟ್ಟಿದ್ದು. ಇಂತವರನ್ನೇ ಕರೆಯಿರಿ, ಇವರನ್ನೇ ಬಿಡ್ರಿ ಎಂದು ಹೇಳೋಕೆ ಬರಲ್ಲ. 25 ವರ್ಷದ ಮಹೋತ್ಸವ ಅವರು ಮಾಡಿದ್ದಾರೆ. ಆ ಕಾರ್ಯಕ್ರಮಕ್ಕೆ ತಂದೆಯವರನ್ನು ಸಹ ಕರೆದಿದ್ದರು. ದೊಡ್ಡ ಮಟ್ಟದ ಯಶಸ್ವಿ ಕಾರ್ಯಕ್ರಮ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಸಮಾವೇಶಕ್ಕೆ ಆಪ್ತರ ಗೈರು: ಸಿದ್ದರಾಮಯ್ಯ ಆಪ್ತಕೂಟದಲ್ಲಿ ಬಿರುಕು?
ಇತ್ತೀಚೆಗೆ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಅನ್ನೋ ವಿಚಾರಕ್ಕೆ ನನಗೆ ಗೊತ್ತಿರುವಂತೆ ಅಂತಹದ್ದೇನು ಇಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಕೂತು ಕೂತು ಸೋಮಾರಿಗಳಾಗಿದ್ದರು. ಸ್ವತಃ ಕ್ರಿಯಾಶೀಲರಾಗಬೇಕು ಅಂತ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯಿಂದ ಏನೂ ಪ್ರಯೋಜನ ಇಲ್ಲ. ಯಾವ ಉದ್ದೇಶದಿಂದ ಪಾದಯಾತ್ರೆ ಮಾಡಬೇಕು ಅನ್ಕೊಂಡಿದ್ರೊ ಆ ಉದ್ದೇಶ ಈಡೇರಿದೆ. ಆದ್ರೂ ಪಾದಯಾತ್ರೆ ಮಾಡುತ್ತಿದ್ದಾರೆ ಎಂದಿದ್ದಾರೆ.ಇದನ್ನೂ ಓದಿ: ಪಕ್ಷದ ಹಿರಿಯರಿಗೆ ಹೀಗಾ ಅವಮಾನ ಮಾಡೋದು? – ಮಹದೇವಪ್ಪ ಪರ ಬ್ಯಾಟ್ ಬೀಸಿ ಬೈರತಿ ವಿರುದ್ಧ ಪ್ರತಾಪ್ ಕಿಡಿ
