* ಇ-ಕೆವೈಸಿ ಆಗದಿದ್ದರೆ ಕಾರ್ಡ್ ಡಿಲೀಟ್: ಸಚಿವರ ಎಚ್ಚರಿಕೆ

ಬೆಂಗಳೂರು: ಬಿಪಿಎಲ್ ಪರಿಷ್ಕರಣೆ ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದೇವೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.
ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಸಿಎಂ ನನಗೆ ಮಹತ್ವದ ಜವಬ್ದಾರಿ ವಹಿಸಿದ್ದಾರೆ. ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಉಸ್ತುವಾರಿ ವಹಿಸಿದ್ದಾರೆ. ಮಹತ್ವದ ಇಲಾಖೆ ಇದು. ಶೇ.65 ರಷ್ಟು ಜನರಿಗೆ ಮುಟ್ಟುವಂತಹ ಇಲಾಖೆ ಇದು. ಸಿದ್ದರಾಮಯ್ಯನವರು ಸಿಎಂ ಆದಾಗ ಅನ್ನಭಾಗ್ಯ ಯೋಜನೆ ಮುಖಾಂತರ ಬಡವರಿಗೆ ಹೊಟ್ಟೆ ತುಂಬಿ ಊಟ ಮಾಡಿಸುವ ಕಾರ್ಯಕ್ರಮ ಹಾಕಿಕೊಂಡಿದ್ರು. ಇದರ ಜೊತೆಗೆ 10 ಕಿಲೋ ಅಕ್ಕಿ ವಿತರಣೆಯೂ ನಡೆಯುತ್ತಿದೆ. ರಾಜ್ಯದಲ್ಲಿ ನಮ್ಮ ಜನರಿಗೆ ಒಳ್ಳೆಯ ಸೇವೆ ಕೊಡಬೇಕು ಅನ್ನೋ ನಿಟ್ಟಿನಲ್ಲಿ ಇಲಾಖೆಯ ಬ್ರೀಫಿಂಗ್ ತಗೊಂಡಿದ್ದೇನೆ. ಅರ್ಥ ಮಾಡಿಕೊಂಡಿದ್ದೇನೆ. ಇಲಾಖೆಯನ್ನು ಡೈನಾಮಿಕ್ ಇಲಾಖೆಯಾಗಿ ಮುಂದುವರೆಸಿಕೊAಡು ಹೋಗೋ ವಿಶ್ವಾಸವಿದೆ ಎಂದರು.
ಜನರ ಆದಾಯ ದರವನ್ನು ಹೆಚ್ಚು ಮಾಡಬೇಕೋ ಬೇಡ್ವೋ ಅಂತಾ ಪರಿಶೀಲನೆ ಮಾಡ್ತಾ ಇದ್ದೇವೆ. ಕಾರ್ಡ್ಗಳು ತಾಂತ್ರಿಕ ಕಾರಣದಿಂದ ಡಿಲೀಟ್ ಆಗಿದ್ದರೆ ಮರಳಿ ಕೊಡ್ತೇವೆ. ಆಹಾರ ಭದ್ರತಾ ಕಾಯ್ದೆ ಗ್ರಾಮೀಣ ಭಾಗದ 75% ಹಾಗೂ ನಗರ ಭಾಗದ 50% ಜನಸಂಖ್ಯೆ ಕವರ್ ಆಗಬೇಕಿದೆ. 50 ಲಕ್ಷ ಜನರಿಗೆ ಆಹಾರ ಭದ್ರತೆ ಕಾಯ್ದೆ ಜಾರಿ ಮಾಡಬೇಕಿದೆ. ಸದ್ಯಕ್ಕೆ ಯಾವುದೇ ಕಾರ್ಡ್ಗಳನ್ನು ಡಿಲೀಟ್ ಮಾಡದಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ಸುಮಾರು ಏಳು ಲಕ್ಷ ಜನರ ಕಾರ್ಡ್ ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿದೆ. 2.65 ಕೋಟಿ ಜನರ ಕಾರ್ಡ್ಗಳಿಗೆ ಇ-ಕೆವೈಸಿ ಮಾಡುತ್ತೇವೆ. ಅದರಲ್ಲಿ ಎಷ್ಟು ಕಾರ್ಡ್ ಡಿಲೀಟ್ ಆಗ್ತಿವೆ. ಅಷ್ಟು ಹೊಸ ಕಾರ್ಡ್, ಹೊಸ ಫಲಾನುಭವಿಗಳಿಗೆ ಕೊಡುತ್ತೇವೆ ಎಂದು ಹೇಳಿದರು.
ಸದ್ಯಕ್ಕೆ ಹೊಸ ಕಾರ್ಡ್ ಇಶ್ಯೂ ಮಾಡಲು ಬರಲ್ಲ. ಕೇಂದ್ರ ಸರ್ಕಾರದಿಂದ ನಿರ್ದೇಶನವಿದೆ. ಸೆಪ್ಟೆಂಬರ್ ಒಳಗಡೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಎಷ್ಟು ಕಾರ್ಡ್ ಎಲಿಜಬಲ್ ಇಲ್ವೋ ಅಷ್ಟು ಕಾರ್ಡ್ ವಿತರಣೆ ಮಾಡೋ ಬಗ್ಗೆ ಗೊತ್ತಾಗಲಿದೆ. ಸದ್ಯಕ್ಕೆ ಬಿಪಿಎಲ್ ಪರಿಷ್ಕರಣೆ ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದೇವೆ. ಇ-ಕೆವೈಸಿ ಆಗದಿದ್ದರೆ ಕಾರ್ಡ್ ಡಿಲೀಟ್ ಮಾಡಲಾಗುವುದು. ಇ-ಕೆವೈಸಿ ಮಾಡದ ಕಾರ್ಡ್ಗಳನ್ನ ಡಿಲೀಟ್ ಮಾಡಿ ಹೊಸಬರಿಗೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಎಚ್ಚರಿಸಿದರು.
‘ಪಬ್ಲಿಕ್ ಟಿವಿ’ ವರದಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಕ್ಕಿ ಸೋರಿಕೆ ಹಾಗೂ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಎಲ್ಲಾ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಎಲ್ಲಾ ವೆಹಿಕಲ್‌ಗಳಲ್ಲಿ ಜಿಪಿಎಸ್ ಅಳವಡಿಸಬೇಕು. ಕಮಾಂಡ್ ಸೆಂಟರ್ ಆಗಬೇಕು. ನ್ಯಾಯಬೆಲೆ ಅಂಗಡಿಯವರ ಮೇಲೆ ಆಕ್ಷನ್ ತೆಗೆದುಕೊಳ್ಳತ್ತೇವೆ ಎಂದರು.
ಗ್ಯಾಸ್ ಸಿಗುತ್ತಿದ್ದರೂ ಹೋಟೆಲ್ ಪ್ರೈಸ್ ಹೆಚ್ಚಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಅದರ ಬಗ್ಗೆ ಪರಿಶೀಲನೆ ಮಾಡ್ತೇನೆ. ಹೋಟೆಲ್ ಮೆನು ದರದ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದರು.
ಕೇಂದ್ರದಿಂದ ನಮಗೆ ನಿರ್ದೇಶನವಿದೆ. ಹಾಗಾಗಿ, ಹೊಸ ಕಾರ್ಡ್ ನೀಡುವುದಿಲ್ಲ. ಸೆಪ್ಟೆಂಬರ್ 30 ರೊಳಗೆ ಇ-ಕೆವೈಸಿ ಮಾಡಿಕೊಳ್ಳಬೇಕು. ಮಾಡಿದ ನಂತರ ಎಷ್ಟು ಕಾರ್ಡ್ ಎಲಿಜಿಬಲ್ ಇದೆಯಾ ಅಷ್ಟು ಕಾರ್ಡ್ ಬಗ್ಗೆ ಮಾಹಿತಿ ಸಿಗಲಿದೆ ಎಂದು ಮಾಹಿತಿ ನೀಡಿದರು.
