ಬೆಂಗಳೂರಲ್ಲಿ ಅದ್ದೂರಿ ಟ್ರೈಲರ್ ಲಾಂಚ್‌ಗೆ ವಾರ ಕಳೆಯೋದ್ರೊಳಗೆ ಮುಂಬೈನಲ್ಲಿ (Mumbai) ಬೃಹತ್ ಸಾಂಗ್ ರಿಲೀಸ್ ಕಾರ್ಯಕ್ರಮವನ್ನ `ಟಾಕ್ಸಿಕ್’ (Toxic Movie) ಸಿನಿಮಾ ಟೀಮ್ ಮಾಡಿದೆ.

ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ (Vishal Mishra) ಹಾಗೂ ಎಂದಿನಂತೆ ಯಶ್ (Yash) ಈ ಕಾರ್ಯಕ್ರಮದ ಹೈಲೈಟ್ ಆಗಿದ್ದರು. ನಯನತಾರಾ ಅನುಪಸ್ಥಿತಿ ಇತ್ತು. ಆದರೆ, ಉಳಿದ ನಾಲ್ವರು ನಾಯಕಿಯರು ಈ ಅದ್ದೂರಿ ಇವೆಂಟ್‌ನಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬೆಚ್ಚಿಬೀಳಿಸುತ್ತೆ ಟಾಕ್ಸಿಕ್ ರನ್‌ಟೈಂ..!
`ಟಾಕ್ಸಿಕ್’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಥಿಯೇಟರ್‌ಗೆ ಅಪ್ಪಳಿಸಲಿದೆ. ಯಶ್ ಈ ಹಿಂದಿನ ಕೆಜಿಎಫ್ ಚಿತ್ರವು ಹಿಂದಿ ಬೆಲ್ಟ್‌ನಲ್ಲಿ ಭಾರೀ ದಾಖಲೆಯನ್ನೇ ಬರೆದಿರೋ ಎಕ್ಸಾಂಪಲ್ ಇದೆ. ಹೀಗಾಗಿ, ಬಾಲಿವುಡ್‌ನಲ್ಲಿ ಭಾರಿ ಅಭಿಮಾನಿ ಬಳಗವನ್ನು ಹೊಂದಿರೋ ಯಶ್‌ಗೆ ಹಿಂದಿ ಭಾಗದಲ್ಲೂ ಕಾರ್ಯಕ್ರಮ ಮಾಡುವುದು ಮುಖ್ಯವಾಗಿತ್ತು.
ಕಳೆದ ಆಗಸ್ಟ್ 8 ರಂದು ಬೆಂಗಳೂರಲ್ಲೇ ಪ್ಯಾನ್ ಇಂಡಿಯಾ ಸುದ್ದಿಗೋಷ್ಠಿ ನಡೆಸಿದ್ದರು. ಬಳಿಕವೂ ಬಾಲಿವುಡ್‌ನಲ್ಲಿ ಮತ್ತೊಂದು ಮಹತ್ವದ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದೆ ಟಾಕ್ಸಿಕ್ ಫಿಲ್ಮ್ ಟೀಮ್. ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಮುಂದಾಳತ್ವದಲ್ಲಿ ವೇದಿಕೆಯಲ್ಲೇ ಎಲ್ಲಾ ಹಾಡಿನ ಲೈವ್ ಕಾನ್ಸರ್ಟ್ ಇದ್ದಿದ್ದು ಹೈಲೈಟ್. ಇದನ್ನೂ ಓದಿ: ರೆಬೆಲ್ ಸ್ಟಾರ್ ಪ್ರಭಾಸ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ
