ಬೆಂಗಳೂರು: ಬೆಂಗಳೂರಲ್ಲಿ (Bengaluru) ಗುಡುಗು ಸಹಿತ ಭಾರೀ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 3 ಗಂಟೆ ಮಳೆ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ಇದನ್ನೂ ಓದಿ: ಅಂಕೋಲ ಮೂಲದ ಮೀನುಗಾರಿಕಾ ಬೋಟ್ ಮುಳುಗಡೆ – ಏಳು ಜನರ ರಕ್ಷಣೆ
ಸಾರ್ವಜನಿಕರು ಮಳೆ ಗಾಳಿಯ ವೇಳೆ ಅನಗತ್ಯ ಹೊರಗೆ ಓಡಾಡುವುದು, ಅಸುರಕ್ಷಿತ ಕಟ್ಟಡ, ಮರಗಳ ಕೆಳಗೆ, ಶಿಥಿಲಾವಸ್ಥೆಯಲ್ಲಿರುವ ಗೋಡೆಗಳ ಬಳಿ ನಿಲ್ಲದಂತೆ ಎಚ್ಚರಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಹಠಾತ್ ಆಗಿ ಸಂಜೆ ವೇಳೆಗೆ ಶುರುವಾಗುವ ಮಳೆಯಿಂದ ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ. ಇದನ್ನೂ ಓದಿ: ಡಿಕೆ ಶಿವಕುಮಾರ್‌ಗೆ ಅಧಿಕಾರ ಸಿಕ್ಕರೆ ನನಗೆ ಸಿಕ್ಕಹಾಗೇ – ಮಂಡ್ಯ ಜಿಲ್ಲೆಗೆ 2 ಸಚಿವ ಸ್ಥಾನದ ಬೇಡಿಕೆಯಿಟ್ಟ ಗಣಿಗ ರವಿಕುಮಾರ್
