Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ- ಆರೋಪಿ ಪತಿಯನ್ನೇ ಜೈಲಿಗಟ್ಟಿದ ಜೈಲರ್ ಪತ್ನಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ- ಆರೋಪಿ ಪತಿಯನ್ನೇ ಜೈಲಿಗಟ್ಟಿದ ಜೈಲರ್ ಪತ್ನಿ!

Districts

PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ- ಆರೋಪಿ ಪತಿಯನ್ನೇ ಜೈಲಿಗಟ್ಟಿದ ಜೈಲರ್ ಪತ್ನಿ!

Public TV
Last updated: May 10, 2022 7:22 am
Public TV
Share
2 Min Read
GLB PSI SCAM
SHARE

ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮ ಇದೀಗ ಖಾಕಿ ಸುತ್ತಲೂ ಸುತ್ತುವರಿಯೋಕೆ ಮುಂದಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಕೆಎಸ್‍ಆರ್‍ಪಿ ಕಮಾಂಡೆಂಟ್ ವೈಜನಾಥ್ ರೇವೂರ್ ರನ್ನ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಏಳು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಅಕ್ರಮಕ್ಕೆ ಸಾಥ್ ನೀಡಿದ ಆರೋಪದಲ್ಲಿ 10 ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

GLB PSI SCAM 6

ಪಿಎಸ್‍ಐ ಹಗರಣದ ಒಂದೊಂದೇ ರಹಸ್ಯ ಬಯಲಾಗ್ತಿದ್ದಂತೆ ಅಲರ್ಟ್ ಆದ ಸಿಐಡಿ ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಪೊಲೀಸ್ ಅಧಿಕಾರಿಗಳ ಬುಡಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಕಲಬುರಗಿಯಲ್ಲಿ ಕೆಎಸ್‍ಆರ್‍ಪಿ ಕಮಾಂಡೆಂಟ್ ಆಗಿರುವ ವೈಜನಾಥ್ ರೇವೂರ್‍ರನ್ನು ಸಿಐಡಿ ಬಂಧಿಸಿದ್ದು, 7 ದಿನ ಕಸ್ಟಡಿಗೆ ತೆಗೆದುಕೊಂಡಿದೆ. ಅಕ್ರಮ ನೇಮಕಾತಿಯ ಕಿಂಗ್‍ಪಿನ್ ಆರ್‍ಡಿಪಾಟೀಲ್ ಜೊತೆ ವೈಜನಾಥ್ ರೇವೂರ್ ಶಾಮೀಲಾಗಿದ್ದು, ತನಿಖೆಯಲ್ಲಿ ಬಯಲಾಗಿತ್ತು. ದುರಂತ ಅಂದ್ರೆ ಸಿಐಡಿ ಅಧಿಕಾರಿಗಳು ಬಂಧಿಸಿರುವ ವೈಜನಾಥ್ ರೇವೂರ್‍ನ ಪತ್ನಿ ಜೈಲರ್ ಆಗಿದ್ದಾರೆ. ವೈಜನಾಥ್ ಪತ್ನಿ ಸುನಂದಾ ವೈಜನಾಥ್ ರೇವೂರ್ ಕಲಬುರಗಿಯ ಸೆಂಟ್ರಲ್ ಜೈಲ್‍ನಲ್ಲಿ ಜೈಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಆರೋಪಿ ಪತಿಯನ್ನೇ ಜೈಲಿಗಟ್ಟಬೇಕಾದ ಪರಿಸ್ಥಿತಿ ಜೈಲರ್ ಪತ್ನಿಗೆ ನಿರ್ಮಾಣವಾಗಿದೆ.

GLB PSI SCAM 4

ಪಿಎಸ್‍ಐ ನೇಮಕಾತಿ ಪರೀಕ್ಷೆಯ ಕೇಂದ್ರ ಬಿಂದುವಾಗಿರುವ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಎಂ.ಎಸ್ ಇರಾನಿ ಕಾಲೇಜಿನಲ್ಲಿ ಪರೀಕ್ಷೆಯ ದಿನ ಕರ್ತವ್ಯ ನಿರ್ವಹಿಸಿ ಅಕ್ರಮ ತಡೆಗಟ್ಟುವಲ್ಲಿ ವಿಫಲರಾದ ಹತ್ತು ಪೊಲೀಸ್ ಅಧಿಕಾರಿಗಳನ್ನ ಅಮಾನತ್ತು ಮಾಡಲಾಗಿದೆ. ಮತ್ತೊಂದೆಡೆ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿರುವ ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ ಮತ್ತು ಬೆರಳಚ್ಚು ವಿಭಾಗದ ಇನ್ಸ್‍ಪೆಕ್ಟರ್ ಆನಂದ್ ಮೇತ್ರಿ ಇಬ್ಬರನ್ನೂ ಅಮಾನತು ಮಾಡಿ ಗೃಹ ಇಲಾಖೆ ಆದೇಶಿಸಿದೆ. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ ಭೇದಿಸಲು ಸಹಾಯವಾಯ್ತು ಫೋಟೋಶೂಟ್

GLB PSI SCAM 5

ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಹಾಗೂ ಹೆಡ್ ಮಾಸ್ಟರ್ ಕಾಶಿನಾಥ್‍ಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದರಂತೆ. ಇನ್ನೂ ಸಿಪಿಐ ಆನಂದ್ ಮೇತ್ರಿ ಕೂಡ ನಾಲ್ಕು ಜನ ಅಭ್ಯರ್ಥಿಗಳನ್ನ ಕಿಂಗ್ ಪಿನ್ ಆರ್ ಡಿ ಪಾಟೀಲ್ ಮೂಲಕ ಎಕ್ಸಾಂ ಬರೆಯಿಸಿ ಅಕ್ರಮ ಎಸಗಿರೋ ಹಿನ್ನೆಲೆ ಅಮಾನತ್ತು ಮಾಡಿದ್ದಾರೆ.

GLB PSI SCAM 2

ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಒಟ್ಟನಲ್ಲಿ ಪಿಎಸ್‍ಐ ನೇಮಕಾತಿ ಅಕ್ರಮದ ಕೇಸ್ ಇದೀಗ ಪೊಲೀಸ್ ಇಲಾಖೆಯ ಸುತ್ತಲು ಸುತ್ತೊಕೆ ಮುಂದಾಗಿದೆ. ಇನ್ನೂ ಅದೆಷ್ಟು ಅಧಿಕಾರಿಗಳು ಲಾಕ್ ಆಗ್ತಾರೋ ಗೊತ್ತಿಲ್ಲ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

TAGGED:jailKalaburagiPSIಕಲಬುರಗಿಜೈಲುಪಿಎಸ್‍ಐ
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

soraba bjp worker
Crime

ಶಿವಮೊಗ್ಗದ ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು – ಪತಿ ಬಂಧನ

Public TV
By Public TV
4 hours ago
Donovan Ferreira
Cricket

ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ

Public TV
By Public TV
5 hours ago
Apekshaben Sonis victory
Latest

100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

Public TV
By Public TV
5 hours ago
Dharwad Suicide
Dharwad

ಧಾರವಾಡ | ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು

Public TV
By Public TV
6 hours ago
gundlupet inspector safari
Chamarajanagar

ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

Public TV
By Public TV
7 hours ago
supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?