ನ್ಯೂಯಾರ್ಕ್: ಲೂಟಿ ಮಾಡಲಾಗಿದ್ದ ನೂರಾರು ಪುರಾತನ ಪ್ರತಿಮೆ, ವಿಗ್ರಹಗಳನ್ನು ಭಾರತ (India) ಮತ್ತು ಪಾಕಿಸ್ತಾನಕ್ಕೆ (Pakistan) ನ್ಯೂಯಾರ್ಕ್ (New York) ಪ್ರಾಸಿಕ್ಯೂಟರ್ ಆಲ್ವಿನ್ ಬ್ರಾಗ್ ಹಿಂತಿರುಗಿಸಿದ್ದಾರೆ.
ಪುರಾತನ ವಸ್ತುಗಳ ಕಳ್ಳಸಾಗಣೆದಾರ, ಮಾಸ್ಟರ್ ಮೈಂಡ್ ಸುಭಾಷ್ ಕಪೂರ್ ನೇತೃತ್ವದಲ್ಲಿ ಸುಮಾರು 5,500 ವರ್ಷಗಳಷ್ಟು ಪುರಾತನವಾದ ವಸ್ತುಗಳನ್ನು ಅಮೆರಿಕಗೆ ಸಾಗಿಸಲಾಗಿತ್ತು. ಇದನ್ನೂ ಓದಿ: ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!
Advertisement
Advertisement
ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಕಾಂಬೋಡಿಯಾ, ಇಂಡೋನೇಷಿಯಾ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಮತ್ತು ಕಪೂರ್‌ನ ಬಹುರಾಷ್ಟ್ರೀಯ ತನಿಖೆಯ ಸಂದರ್ಭದಲ್ಲಿ ದೇವಾಲಯಗಳ ಅನೇಕ ಪವಿತ್ರ ಚಿತ್ರಗಳು ಸೇರಿದಂತೆ ಭಾರತದಿಂದ 235 ಪ್ರಾಚೀನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬ್ರಾಗ್‌ನ ಕಚೇರಿ ತಿಳಿಸಿದೆ. ಕಳ್ಳಸಾಗಾಣಿಕೆ ವಸ್ತುಗಳನ್ನು ಮ್ಯಾನ್‌ಹ್ಯಾಟನ್‌ನಲ್ಲಿರುವ ಕಪೂರ್‌ನ ಆರ್ಟ್ ಆಫ್ ದಿ ಪಾಸ್ಟ್ ಗ್ಯಾಲರಿ ಮೂಲಕ ಮಾರಾಟ ಮಾಡಲಾಗಿದೆ ಎಂದು ಕಚೇರಿ ತಿಳಿಸಿದೆ. 12ನೇ ಅಥವಾ 13ನೇ ಶತಮಾನದಿಂದ ಆರ್ಚ್ ಪರಿಕರ ಎಂದು ಕರೆಯಲ್ಪಡುವ ಅಮೃತಶಿಲೆಯ ಶಿಲ್ಪವನ್ನು ಯೇಲ್ ವಿಶ್ವವಿದ್ಯಾಲಯದ ಆರ್ಟ್ ಗ್ಯಾಲರಿ ಹಿಂತಿರುಗಿಸಿದೆ.
Advertisement
ಸುಮಾರು 4 ಮಿಲಿಯನ್ ಡಾಲರ್ ಮೌಲ್ಯದ ಒಟ್ಟು 307 ವಸ್ತುಗಳನ್ನು ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಬ್ರಾಗ್ ಕಚೇರಿ ತಿಳಿಸಿದೆ. ನ್ಯಾನ್ಸಿ ವೀನರ್ ಅವರು ನಡೆಸಿದ್ದ ಕಳ್ಳಸಾಗಣೆಗಳ ತನಿಖೆಯ ಸಂದರ್ಭದಲ್ಲಿ ಐದು ಭಾರತೀಯ ಪ್ರಾಚೀನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಚೇರಿ ತಿಳಿಸಿದೆ. ಇದನ್ನೂ ಓದಿ: ಇಂದಿಗೆ 8 ಶತಕೋಟಿ ಮೀರಿತು ಜಾಗತಿಕ ಜನಸಂಖ್ಯೆ: ವಿಶ್ವಸಂಸ್ಥೆ
Advertisement
ಭಾರತಕ್ಕೆ ಹಿಂತಿರುಗಿದ ವಸ್ತುವು 11ನೇ ಶತಮಾನದ ಮಧ್ಯ ಭಾರತದ ದೇವಾಲಯದಿಂದ ಲೂಟಿ ಮಾಡಲಾದ ಗರುಡನೊಂದಿಗೆ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಪ್ರತಿಮೆಯಾಗಿದೆ ಎಂದು ಕಚೇರಿ ತಿಳಿಸಿದೆ.