ಓಸ್ಕೊ: ನಾರ್ವೆ ಚೆಸ್-2026 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ (R. Praggnanandhaa) ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಚೆನ್ನೈ ಮೂಲದ 20 ವರ್ಷದ ಆರ್. ಪ್ರಜ್ಞಾನಂದ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಅಂತಿಮ ಸುತ್ತಿನಲ್ಲಿ ಜಯ ದಾಖಲಿಸಿದ್ದಾರೆ. ಈ ಮೂಲಕ ಪ್ರತಿಷ್ಠಿತ ʻನಾರ್ವೆ ಚೆಸ್ʼ (Norway Chess 2026) ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: Maharaja Trophy Auction – ಹರಾಜಿನಲ್ಲಿ ಬಿಕರಿಯಾಗದ ಕೆ.ಎಲ್ ರಾಹುಲ್
Heartiest Congratulations to R. Praggnanandhaa on Winning Norway Chess 2026!
The Indian Embassy in Norway proudly celebrates the remarkable achievement of R. Praggnanandhaa, the Champion of Norway Chess 2026.
Your brilliance, determination, and composure under pressure have… pic.twitter.com/R6c1HGlUDP
— India in Norway (@IndiainNorway) June 5, 2026
ದಿನದ ಆರಂಭದಲ್ಲಿ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ ಅವರು, ಬಳಿಕ ಉತ್ತಮ ಪ್ರದರ್ಶನ ನೀಡಿ ಒಟ್ಟು 18 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರು. ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಮತ್ತು ವಿಶ್ವ ಚೆಸ್ ಹಾಲಿ ಚಾಂಪಿಯನ್ ಡಿ. ಗುಕೇಶ್ ಅವರನ್ನ ಹಿಂದಿಕ್ಕಿ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ.
ಟೂರ್ನಿಯ ಆರಂಭದಲ್ಲಿ ಪ್ರಜ್ಞಾನಂದ ಅವರು 6 ಇತರೆ ಪ್ರಮುಖ ಆಟಗಾರರ ಎದುರು ನಿಧಾನಗತಿಯಲ್ಲಿ ಮುನ್ನಡೆ ಪಡೆದಿದ್ದರು. ಆದರೆ, ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ನಾರ್ವೆ ಚೆಸ್‌ನಲ್ಲಿ 7 ಬಾರಿ ಚಾಂಪಿಯನ್ ಆಗಿರುವ ಮತ್ತು ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನ 2 ಬಾರಿ ಸೋಲಿಸುವ ಮೂಲಕ ಪ್ರಜ್ಞಾನಂದ ಮೇಲುಗೈ ಸಾಧಿಸಿದ್ದರು.
ಅಂತಿಮ ಸುತ್ತಿನಲ್ಲಿ ಗುಕೇಶ್ ಪ್ರಶಸ್ತಿ ಗೆಲ್ಲುವ ರೇಸ್‌ನಿಂದ ಹೊರಬಿದ್ದಾಗ ಪ್ರಜ್ಞಾನಂದ ಅವರು ಚಾಂಪಿಯನ್ ಆಗಿ ಹೊರಹೊಮ್ಮಿ ಭಾರತದ ಕೀರ್ತಿಪತಾಕೆ ಹಾರಿಸಿದ್ದಾರೆ. ಇದನ್ನೂ ಓದಿ: ಬಿಸಿಸಿಐ ಸೂಚನೆ ಪಾಲಿಸದ ರೋಹಿತ್ – ಕೊಹ್ಲಿ ಬೆನ್ನಲ್ಲೇ ಅಫ್ಘಾನ್ ಸರಣಿಯಿಂದ ಔಟ್?

ಅಂತಿಮ ಸುತ್ತಿಗೂ ಮುನ್ನ 15.5 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದ ಅಮೆರಿಕದ ಗ್ರಾಂಡ್ ಮಾಸ್ಟರ್ ವೆಸ್ಲಿ ಸೊ ಫ್ರಾನ್ಸ್‌ನ ಅಲಿರೇಝಾ ಫೀರೋಝ್‌ಜಾ ವಿರುದ್ಧದ ಪಂದ್ಯದಲ್ಲಿ ಸಮಬಲ ಕಾಯ್ದುಕೊಂಡರು. ಇದರಿಂದಾಗಿ ಈ ಪಂದ್ಯ ಟೈ ಬ್ರೇಕರ್ ಹಂತಕ್ಕೆ ತಲುಪಿತು. ಈ ಅವಕಾಶ ಪ್ರಜ್ಞಾನಂದ ಅವರಿಗೆ ವರವಾಗಿ ಪರಿಣಮಿಸಿತು. ಅಂತಿಮವಾಗಿ ಕೀಮರ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದರು.
ಟೈ-ಬ್ರೇಕರ್ ಪಂದ್ಯದಲ್ಲಿ ವೆಸ್ಲಿ ಸೊ ಗೆದ್ದ ಹೊರತಾಗಿಯೂ, ಅವರಿಗೆ ಸಿಕ್ಕಿದ್ದು ಕೇವಲ 1.5 ಅಂಕಗಳು ಮಾತ್ರ. ಈ ಮೂಲಕ ಅವರ ಒಟ್ಟು ಅಂಕಗಳು 17ಕ್ಕೆ ತಲುಪಿತು. ಇತ್ತ ಅಂತಿಮ ಸುತ್ತು ಪ್ರವೇಶಿಸಿದ್ದ ಅಲಿರೇಝಾ 15.5 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನೂ ಹಾಲಿ ಚಾಂಪಿಯನ್ ಗುಕೇಶ್ ತಮ್ಮ ನಿರಾಶದಾಯಕ ಪ್ರದರ್ಶನದಿಂದ ಅವರು ಪ್ರಶಸ್ತಿ ಗೆಲ್ಲುವ ರೇಸ್‌ನಿಂದ ಹೊರಬಿದ್ದರು. ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಗಾಯ – ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಔಟ್
