ಬೆಳಗಾವಿ: ಇನ್ಶೂರೆನ್ಸ್ ಹಣದ ಆಸೆಗಾಗಿ ಚಿನ್ನದಂಗಡಿಗೆ ತಾನೇ ಕನ್ನ ಹಾಕಿ ಕಳ್ಳತನದ ಕತೆ ಕಟ್ಟಿದ್ದ ಅಂಗಡಿ ಮಾಲೀಕನನ್ನು ಬೆಳಗಾವಿಯ (Belagavi) ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ.
ವಿ.ಪಿ.ವೇರ್ಣೇಕರ್ ಆಂಡ್ ಸನ್ಸ್ ಚಿನ್ನದಂಗಡಿ ಮಾಲೀಕ ಕೃಷ್ಣಾನಂದ ವೇರ್ಣೇಕರ್ ಬಂಧಿತ ಆರೋಪಿ. ಈತ 65.95 ಲಕ್ಷ ರೂ. ಮೌಲ್ಯದ ಚಿನ್ನ (Gold) ಹಾಗೂ ನಗದು ಹಣ ಕಳ್ಳತನವಾಗಿದೆ ಎಂದು ಖಡೇಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಪ್ರಕರಣದ ತನಿಖೆಗೆ ಇಳಿದ ಪೊಲೀಸರು ದೂರು ನೀಡಿದ ಅಂಗಡಿ ಮಾಲೀಕನೇ ಆರೋಪಿ ಎಂದು ತಿಳಿದು ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ಟ್ರ‍್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ – ತಂದೆ, ಮಗಳು ಸ್ಥಳದಲ್ಲೇ ದುರ್ಮರಣ
ಕದ್ದ ಹಣ, ಚಿನ್ನಾಭರಣವನ್ನು ಆರೋಪಿ ತನ್ನದೇ ಸ್ಕೂಟಿ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ. ಆರೋಪಿಯಿಂದ 45,000 ರೂ. ಮೌಲ್ಯದ ಬೈಕ್, 62,60,990 ರೂ. ಮೌಲ್ಯದ 519.8 ಗ್ರಾಂ ಚಿನ್ನಾಭರಣ, 6000 ರೂ. ಮೌಲ್ಯದ 31 ಗ್ರಾಂ ಬೆಳ್ಳಿ ಆಭರಣ, 2,83010 ರೂ. ನಗದು ಹಣ ಸೇರಿ ಒಟ್ಟು 65.95 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು ಕೈಚಳಕ; ‘ಸಾವಿನ ಕಂಟಕ’ ಎಂದು ಹೆದರಿಸಿ ಚಿನ್ನಾಭರಣ ದೋಚಿದ ಖದೀಮ
