ಶಿವಮೊಗ್ಗ: ಹಿರಿಯ ನಟ ರಮೇಶ್ ಭಟ್ (Actor Ramesh Bhat,) ಅವರು ಜೋಗ ಜಲಪಾತದ (Jog Falls) ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ.
ಸಿನಿಮಾ ತಂಡದೊಂದಿಗೆ ಅವರು ಶಿವಮೊಗ್ಗಕ್ಕೆ (Shivamogga) ಬಂದಿದ್ದರು. ಈ ವೇಳೆ ಜೋಗ ಜಲಪಾತದ ವೀಕ್ಷಣೆ ಅವರು ತೆರಳಿದ್ದರು. ಫಾಲ್ಸ್ ಬಳಿಯ ಭದ್ರತಾ ಸಿಬ್ಬಂದಿ ರಮೇಶ್ ಭಟ್ ಅವರಿಗೆ ಜಲಪಾತದ ಬಗ್ಗೆ ವಿವರ ನೀಡಿ, ಜಲ ವೈಭವವನ್ನು ವರ್ಣಿಸಿದ್ದಾರೆ. ಇದನ್ನೂ ಓದಿ: ಜೋಗ್ ಫಾಲ್ಸ್‌ಗೆ ಜೀವಕಳೆ – ಪ್ರವಾಸಿಗರಿಗಾಗಿ ಕೆಎಸ್ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್
ಶರಾವತಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆ ಶರಾವತಿ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ಧುಮ್ಮಿಕ್ಕಿ ಹರಿಯುತ್ತಿರುವ ಜೋಗ ಜಲಪಾತವನ್ನು ನೋಡಲು ಪ್ರವಾಸಿಗರ ದಂಡೇ ಬರುತ್ತಿದೆ.
ಮಳೆ ಹಾಗೂ ಮಂಜಿನಾಟದ ನಡುವೆ ಜೋಗದ ಸಿರಿಯನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ರಾಜ, ರಾಣಿ, ರೋರರ್, ರಾಕೆಟ್ ಫಾಲ್ಸ್‌ನಲ್ಲಿ ಹಾಲ್ನೊರೆಯಂತೆ ನೀರು ಉಕ್ಕಿ ಹರಿಯುತ್ತಿದೆ.

