LatestLeading NewsMain PostNational

ಭಗವಂತ್ ಮಾನ್ ಅಹಂಕಾರಿಯಲ್ಲ- ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಕೈ ಮುಖಂಡ ಸಿಧು

ಚಂಡೀಗಢ: ಪಂಜಾಬ್‍ನ ಮುಖ್ಯಮಂತ್ರಿ ಭಗವಂತ್ ಮಾನ್ ಅಹಂಕಾರಿ ಅಲ್ಲ ಇತರ ಅಭಿಪ್ರಾಯವನ್ನು ಸ್ವೀಕರಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ತಿಳಿಸಿದರು.

ಮುಖ್ಯಮಂತ್ರಿಯೊಂದಿಗಿನ ಸಭೆಯ ನಂತರ ಮಾತನಾಡಿದ ಅವರು, ಸ್ವಪಕ್ಷ ಕಾಂಗ್ರೆಸ್ ಮತ್ತು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದಿನ ಮುಖ್ಯಮಂತ್ರಿಗಳಿಗೆ ತಮ್ಮದೇ ಆದ ಶಾಸಕರು ಮತ್ತು ಹಿರಿಯ ನಾಯಕರ ಸಲಹೆಯನ್ನು ಕೇಳಲು ಸಮಯವಿರಲಿಲ್ಲ ಎಂದು ಹೇಳಿದರು.

ಪಂಜಾಬ್ ಪ್ರಗತಿಗಾಗಿ ಭಗವಂತ್ ಮಾನ್ ಅವರನ್ನು ಭೇಟಿ ಆಗಿದ್ದೇನೆ. ಅವರಿಗೆ ಯಾವುದೇ ಅಹಂಕಾರವಾಗಲಿ, ದುರಹಂಕಾರವಾಗಲಿ ಇಲ್ಲ. ಅವರು 10-15 ವರ್ಷಗಳ ಹಿಂದೆ ಹೇಗೆ ಇದ್ದರೋ ಈಗಲೂ ಹಾಗೇ ಇದ್ದಾರೆ ಎಂದು ಭಗವಂತ್‍ಮಾನ್ ಅವರನ್ನು ಪ್ರಶಂಸಿದರು. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ- ಆರೋಪಿ ಪತಿಯನ್ನೇ ಜೈಲಿಗಟ್ಟಿದ ಜೈಲರ್ ಪತ್ನಿ!

Bhagwant Mann

ಈ ಹಿಂದೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಅವರು, ಇನ್ನೂ ಮುಂದೆ ಶಾಸಕ, ಸಂಸದ ಅಥವಾ ಸಚಿವರಷ್ಟೇ ಅಲ್ಲದೇ ಕ್ರಿಕೆಟಿಗ ರಾಜಕಾರಣಿಯನ್ನು ಭೇಟಿಯಾಗಲಿದ್ದಾರೆ ಎಂದು ತಿಳಿಸಿದ್ದರು. ರಾಜ್ಯದ ಆರ್ಥಿಕತೆಯ ಪುನರುಜ್ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಭಗವಂತ್ ಮಾನ್ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿ ಆಗುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಸಿಇಓಗಳು ನನ್ನ ಕಣ್ಗಾವಲಿನಲ್ಲಿ ಇರುತ್ತೀರಾ, ಬಜೆಟ್ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸಹಿಸಲ್ಲ: ಬೊಮ್ಮಾಯಿ

Leave a Reply

Your email address will not be published.

Back to top button