ಮುಂಬೈ: ಐಪಿಎಲ್ ಆರಂಭಕ್ಕೂ ಮುನ್ನ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಚೆನ್ನೈ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು, ರವೀಂದ್ರ ಜಡೇಜಾ ಅವರು ನೂತನ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಈ ಬಗ್ಗೆ ಸಿಎಸ್‍ಕೆ ತಮ್ಮ ಅಧಿಕೃತ ಟ್ವಟ್ಟರ್ ಖಾತೆಯಲ್ಲಿ ತಿಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ನ ಎಂ.ಎಸ್. ಧೋನಿ ನಾಯಕತ್ವವನ್ನು ತೊರೆದಿದ್ದು, ರವೀಂದ್ರ ಜಡೆಜಾ ಅವರು ನೂತನವಾಗಿ ನಾಯಕರಾಗಿದ್ದಾರೆ ಎಂದು ತಿಳಿಸಿದೆ.
Advertisement
???? Official Statement ????#WhistlePodu #Yellove ???????? @msdhoni @imjadeja
— Chennai Super Kings (@ChennaiIPL) March 24, 2022
2012 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡುತ್ತಿರುವ ಜಡೇಜಾ ಅವರು, ಸಿಎಸ್‍ಕೆಯನ್ನು ಮುನ್ನಡೆಸುವ ಮೂರನೇ ಆಟಗಾರನಾಗಲಿದ್ದಾರೆ. ಧೋನಿ ಈ ಟೂರ್ನಿಯಲ್ಲಿ ತಂಡದ ಆಟಗಾರನಾಗಿ ಮುಂದುವರೆಯಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಟ್ರಾನ್ಸ್‌ಫಾರ್ಮರ್‌ಗಳ ಆಡಿಟ್‍ಗೆ ಆದೇಶ: ಸುನೀಲ್ ಕುಮಾರ್
Advertisement
Advertisement
ಐಪಿಎಲ್ 2022ರ ಆರಂಭಿಕ ಪಂದ್ಯವು ಸಿಎಸ್‍ಕೆ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಧೋನಿ ನಾಯಕತ್ವದಲ್ಲಿ ಸಿಎಸ್‍ಕೆ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು. ಇದನ್ನೂ ಓದಿ: ಕೆಪಿಎಸ್‍ಸಿಗೆ ಹೊಸ ರೂಪ ಕೊಡ್ತೀವಿ: ಬೊಮ್ಮಾಯಿ