ಚಿಕ್ಕೋಡಿ: ಅಥಣಿಯಲ್ಲಿ (Athani) ಮಳೆ ಅಬ್ಬರಕ್ಕೆ ಬೃಹತ್ ಕಟ್ಟಡವೊಂದು (Building collapse) ನೆಲಕ್ಕುರುಳಿದೆ. ಕಟ್ಟಡ ನೆಲಕ್ಕುರುಳವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಶುಕ್ರವಾರ (ಜೂ.5) ರಾತ್ರಿ ಸುರಿದ ಮಳೆಗೆ (Rain) ಅಥಣಿ ಪಟ್ಟಣದ ಹಲ್ಯಾಳ ರಸ್ತೆಯಲ್ಲಿರುವ ಶಿಥಿಲಾವಸ್ಥೆಯ ಕಟ್ಟಡ ಕುಸಿದು ಬಿದ್ದಿದೆ. ರಾವಸಾಬ ಐಹೊಳೆ ಎಂಬವವರಿಗೆ ಈ ಕಟ್ಟಡ ಸೇರಿದೆ. ಕಟ್ಟಡ ಬೀಳುವ ಸಂದರ್ಭದಲ್ಲಿ ಯಾರು ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಇದನ್ನೂ ಓದಿ: ರಾಜ್ಯಕ್ಕೆ ಮುಂಗಾರು ಪ್ರವೇಶ – ರೈತರಿಗೆ ಬಿತ್ತನೆ ಕಾರ್ಯಕ್ಕೆ ಸೂಚನೆ
ಕಟ್ಟಡ ಬೀಳುವ ದೃಶ್ಯಗಳು ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ. ಇದನ್ನೂ ಓದಿ: ಚಾ.ನಗರ| ಸೇತುವೆಗೆ ಆಟೋ ಡಿಕ್ಕಿ – ಇಬ್ಬರು ಸಾವು
