ಕಲಬುರಗಿ: ಪಿಎಸ್‍ಐ ನೇಮಕಾತಿ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ಸು ಕಂಡ ನಂತರ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿಬ್ಬಂದಿಗಳು ಫೋಟೋಶೂಟ್ ಮಾಡಿಸಿದ್ದರು. ಈಗ ಈ ಫೋಟೋಶೂಟ್ ಅಕ್ರಮ ಭೇದಿಸಲು ಅಧಿಕಾರಿಗಳಿಗೆ ಸಹಾಯವಾಗಿದೆ.
ಪಿಎಸ್‍ಐ ಪರೀಕ್ಷೆ ಬಳಿಕ ಎಲ್ಲ ಸಿಬ್ಬಂದಿಗೆ 4 ಸಾವಿರ ಹೆಚ್ಚಿನ ಭತ್ಯೆಯನ್ನು ಶಾಲೆಯ ಒಡತಿ ದಿವ್ಯಾ ಹಾಗರಗಿ ನೀಡಿದ್ದರು. ಆ ಭತ್ಯೆ ನೀಡುವ ಸಂದರ್ಭದಲ್ಲಿ ನೆನಪಿನ ಸ್ಮರಣಾರ್ಥ ಇದೊಂದು ಐತಿಹಾಸಿಕ ದಿನವೆಂದು ಎಲ್ಲರಿಗೂ ಒಟ್ಟಿಗೆ ಕೂಡಿಸಿ ಫೋಟೋಶೂಟ್ ಮಾಡಿಕೊಂಡಿದ್ದರು. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ
Advertisement
Advertisement
ಫೋಟೋಶೂಟ್‍ನಲ್ಲಿ ಬಹುತೇಕರು ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಪರಿಣಾಮ ಇದೀಗ ಸಿಐಡಿ ಬಲೆಗೆ ಬಿದ್ದಿದ್ದಾರೆ. ಈಗ ಅಕ್ರಮದ ನೇಮಕಾತಿ ಪ್ರಕರಣ ಭೇಧಿಸಲು ಈ ಫೋಟೋಶೂಟ್ ಸಹಾಯಕವಾಗಿದೆ.
Advertisement
Advertisement
ಫೋಟೋಶೂಟ್‍ನಲ್ಲಿ ಶಾಲಾ ಸಿಬ್ಬಂದಿಗಳ ಜೊತೆಗೆ ಪೊಲಿಸ್ ಅಧಿಕಾರಿಗಳು ಸಹ ಕ್ಯಾಮೆರಾಗೆ ಪೋಸ್ ನೀಡಿದ್ದು, ಡಿವೈಎಸ್‍ಪಿ ಹೊಸಮನಿ, ಸಿಪಿಐ ಆನಂದ ಮೇತ್ರೆ, ದಿಲೀಪ್ ಸಾಗರ ಸೇರಿದಂತೆ ಹಲವರು ಭಾಗಿಯಾಗಿದ್ದು ಕಾಣಬಹುದು.