ಕನ್ನಡದ ಜನಪ್ರಿಯ ಹಾಗೂ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಸುದ್ದಿಯಲ್ಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮೊದಲ ಟೀಸರ್ ರಿಲೀಸ್ ಆಗಿದ್ದು, ರಿಯಾಲಿಟಿ ಶೋ ಈ ವರ್ಷ ನಿರೀಕ್ಷೆಗಿಂತ ಮೊದಲೇ ಕಾಲಿಡಲಿದೆ.
‘ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ… With Something Special’ ಎಂಬ ಕ್ಯಾಪ್ಶನ್ ಜೊತೆ ರಿಲೀಸ್ ಆಗಿರುವ ಸೀಸನ್ 13ರ ಪ್ರೋಮೋ ಪ್ರೇಕ್ಷಕರ ಗಮನ ಸೆಳೆದಿದೆ. ಇದನ್ನೂ ಓದಿ: ಜು.5ರಂದು ಪ್ರೇಯಸಿ ಗೌರಿ ಜೊತೆ ಆಮೀರ್ ಖಾನ್ 3ನೇ ಮದುವೆ
View this post on Instagram
ಪ್ರೋಮೋದಲ್ಲಿ ರಿಲೀಸ್ ದಿನಾಂಕ, ಸ್ಪರ್ಧಿಗಳ ವಿಚಾರವನ್ನು ಬಹಿರಂಗಪಡಿಸಿಲ್ಲ. ಆದರೆ, ಮುಂಬರುವ ಸೀಸನ್ ತುಂಬಾ ವಿಶಿಷ್ಟವಾದದ್ದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಪ್ರೋಮೋ ವಿಶೇಷತೆಯಿಂದ ಕೂಡಿದೆ. ವಿನೂತನ ರೀತಿಯಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗೆ ರಸದೌತಣ ನೀಡುವ ಭರವಸೆಯನ್ನು ಬಿಗ್ ಬಾಸ್ ನೀಡಿದೆ. ನಟ ಕಿಚ್ಚ ಸುದೀಪ್ (Kiccha Sudeep) ಮತ್ತೊಮ್ಮೆ ನಿರೂಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಡಾನ್ 3 ಸಿನಿಮಾ ವಿವಾದ – ರಣವೀರ್ ಸಿಂಗ್ ವಿರುದ್ಧದ ಅಸಹಕಾರ ಸೂಚನೆ ಹಿಂಪಡೆದ FWICE
ಬಿಗ್ ಬಾಸ್ ಸೀಸನ್ 12 ಅನ್ನು ಗಿಲ್ಲಿ ನಟ (Gilli Nata) ಗೆದ್ದುಕೊಂಡಿದ್ದರು. ಶೋ ವೀಕ್ಷಣೆಯಲ್ಲಿ ಆ ಸೀಸನ್ ದಾಖಲೆ ಬರೆದಿತ್ತು. ಈಗ ಮತ್ತೆ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲು ಬಿಗ್ ಬಾಸ್ ಅಣಿಯಾಗಿದೆ.
