ಡಾಂಬುಲ್ಲಾ: ಶ್ರೀಲಂಕಾ (Sri Lanka) ವಿರುದ್ಧ ನಡೆದ ರೋಚಕ ಸೂಪರ್ ಓವರ್ (Super Over) ಪಂದ್ಯದ ಮುಕ್ತಾಯದ ಬೆನ್ನಲ್ಲೇ ಮೈದಾನದಲ್ಲೇ ಹೈಡ್ರಾಮಾ ನಡೆದಿದೆ. 15 ವರ್ಷದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ(Vaibhav Suryavanshi) ಮತ್ತು ಶ್ರೀಲಂಕಾ ಆಟಗಾರರ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.
ಪಂದ್ಯ ಮುಗಿದ ತಕ್ಷಣ ಶ್ರೀಲಂಕಾ ಆಟಗಾರನೊಬ್ಬ ನೀಡಿದ ಕಾಮೆಂಟ್‌ಗೆ ಸಿಟ್ಟಾದ ವೈಭವ್, ಆತನ ಎದೆಗೆ ಕೈಯಿಟ್ಟು ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಸೂಪರ್ ಓವರ್‌ಗೆ ತಿರುಗಿದ್ದು ಹೇಗೆ?
ಮೊದಲು ಬ್ಯಾಟಿಂಗ್ ಮಾಡಿದ ಭಾರತ 265 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಭಾರತದ ಬ್ಯಾಟರ್ ವಿಪ್ರಜ್ ನಿಗಮ್ ಪಿಚ್‌ನ ಮಧ್ಯದಲ್ಲಿ ಓಡಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅಂಪೈರ್‌ಗಳು ಭಾರತ ತಂಡಕ್ಕೆ 10 ರನ್‌ಗಳ ಪೆನಾಲ್ಟಿ ವಿಧಿಸಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿತು. ಬಳಿಕ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್ ಬೇಕಿದ್ದಾಗ ಬ್ಯಾಟರ್ ರನೌಟ್ಔ ಆದ ಕಾರಣ ಪಂದ್ಯ ಟೈ ಆಯಿತು.
Vaibhav was leaving silently but the sri lankan players provoked him which led to the fight in below post https://t.co/WN2PFQEdpH pic.twitter.com/uqnLV1wVWs
— Abhi (@AbhiMSD_07) June 15, 2026
ಪಂದ್ಯ ಮುಗಿದ ತಕ್ಷಣ ಮಂದ ಬೆಳಕು (Bad Light) ಇದ್ದ ಕಾರಣ, ಸೂಪರ್ ಓವರ್ ನಡೆಸಬೇಕೇ ಬೇಡವೇ ಎಂಬ ಗೊಂದಲ ಸೃಷ್ಟಿಯಾಯಿತು. ಭಾರತದ ನಾಯಕ ತಿಲಕ್ ವರ್ಮಾ ಅಂಪೈರ್‌ಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಅಂತಿಮವಾಗಿ ಥರ್ಡ್ ಅಂಪೈರ್ ನಿರ್ಧಾರದಂತೆ ಸೂಪರ್ ಓವರ್ ನಡೆಸಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಸೂಪರ್ ಓವರ್‌ನಲ್ಲಿ 16 ರನ್ ಹೊಡೆಯಿತು. 17 ರನ್‌ಗಳ ಗುರಿ ಪಡೆದ ಭಾರತ ಕಳಪೆ ಬೆಳಕಿನ ಮಧ್ಯೆ ರನ್ ಗಳಿಸಲು ಪರದಾಡಿತು. ಮೊದಲ ಎಸೆತದಲ್ಲಿ ಸೂರ್ಯಾಂಶ್ ಶೆಡ್ಜ್ 2 ರನ್ ಹೊಡೆದರೆ ಮೂರನೇ ಎಸೆತದಲ್ಲಿ 1 ರನ್ ಓಡಿದರು, ಸ್ಕ್ರೈಕ್‌ಗೆ ಬಂದ ಸೂರ್ಯವಂಶಿ ನಾಲ್ಕನೇ ಎಸೆತದಲ್ಲಿ 2 ರನ್, ಐದನೇ ಎಸೆತದಲ್ಲಿ 4 ರನ್ ಹೊಡೆದರು. ಕೊನೆಯ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ.
The two hottest moments of today’s match!
First, Tilak Varma went face-to-face with the umpire, then
Vaibhav Suryavanshi got into a heated exchange with the Sri Lankan players. pic.twitter.com/fZSVPLGmbp— Rehan 56 (@imrehan456) June 15, 2026
ಮೈದಾನದಲ್ಲೇ ತಳ್ಳಾಟ!
ಭಾರತ ಸೋತ ತಕ್ಷಣ ಶ್ರೀಲಂಕಾ ಆಟಗಾರರು ಮೈದಾನದಲ್ಲಿ ಉನ್ಮಾದದಿಂದ ಸಂಭ್ರಮಿಸಲು ಆಚರಿಸಿದರು. ಈ ವೇಳೆ ಬೇಸರದಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ಭಾರತದ ಆಟಗಾರರನ್ನು ನೋಡಿ ಶ್ರೀಲಂಕಾದ ಫೀಲ್ಡರ್ ವಿಶೇನ್ ಹಾಲಂಬ ಉದ್ದೇಶಪೂರ್ವಕವಾಗಿ ಸ್ಲೆಡ್ಜಿಂಗ್ (ಕಿಚಾಯಿಸುವುದು) ಮಾಡಿದ್ದಾರೆ.
🚨 Drama in Dambulla!
India A players, led by Tilak Varma, argued with umpires after the match vs Sri Lanka A ended in a tie, demanding a Super Over despite bad light.
Umpires eventually agreed. Pure chaos! 👀🏏#IndiaA #SriLankaA #Cricket pic.twitter.com/EwEvUg7Dvm
— Kunal Bhanwala (@bhanwala_k38130) June 15, 2026
ಎದುರಾಳಿಯ ಈ ವರ್ತನೆಯಿಂದ ತೀವ್ರ ಕೆರಳಿದ ವೈಭವ್ ಸೂರ್ಯವಂಶಿ, ನೇರವಾಗಿ ವಿಶೇನ್ ಬಳಿ ಧಾವಿಸಿ ಆತನ ಎದೆಗೆ ಕೈಯಿಟ್ಟು ಜೋರಾಗಿ ತಳ್ಳಿದರು. ಇದಕ್ಕೆ ಪ್ರತಿಯಾಗಿ ಲಂಕಾ ಆಟಗಾರ ಕೂಡ ವೈಭವ್‌ನನ್ನು ಮರಳಿ ತಳ್ಳಿದ್ದಾರೆ. ತಕ್ಷಣವೇ ಭಾರತದ ಸೂರ್ಯಾಂಶ್ ಶೆಡ್ಗೆ ಮತ್ತು ಶ್ರೀಲಂಕಾದ ಹಿರಿಯ ಆಟಗಾರ ನಿರೋಶನ್ ಡಿಕ್ವೆಲ್ಲಾ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ವೈಭವ್ ಮರಳಿ ಡಗೌಟ್ ಕಡೆ ತೆರಳುತ್ತಿದ್ದಾಗ ಲಂಕಾ ಆಟಗಾರರ ವಿರುದ್ಧ ಆಕ್ರೋಶ ಹೊರಹಾಕುತ್ತಾ ಸಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
