ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ನೇತೃತ್ವದ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ಎರಡೇ ದಿನದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಖಾತೆ ಹಂಚಿಕೆ ವಿಚಾರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಪ್ರಹಸನ ಮುಂದುವರಿದಿದೆ.
ರಾಮಲಿಂಗಾ ರೆಡ್ಡಿ ಅವರು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಬಹುತೇಕ ವಾಪಸ್ ಪಡೆದಿದ್ದಾರೆ ಎಂದು ಮೂಲಗಳು ಹೇಳುತ್ತಿದ್ದರೂ, ಇನ್ನೂ ಅಧಿಕೃತಗೊಂಡಿಲ್ಲ. ಅಲ್ಲದೇ ಸಿಎಂ ಮನವೊಲಿಕೆಗೆ ಒಪ್ಪಿ ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುತ್ತಾರಾ ಅನ್ನೋದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಇದನ್ನೂ ಓದಿ: ರಾಜೀನಾಮೆ ಕೊಟ್ಟ ರಾಮಲಿಂಗಾರೆಡ್ಡಿ ಭೇಟಿಯಾದ ಸಿಎಂ – ಮನವೊಲಿಕೆಗೆ ಯತ್ನ
ರಾಜೀನಾಮೆ ವಾಪಸ್ ತೆಗೆದುಕೊಳ್ಳುವಂತೆ ರಾಮಲಿಂಗಾ ರೆಡ್ಡಿ (Ramalinga Reddy) ಅವರ ಮನವೊಲಿಸುವ ಯತ್ನವನ್ನ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ವರಿಷ್ಠರು ನಡೆಸಿದ್ದಾರೆ. ಶುಕ್ರವಾರ ತಡರಾತ್ರಿ ಸಿಎಂ ಡಿಕೆಶಿ ರಾಮಲಿಂಗಾ ರೆಡ್ಡಿ ಅವರೊಟ್ಟಿಗೆ ಸತತ ಎರಡೂವರೆಗಂಟೆಗಳ ಕಾಲ One To One ಮೀಟಿಂಗ್ ನಡೆಸಿ, ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ ರಾಮಲಿಂಗಾ ರೆಡ್ಡಿ ತಮ್ಮ ನಿಲುವಿನ ಬಗ್ಗೆ ಸ್ಪಷ್ಟಪಡಿಸದೇ ಕಮ್ಯೂನಿಕೇಷನ್ ಗ್ಯಾಪ್ ಆಗಿದೆ ಎಂದಷ್ಟೇ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಏನ್ ಹೇಳಿದ್ದಾರೋ ಅದನ್ನೇ ನಾನು ಹೇಳೋದು. ಎಲ್ಲಾ ನಿವಾರಣೆಯಾಗಿದೆ ಎಂದಷ್ಟೆ ಹೇಳಿದ ರೆಡ್ಡಿ, ರಾಜೀನಾಮೆ ವಾಪಸ್ ಹಾಗೂ ಜಲಸಂಪನ್ಮೂಲ ಖಾತೆಯಲ್ಲಿ ಮುಂದುವರೆಯುವ ಬಗ್ಗೆ ಮೌನವಹಿಸಿದ್ದಾರೆ.
ಇನ್ನೂ ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾನು, ರಾಮಲಿಂಗಾರೆಡ್ಡಿ, ರೇವಣ್ಣ 80 ರಿಂದ ನಾವೆಲ್ಲ ಫ್ರೆಂಡ್ಸ್. ನಾನು ಪ್ರೆಸಿಡೆಂಟ್.. ಅವ್ರು ವರ್ಕಿಂಗ್ ಪ್ರೆಸಿಡೆಂಡ್. ನಾನು ಚೀಫ್ ಮಿನಿಸ್ಟರ್, ಅವ್ರು ಮಿನಿಸ್ಟರ್. ನಾವು ಪಕ್ಷದಲ್ಲಿ ಬೆಳೆದವರು. ಪಕ್ಷ ಉಳಿಸ್ತಾ ಇರೋರು. ಬೆಂಗಳೂರಿಗೆ ಒಳ್ಳೆದು ಆಗ್ಬೇಕು ಅನ್ನೋವರು ನಾವು. ಇದು ಫ್ಯಾಮಿಲಿ ಪ್ರಾಬ್ಲಂ..(ಪಕ್ಷದ ಸಮಸ್ಯೆ), ಎಲ್ಲಾ ಕೂತು ಮಾತನಾಡಿದ್ದೇವೆ. ಪರಿಹಾರ ಆಗಿದೆ ಎಂದಿದ್ದಾರೆ.
ಇನ್ನೂ ಖಾತೆ ಬದಲಾವಣೆಗೆ ಒಪ್ಪಿಕೊಂಡ್ರಾ ಅನ್ನೋ ಪ್ರಶ್ನೆಗೆ ಉತ್ತರಿಸಿ, ಅವ್ರ ನೋವನ್ನ ಹೇಳಿಕೊಂಡಿದ್ದಾರೆ. ಮಿಸ್ ಕಮ್ಯೂನಿಕೇಶನ್ ಆಗಿದೆ ಎಂದಷ್ಟೇ ಹೇಳಿ ಸ್ಪಷ್ಟ ಉತ್ತರ ಕೊಡದೇ ತೆರಳಿದ್ದಾರೆ. ಇದನ್ನೂ ಓದಿ: ಗೃಹಪ್ರವೇಶದ 3ನೇ ದಿನವೇ ಛಾವಣಿ ಕುಸಿತ: ಸರ್ಕಾರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
