ಹಾಸನ: ದಬ್ಬಾಳಿಕೆ ರಾಜಕಾರಣ ಒಪ್ಪಲ್ಲ, ಹಿಟ್ಲರ್ ಸಂಸ್ಕೃತಿಯನ್ನು ಹಾಸನದ ಜನರು ಒಪ್ಪುವುದಿಲ್ಲ. ಜೆಡಿಎಸ್(JDS) ಕಾರ್ಯಕರ್ತರ ಸಭೆಗೆ ಪೊಲೀಸ್ ಪ್ರೊಟೆಕ್ಷನ್ ಕೇಳುವ ಸ್ಥಿತಿಗೆ ರೇವಣ್ಣ ಬಂದಿದ್ದಾರೆ ಎಂದರೆ, ಅವರ ಪರಿಸ್ಥಿತಿ ರಾಜಕೀಯವಾಗಿ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಊಹೆ ಮಾಡಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ(HD Revanna) ಅವರ ವಿರುದ್ಧ ಶಾಸಕ ಪ್ರೀತಂ ಗೌಡ(Preetham Gowda) ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರನ್ನು ಒಂದು ಸಭೆಯಲ್ಲಿ ರೌಡಿಶೀಟರ್ ಎಂದರು. ಇನ್ನೊಂದು ಸಭೆಯಲ್ಲಿ ಕುಡುಕರು ಎಂದರು. ನಾನು ಬೇರೆ ಪಕ್ಷದ ಕಾರ್ಯಕರ್ತರ ಬಗ್ಗೆ ಮಾತನಾಡುವುದೇ ಇಲ್ಲ. ಆದರೆ ರೇವಣ್ಣ ಅವರು ತಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆಯೇ ಆ ತರಹ ಮಾತನಾಡಿದ್ದಾರೆ ಎಂದರು.
Advertisement
Advertisement
ಜೆಡಿಎಸ್ ಕಾರ್ಯಕರ್ತರ ಸಭೆಗೆ ಪೊಲೀಸ್ ಪ್ರೊಟೆಕ್ಷನ್ ಕೇಳುವ ಸ್ಥಿತಿಗೆ ರೇವಣ್ಣ ಅವರು ಬಂದಿದ್ದಾರೆ ಅಂತ ಹೇಳಿದರೆ, ರೇವಣ್ಣ ಅವರ ಪರಿಸ್ಥಿತಿ ರಾಜಕೀಯವಾಗಿ ಏನಾಗಿದೆ ಅಂತ ಕ್ಷಣಕ್ಕೆ ಊಹೆ ಮಾಡಿ. ನಾನು ನಮ್ಮ ಕಾರ್ಯಕರ್ತರ ಸಭೆ ನಡೆಸಬೇಕಾದರೆ ಪೊಲೀಸರನ್ನು ಕರೆಯುವುದೇ ಇಲ್ಲ. ಗೌಪ್ಯವಾಗಿ ಸಭೆ ಮಾಡುತ್ತೇನೆ. ಅವರ ಕಾರ್ಯಕರ್ತರ ಜೊತೆ ಅವರು ಮಾತನಾಡಲು ಪೊಲೀಸ್ ಪ್ರೊಟೆಕ್ಷನ್ ಬೇಕು ಎಂದರೆ, ಅವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಯೋಚಿಸಿ ಎಂದು ಕುಟುಕಿದರು. ಇದ್ನನೂ ಓದಿ: ಗಣಪತಿ ಡಿಜೆ – ನಿಮ್ಮ ಪುಂಗಿ ಇಲ್ಲಿ ನಡಿಯೋದಿಲ್ಲ, ನೀವು ಪುಂಗಿ ಊದಿದ್ರೆ, ನಾವು ನಮ್ಮ ಪುಂಗಿ ಊದುತ್ತೇವೆ: ಇನ್ಸ್‌ಪೆಕ್ಟರ್ ಅವಾಜ್
Advertisement
ನನ್ನ ಸಭೆಗೆ ನಾನು ಯಾವತ್ತೂ ಪೊಲೀಸರನ್ನು ಕರೆಯುವುದಿಲ್ಲ. ನನ್ನ ಕಾರ್ಯಕರ್ತರ ಮೇಲೆ ನನಗೆ ನಂಬಿಕೆ ಇದೆ. ನಮ್ಮ ಕಾರ್ಯಕರ್ತರನ್ನು ನಾವು ಯಾವತ್ತೂ ಕುಡುಕರು, ರೌಡಿಶೀಟರ್ ಅಂತ ಕರೆಯುವುದಿಲ್ಲ. ಸಭೆಯಿಂದ ಎದ್ದು ಹೋಗಿ ಅಂತ ಹೇಳೋದಿಲ್ಲ ಎಂದು ತಿಳಿಸಿದರು.
Advertisement
ನಮ್ಮ ಐಡಿಯಾಲಜಿಯನ್ನು ಹಾಸನದ ಜನರು ಒಪ್ಪಿದ್ದಾರೆ. ಅವರ ಐಡಿಯಾಲಜಿಯನ್ನು ಹಾಸನದ ಜನ ಒಪ್ಪುವುದಿಲ್ಲ. ಅವರ ಐಡಿಯಾಲಜಿ ಎಂದರೆ ಕಾರ್ಯಕರ್ತರನ್ನು ಎದ್ದು ಹೋಗಿ ಎನ್ನುವುದು, ಕುಡುಕರು, ರೌಡಿಶೀಟರ್ ಎನ್ನುವುದು. ಆ ಐಡಿಯಾಲಜಿಯನ್ನು, ದಬ್ಬಾಳಿಕೆ ರಾಜಕಾರಣವನ್ನು, ಹಿಟ್ಲರ್ ಸಂಸ್ಕೃತಿಯನ್ನು ಹಾಸನದ ಜನ ಒಪ್ಪುವುದಿಲ್ಲ. ಇಲ್ಲಿ ಏನೇ ಇದ್ದರೂ ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವುದು ಎಂದು ಟೀಕಿಸಿದರು.
ಸಾಮಾನ್ಯ ಕಾರ್ಯಕರ್ತರನ್ನೂ ನಾನು ಅಣ್ಣ ಎಂದೇ ಮಾತನಾಡಿಸುತ್ತೇನೆ, ಹೋಗಿ ಬನ್ನಿ ಎನ್ನುತ್ತೇನೆ. ನಾನು ಯಾರಿಗೂ ಇಲ್ಲಿಯವರೆಗೆ ಏಕವಚನದಲ್ಲಿ ಮಾತನಾಡಿಸಿಲ್ಲ. ಇನ್ನು ಎದ್ದು ಹೋಗಿ ಎನ್ನುವುದು ದೂರದ ಪ್ರಶ್ನೆ. ಇದೇ ಪ್ರೀತಂ ಗೌಡನಿಗೂ ಮಾನ್ಯ ರೇವಣ್ಣ ಅವರಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.
ಹಾಸನದ ಜನರು ಮಾತ್ರ ಕೂಲಿ ಕಾರ್ಮಿಕರಾಗಿ ಇರಬೇಕು, ಇವರು ಮಾತ್ರ ಕಾರಿನಲ್ಲಿ ಓಡಾಡಬೇಕು. ರೈತರ ಭೂಮಿಗೆ ಬೆಲೆ ಬಂದರೆ ಕಾರಿನಲ್ಲಿ ಓಡಾಡುತ್ತಾರೆ. ಇವರು ಮಾತ್ರ ಕಾರಿನಲ್ಲಿ ಓಡಾಡಬೇಕಾ? ನಿಮ್ಮ ಕಾರ್ಯಕರ್ತರೇ ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ, ನಾವು ಕಾರ್ಯಕರ್ತರನ್ನು ದೇವರು ಎಂದು ಕರೆಯುತ್ತೇವೆ. 45 ವರ್ಷ ರಾಜಕೀಯ ಮಾಡಿರುವವರು 5 ವರ್ಷ ರಾಜಕೀಯ ಮಾಡಿರೋ ಪ್ರೀತಂ ಗೌಡನ ಬಗ್ಗೆ ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಾರೆ? ಆರಾಮಾಗಿ ಇರಲು ಹೇಳಿ ಎಂದು ವ್ಯಂಗ್ಯವಾಡಿದರು. ಇದ್ನನೂ ಓದಿ: ಗಣಿಗಾರಿಕೆಯಿಂದ ಭಾರತದ GDPಗೆ ಶೇ.2.5 ರಷ್ಟು ಕೊಡುಗೆ: ಪ್ರಲ್ಹಾದ್ ಜೋಶಿ