CrimeLatestMain PostNational

ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ  (Live in relationship) ಗೆಳತಿಯ (Girlfriend) ಹತ್ಯೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನೇಕ ಭಯಾನಕ ಸಂಗತಿಗಳು ಬಯಲಾಗುತ್ತಿವೆ. ಕೊಲೆಗಾರ ಅಫ್ತಾಬ್, ಶ್ರದ್ಧಾಳನ್ನು (Shraddha) ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್‍ಮೆಂಟ್‍ಗೆ ಕರೆದು ಸೆಕ್ಸ್ ಮಾಡ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

ಅಫ್ತಾಬ್(28) ಹಾಗೂ ಶ್ರದ್ಧಾ (27) ಇಬ್ಬರು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. 3 ವರ್ಷದ ಹಿಂದೆ ಮುಂಬೈನಲ್ಲಿ ಭೇಟಿಯಾಗಿದ್ದರು. ಅವರು ಅದಾದ ಬಳಿಕ ದೆಹಲಿಗೆ ಬಂದು ಅಲ್ಲೂ  ಲಿವಿಂಗ್ ಇನ್ ರಿಲೆಷನ್‍ಶಿಪ್‍ನಲ್ಲಿದ್ದರು. ಅದಾದ ಬಳಿಕ ಇಬ್ಬರ ಮಧ್ಯೆ ಮದುವೆ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಅದಾದ ಬಳಿಕ ಶ್ರದ್ಧಾಳ ದೇಹದ ಭಾಗಗಳನ್ನು ದೆಹಲಿ ಕಾಡಿನಲ್ಲಿ ವಿಲೇವಾರಿ ಮಾಡಿದ್ದ.

ಈ ಮಧ್ಯ ಅಂದರೆ ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ ಅಫ್ತಾಬ್ ಅದೇ ಡೆಟಿಂಗ್ ಆ್ಯಪ್ ಮೂಲಕ ಮತ್ತೊಬ್ಬ ಯುವತಿಯನ್ನು ಭೇಟಿಯಾಗಿ ಡೇಟ್ ಮಾಡಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೇ ಅಫ್ತಾಬ್ ಆ ಯುವತಿಯನ್ನು ಆಗಾಗ ಮನೆಗೂ ಕರೆ ತಂದು ಸೆಕ್ಸ್‌ ಮಾಡುತ್ತಿದ್ದ. ಆದರೆ ಆ ಮಹಿಳೆಯನ್ನು ಕರೆತರುವ ವೇಳೆ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್‌ನಿಂದ ತೆಗೆದು ಕಬೋರ್ಡ್‍ನಲ್ಲಿ ಇಡುತ್ತಿದ್ದ ಎಂಬ ವಿಷಯ ಇದೀಗ ಬಯಲಾಗಿದೆ. ಇದನ್ನೂ ಓದಿ: ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

ಅಫ್ತಾಬ್ ಪೂನಾವಾಲಾ ಮತ್ತು ಶ್ರದ್ಧಾ ವಾಕರ್ ಏಪ್ರಿಲ್‍ನಲ್ಲಿ ದೆಹಲಿಗೆ ತೆರಳಿದರು. ಅವರಿಬ್ಬರ ಮಧ್ಯೆ ಒಂದು ಜಗಳ ಉಲ್ಬಣಗೊಂಡಿದ್ದು, ಆ ವೇಳೆ ಅಂದರೆ ಮೇ 18ರಂದು ಶ್ರದ್ಧಾಳನ್ನು ಕತ್ತು ಹಿಸುಕಿ ಅಫ್ತಾಬ್ ಕೊಲೆ ಮಾಡಿದ್ದ. ಬಾಣಸಿಗನ ತರಬೇತಿ ಪಡೆದಿದ್ದ ಅಫ್ತಾಬ್, ಶ್ರದ್ಧಾಳ ದೇಹವನ್ನು ಕತ್ತರಿಸುವ ಮೊದಲು ರಕ್ತದ ಕಲೆಗಳನ್ನು ಅನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂದು ಗೂಗಲ್ ಮಾಡಿದ್ದನು. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

ಅಷ್ಟೇ ಅಲ್ಲದೇ ಶ್ರದ್ಧಾ ಕೊಲೆಯನ್ನು ಮುಚ್ಚಿಹಾಕಲು, ಅಫ್ತಾಬ್ ತನ್ನ ಸ್ನೇಹಿತರ ಜೊತೆ ಸಂಪರ್ಕದಲ್ಲಿರಲು ಆಕೆಯ ಸಾಮಾಜಿಕ ಜಾಲತಾಣದ ಖಾತೆಯನ್ನು ಬಳಸುತ್ತಿದ್ದನು. ಆದರೂ ಎರಡು ತಿಂಗಳಿಗೂ ಹೆಚ್ಚು ಕಾಲ ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದಾಗ ಆಕೆಯ ಸ್ನೇಹಿತರು ಅನುಮಾನಗೊಂಡು ಶ್ರದ್ಧಾಳ ಪೋಷಕರಿಗೆ ತಿಳಿಸಿದ್ದರು. ಅದಾದ ಬಳಿಕ ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ಘಟನೆಯೇನು?: ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ ಗೆಳತಿಯ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button