– ಬೆಂಬಲಿಗರ ಹೆಗಲ ಮೇಲಿದ್ದಾಗಲೇ ಹಲ್ಲೆ
– ಎಕ್ಸ್‌ನಲ್ಲಿ ಅಭಿಜಿತ್ ದಿಪ್ಕೆ ಪ್ರತಿಕ್ರಿಯೆ
ಜೈಪುರ: ರಾಜಸ್ಥಾನದ ಜೈಪುರದಲ್ಲಿ(Jaipur) ನಡೆದ ಪ್ರತಿಭಟನೆ ವೇಳೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದಿಪ್ಕೆ(Abhijit Deepke) ಮೇಲೆ ಹಲ್ಲೆ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ ಶಹೀದ್ ಸ್ಮಾರಕದ ಹತ್ತಿರ ಶಾಂತಿಯುತ ಪ್ರತಿಭಟನೆ ನಡೆಸಲು ಅಭಿಜಿತ್ ದಿಪ್ಕೆ ಕರೆ ನೀಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಬೆಂಬಲಿಗರ ಹೆಗಲ ಮೇಲೆ ನಿಂತು ಜನರನ್ನುದ್ದೇಶಿಸಿ ಮಾತನಾಡಲು ತೆರಳುತ್ತಿದ್ದ ವೇಳೆ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಇಬ್ಬರು ವ್ಯಕ್ತಿಗಳು ಸ್ಕಾರ್ಫ್ ಎಳೆದು, ಹಲವು ಬಾರಿ ಕಪಾಳಮೋಕ್ಷ ಮಾಡಿದ್ದು, ಕೆಳಕ್ಕೆ ಎಳೆಯಲು ಯತ್ನಿಸಿದ್ದಾರೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೂ ಮೊದಲು ಸಿಜೆಪಿ ದೇಶಾದ್ಯಂತ ವಿದ್ಯಾರ್ಥಿ ಮತ್ತು ಯುವಜನರ ಪ್ರತಿಭಟನೆಗಳನ್ನು ಆಯೋಜಿಸಿತ್ತು. ದೆಹಲಿಯಿಂದ ಆರಂಭವಾದ ಈ ಪ್ರತಿಭಟನೆಗಳು ಅಮೃತಸರ, ಪುಣೆ, ಬೆಂಗಳೂರು, ಹೈದರಾಬಾದ್ ಹಾಗೂ ಲಖನೌವರೆಗೆ ವಿಸ್ತರಿಸಿದ್ದವು. ಇದನ್ನೂ ಓದಿ: ʻಪ್ರಿಯದರ್ಶಿನಿʼ ಯೋಜನೆ ಉದ್ಘಾಟನೆ ವೇಳೆ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಿಬಿಎಸ್‌ಇಗೆ ಸಂಬಂಧಿಸಿದ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಅಭಿಜಿತ್ ದಿಪ್ಕೆ ಆಗ್ರಹಿಸಿದ್ದಾರೆ. ಈ ಹೋರಾಟ ಯುವಕರ ಧ್ವನಿಯಾಗಿದೆ ಎಂದು ಅವರು ಹೇಳಿದ್ದಾರೆ.<
Jaipur: Abhijeet Dipke, founder of the Cockroach Janta Party (CJP), was slapped by an unidentified man during a protest at Shaheed Smarak in Jaipur pic.twitter.com/ifvUMUdSAX
— NextMinute News (@nextminutenews7) June 15, 2026
ಹಲ್ಲೆ ಬಳಿಕ ಎಕ್ಸ್‌ನಲ್ಲಿ(X) ಪ್ರತಿಕ್ರಿಯಿಸಿರುವ ಅಭಿಜಿತ್ ದಿಪ್ಕೆ, ದೈಹಿಕ ಹಲ್ಲೆಗಳು ಭಯ ಮತ್ತು ಹೇಡಿತನದ ಸಂಕೇತ. ನಾವು ಶಾಂತಿಯುತವಾಗಿ ನಮ್ಮ ಧ್ವನಿಯನ್ನು ಎತ್ತುತ್ತಲೇ ಇರುತ್ತೇವೆ. ನಾನು ಗಾಂಧಿ ಮತ್ತು ಅಂಬೇಡ್ಕರ್ ಅವರ ಅನುಯಾಯಿ. ಶಾಂತಿ ಮತ್ತು ಪ್ರೀತಿಯ ಮಾರ್ಗದಲ್ಲೇ ಈ ಹೋರಾಟ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ. ಜೊತೆಗೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ವಿವಾದ ಸೃಷ್ಟಿಸಿದ ಅಶೋಕ್ ಗೆಹ್ಲೋಟ್ ಹೇಳಿಕೆ
