ಇತ್ತೀಚೆಗೆ ಬದಲಾಗಿರುವ ಲುಕ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media Troll) ಟ್ರೋಲ್‌ಗೆ ಗುರಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan), ಇದೀಗ ಒಂದು ಪೋಸ್ಟ್ ಮೂಲಕ ಟ್ರೋಲ್‌ಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಎಸ್‌ಆರ್‌ಎ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಆ ವೇಳೆ ಅವರ ಮುಖದಲ್ಲಿ ಹಿಂದಿನಂತ ಕಳೆ ಕಾಣಿಸಲಿಲ್ಲ. ಇದರಿಂದ ಅವರ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿದ್ದಂತೆ, ಸಲ್ಮಾನ್‌ಗೆ ಆರೋಗ್ಯ ಸಮಸ್ಯೆಯೇ?, ಏಕೆ ಇಷ್ಟು ಬದಲಾಗಿದ್ದಾರೆ? ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಕೆಲವರು ಅವರ ವಯಸ್ಸು ಮತ್ತು ಆರೋಗ್ಯದ ಬಗ್ಗೆ ಟ್ರೋಲ್ ಮಾಡಿದ್ದರು.
ಈ ಎಲ್ಲ ಚರ್ಚೆಗಳ ನಡುವೆ ಸಲ್ಮಾನ್ ಖಾನ್ ಸೋಮವಾರ ತಮ್ಮ X ಖಾತೆಯಲ್ಲಿ, ನಿಮ್ಮೆಲ್ಲರ ಆರೋಗ್ಯ ಈಗ ಹೇಗಿದೆ? ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಟ್ರೋಲ್ ಮಾಡಿದವರಿಗೆ ಪರೋಕ್ಷ ತಿರುಗೇಟು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ ರಾಮಾಯಣ ಪ್ಯಾನ್ ವರ್ಲ್ಡ್ ಟ್ರೈಲರ್ ಬಿಡುಗಡೆಯ ಪ್ರಥಮ ಸಂಕಲ್ಪ
ಯಸ್ಸಿನ ವಿಚಾರಕ್ಕೂ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆದರೆ ಈ ವಯಸ್ಸಿನಲ್ಲೂ ತಮ್ಮ ಫಿಟ್ನೆಸ್ ಮತ್ತು ದೇಹದಾರ್ಢ್ಯವನ್ನು ಕಾಪಾಡಿಕೊಂಡಿದ್ದಾರೆ. ಇತ್ತೀಚಿನ ಲುಕ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸಲ್ಮಾನ್ ಅವರ ಹೊಸ ಪೋಸ್ಟ್ ಈಗ ಮತ್ತೆ ವೈರಲ್ ಆಗಿದ್ದು, ಅಭಿಮಾನಿಗಳು ಭಾಯ್ ಸ್ಟೈಲ್‌ನಲ್ಲೇ ಉತ್ತರ ಕೊಟ್ಟಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಇದನ್ನೂ ಓದಿ: ರಕುಲ್ ಪ್ರೀತ್ ಸಿಂಗ್ ಅಭಿನಯಕ್ಕೆ ಯಶ್ ಫಿದಾ – ಶೂರ್ಪನಖಿ ಪಾತ್ರಕ್ಕೆ ಮೆಚ್ಚುಗೆ
