ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ದುಡ್ಡು ಕೊಟ್ಟು ಮ್ಯಾಚ್ ನೋಡ್ತಾರಾ? ಅಥವಾ ಪುಗ್ಸಟ್ಟೆ ನೋಡ್ತಾರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಟಿಕೆಟ್‌ಗಾಗಿ ಒತ್ತಡದಿಂದ ಐಪಿಎಲ್ ಪೈನಲ್ ಮ್ಯಾಚ್ ಸ್ಥಳಾಂತರಗೊಂಡಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು. ಐಪಿಎಲ್ ಟಿಕೆಟ್ ಶಾಸಕರು ಕೇಳಿದ್ದಾರೆ. ಎಂಪಿಗಳು ಕೇಳಿದ್ದಾರೆ ಅಂತ ಏನಿಲ್ಲ. ಮೊದಲು ಸದನದಲ್ಲಿ ವಿಪಕ್ಷ ನಾಯಕ ಅಶೋಕ್ ಪ್ರಸ್ತಾಪ ಮಾಡಿದ್ರು. ಬಳಿಕ ಎಲ್ಲರೂ ಅದಕ್ಕೆ ಧ್ವನಿಗೂಡಿಸಿದ್ದರು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೋಲ್ಕತ್ತಾಗೆ ಇಂದು ಅಮಿತ್ ಶಾ ಭೇಟಿ – ಬಂಗಾಳ ನೂತನ ಸಿಎಂ ಹೆಸರು ಇಂದೇ ಘೋಷಣೆ?
ಟಿಕೆಟ್ ಕೊಡುವುದು ತಪ್ಪು ಅಂತ ಕೆಲವರು ಹೇಳಿದ್ದಾರೆ. ಈಗಾಗಲೇ ಐದಾರು ಮ್ಯಾಚ್ ನಡೆದಿದೆ. ಅದೆಲ್ಲ ಹೇಗೆ ನಡೆಯಿತು? ಈಗ ಲಾಭಕ್ಕಾಗಿ ಗುಜರಾತ್‌ಗೆ ಶಿಫ್ಟ್ ಮಾಡಿದ್ದಾರೆ. ಸದನದಲ್ಲಿ ಬಿಜೆಪಿ ವಿಪಕ್ಷ ನಾಯಕರೇ ಐಪಿಎಲ್ ಟಿಕೆಟ್ ಕೇಳಿದ್ದರು. ಹಾಗಾದರೆ ಮ್ಯಾಚ್ ಹೋಗಲು ಬಿಜೆಪಿನೇ ಕಾರಣನಾ? ಸುಮ್ಮನೆ ಎನೇನೋ ಹೇಳೋದಲ್ಲ. ಹೆಚ್ಚು ಲಾಭ ಬೇಕಿದೆ. ಅದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ರಾಜ್ಯಕ್ಕೆ ಬಂಡವಾಳದಲ್ಲಿ ಅನ್ಯಾಯ ಮಾಡುವ ಹಾಗೇ ಇಲ್ಲೂ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಭದ್ರತೆ ವಿಷಯದಲ್ಲಿ ಶಾಸಕರು, ಸಂಸದರದ್ದು ಯಾವ ಸಮಸ್ಯೆಯೂ ಇಲ್ಲ. ಯಾರು ಮೇಲ್ ಮಾಡಿದ್ದಾರೋ ಗೊತ್ತಿಲ್ಲ. ಬಾಂಬೆಯಲ್ಲಿ ಮಾಡಬಹುದಿತ್ತು. ಗುಜರಾತ್‌ಗೆ ಯಾಕೆ ಶಿಫ್ಟ್ ಮಾಡಿದ್ರು?ಇರೋ ಬರೋ ಮ್ಯಾಚ್ ಎಲ್ಲಾ ಗುಜರಾತ್‌ಗೆ ಯಾಕೆ ಶಿಪ್ಟ್ ಮಾಡ್ತಿರೋದು? ಇದನ್ನು ಬಹಳ ಸ್ಪಷ್ಟವಾಗಿ ಸಿಎಂ, ಡಿಸಿಎಂ ಎಲ್ಲ ಖಂಡಿಸಿದ್ದಾರೆ. ಗೌರವಯುತವಾಗಿ ಟಿಕೆಟ್ ಕೊಟ್ಟರೆ ಅಡ್ಡಿಯಿಲ್ಲ. ಯಾವ ಶಾಸಕರು ಅಷ್ಟು ಬೇಕು ಇಷ್ಟು ಬೇಕು ಎಂದು ಕೇಳಿಲ್ಲ ಎಂದರು.
ತಮಿಳುನಾಡು ಅತಂತ್ರ | ರಾಜ್ಯಪಾಲರೇ, ರಾಜಕೀಯ ಬೇಡ – ಪ್ರಿಯಾಂಕ್ ಖರ್ಗೆ
ತಮಿಳುನಾಡಿನಲ್ಲಿ (Tamil Nadu) ರಾಜ್ಯಪಾಲರು ಬೆಂಬಲ ಪತ್ರ ಕೇಳಿರುವ ವಿಚಾರವಾಗಿ, ಅಲ್ಲಿ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಕೇರಳದಲ್ಲಿ ಬಹುಮತ ಸಿಕ್ಕಿದೆ ಇಂದು ಎಲ್ಲಾ ಕುಳಿತು ತೀರ್ಮಾನ ನಡೆಸಿ ಹೈಕಮಾಂಡ್‌ಗೆ ತಿಳಿಸ್ತಾರೆ. ಖರ್ಗೆ ಸಾಹೇಬ್ರು, ರಾಹುಲ್ ಗಾಂಧಿಯವರು ಕುಳಿತು ಘೋಷಣೆ ಮಾಡ್ತಾರೆ. ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರೋದಾಗಿ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಗವರ್ನರ್ ಅಡ್ಡಿಪಡಿಸುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಹೇಗೆ ಅವಕಾಶ ಕೊಟ್ಟರೋ ಹಾಗೇ ಇಲ್ಲೂ ಕೊಡಿ. ಬಹುಮತ ರಾಜ್ಯಪಾಲರ ಅಂಗಳದಲ್ಲಿ ಸಾಬೀತು ಮಾಡಬೇಕಿಲ್ಲ. ಸದನದ ಒಳಗಡೆ ಸಾಬೀತು ಮಾಡಬೇಕು ಅಲ್ಲಿ ಪ್ರೂವ್ ಮಾಡೋಕೆ ಆಗಿಲ್ಲ ಎಂದರೆ ಅದು ಬೇರೆ ವಿಚಾರ. ಅದಕ್ಕಿಂತ ಮುಂಚೆ ತೆಗೆದುಕೊಂಡು ಬನ್ನಿ ಎಂದರೆ ಹೇಗೆ? ಕಳೆದ ಒಂದು ದಶಕದಿಂದ ಗವರ್ನರ್ ಕಚೇರಿ ಬಿಜೆಪಿ (BJP), ಆರ್‌ಎಸ್‌ಎಸ್ (RSS) ಕಚೇರಿಯಾಗಿ ಬಳಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಮಹಾರಾಷ್ಟ್ರದಲ್ಲಿ ಬೆಳಿಗ್ಗೆ 5 ಗಂಟೆಗೆ ಪ್ರಮಾಣ ವಚನ ಮಾಡಿದಾಗ ಎಷ್ಟು ಸಹಿ ತಗೆದುಕೊಂಡಿದ್ರಿ? ತಮಿಳುನಾಡು ಗವರ್ನರ್ ಎಷ್ಟು ಸಲ ವಾಕ್ ಔಟ್ ಮಾಡಿದ್ದಾರೆ? ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಸಂವಿಧಾನಕ್ಕಿಂತ ದೊಡ್ಡವರಲ್ಲ. ಸಂವಿಧಾನದ ಹುದ್ದೆಯ ಮೂಲಕ ರಾಜಕೀಯ ಮಾಡೋದು ಬೇಡ. ರಾಜಕೀಯಕ್ಕೆ ಸೇರಿ ಸುಮ್ಮನೆ ಯಾಕೆ ಆ ಹುದ್ದೆಗೆ ಅಗೌರವ ತೋರುತ್ತಿರಿ ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಬಹುಮತದೊಂದಿಗೆ DMK- AIADMK ಬಂದ್ರೂ ಸರ್ಕಾರ ರಚನೆಗೆ ಅವಕಾಶವಿದೆ: ರಾಜ್ಯಪಾಲ ಅರ್ಲೇಕರ್

