DistrictsKarnatakaKoppalLatestLeading NewsMain Post

ಟ್ರ್ಯಾಕ್ಟರ್ ಏರಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಸಂಸದ ಸಂಗಣ್ಣ ಕರಡಿಯವರು ಟ್ರ್ಯಾಕ್ಟರ್ ಏರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಕೊಪ್ಪಳ ತಾಲೂಕಿನ ಮಂಗಳಾಪೂರ, ಕೋಳುರು ಹಾಗೂ ಚಿಕ್ಕಸಿಂಧೋಗಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಿಡ್ಜ್ ಕಂ ಬ್ಯಾರೇಜ್ ಗಳಿಗೆ ಭೇಟಿ ನೀಡಿ ರೈತರೊಂದಿಗೆ ಹಾನಿ ಬಗ್ಗೆ ಸಂಸದರು ಚರ್ಚೆ ನಡೆಸಿದ್ದಾರೆ.

ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯದೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಬ್ರಿಡ್ಜ್ ಕಂ ಬ್ಯಾರೇಜ್ ಅಕ್ಕ-ಪಕ್ಕದ ಜಮೀನಿನ ಬೆಳೆ ನಾಶವಾಗಿತ್ತು. ಜಮೀನಿನಲ್ಲಿದ್ದ ಪಂಪಸೆಟ್ ಗಳು ಕೊಚ್ಚಿ ಹೋಗಿದ್ದವು. ಮಳೆಯಿಂದ ಹಾನಿಯಾದ ಈ ಪ್ರದೇಶಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳಿದರು. ಇದನ್ನೂ ಓದಿ: ಜಮ್ಮು ಸುರಂಗ ಕುಸಿತ – 10 ಮೃತದೇಹಗಳು ಪತ್ತೆ

ಇದೇ ವೇಳೆ ಸಂದರು, ರೈತರಿಗೆ ಸೂಕ್ತ ಪರಿಹಾರ ಕೊಡುವ ಭರವಸೆಯನ್ನು ಕೂಡ ನೀಡಿದರು. ಪಂಪ್ ಸೆಟ್ ಗಳಿಗೆ SDRF,NDRF ನಲ್ಲಿ ಪರಿಹಾರ ಕೊಡೋ ಬಗ್ಗೆ ಚರ್ಚೆ ಮಾಡಲಾಗವುದು. ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಅನೇಕ ರೈತರಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published.

Back to top button