Connect with us

Bengaluru City

ಬೆಳೆಯಲು ಪ್ರತಿಭೆ ಬಳಸಿ, ವಾಮಮಾರ್ಗ ಬೇಡ: ಚೇತನ್‍ಗೆ ಜಗ್ಗೇಶ್ ಟಾಂಗ್

Published

on

ಬೆಂಗಳೂರು: ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗ ನಡೆಯುತ್ತಿರುವ ಮಹದಾಯಿ ಹೋರಾಟಗಾರರ ಪ್ರತಿಭಟನೆಗೆ ಬೆಂಬಲ ನೀಡಿ ಚಿತ್ರರಂಗದ ನಟರು ಹೋರಾಟಕ್ಕೆ ಕೊನೆಯವರೆಗೂ ಬೆಂಬಲ ನೀಡಬೇಕು ಎಂದು ಹೇಳಿದ್ದ ನಟ ಚೇತನ್ ಅವರ ಹೇಳಿಕೆಗೆ ನಟ ಜಗ್ಗೇಶ್ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.

ಯಾಕೆ ಪಾಪ ಈತ ಹೀಗೆ. ಪ್ರತಿ ನಡೆಯು ತಮ್ಮ ಉದ್ದೇಶ ಜಾಣ ಪ್ರೇಕ್ಷಕರಿಗೆ ಅರಿವಾಗಿದೆ. ನಮ್ಮತನ ವೃದ್ಧಿಸಿಕೊಳ್ಳುವ ಜಾತ್ರೆಗಿಂತ ಹೃದಯ ದೇವರು ಜನಮೆಚ್ಚುವಂತೆ ಮಾಡುವ ಕಾರ್ಯ ಶ್ರೇಷ್ಠ. ಬಣ್ಣ ಹಚ್ಚಿ ಹುಲಿಯಾದ ನರಿ ಕಥೆ ಆಗಬಾರದು ಬದುಕು. ಅನೇಕ ಹಿರಿಯ ನಟರು ಬಾಳಿ ಒಳ್ಳೆ ಸಂದೇಶ ಕೊಟ್ಟ ರಂಗ ನಮ್ಮದು. ಬೆಳೆಯಲು ಪ್ರತಿಭೆ ಬಳಸಿ ವಾಮಮಾರ್ಗ ಬೇಡ ಎಂದು ಸಲಹೆ ನೀಡಿ ಟ್ವೀಟ್ ಮಾಡಿದ್ದಾರೆ.

ಇಂದು ನಟ ಚೇತನ್ ಅವರು ಮಹದಾಯಿ ಹೋರಾಟಗಾರರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ ವೇಳೆ ಮಹದಾಯಿ ಹೋರಾಟಕ್ಕೆ ಚಿತ್ರರಂಗದ ಹಿರಿಯರು ಕುಳಿತು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡಬೇಕು. ಎಷ್ಟೋ ವರ್ಷದ ಹಿಂದೆ ಉತ್ತರ ಕರ್ನಾಟಕ್ಕೆ ಹೋಗಿ ಹೋರಾಟದಲ್ಲಿ ಭಾಗಿಯಾಗಿದ್ದರು. ಅದು ಒಳ್ಳೆಯ ಕೆಲಸವೇ. ಆದರೆ ಹೋರಾಟ ಅಂದರೆ ಒಂದು ಕಡೆ ಹೋಗಿ ಕೈ ಆಡಿಸಿ ಮೆರವಣಿಗೆ ಮಾಡುವುದಲ್ಲ. ಹೋರಾಟ ಅಂದರೆ ಅದು ಬಗೆ ಹರಿಯುವವರೆಗೆ ಜನರ ಜೊತೆ ಇರಬೇಕು ಎಂದು ಹೇಳಿದ್ದರು. ಇದನ್ನೂ ಓದಿ:  ಮೂರು ಪಕ್ಷಗಳಿಗೆ ರಾಜಕೀಯ ಬೇಕಿದೆ, ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ: ಚೇತನ್

“ಲೇ ತಮ್ಮ ನೀನು ಕಲಾವಿದನೊ ಅಥವಾ..? ಹುಬ್ಬಳ್ಳಿಗೆ ಕನ್ನಡ ಚಿತ್ರರಂಗದವರು ಬರಿ ಕೈ ಬಿಸಿ ಮೆರವಣಿಗೆ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕೆ ಹೋಗಿಲ್ಲಪ್ಪ. ರೈತರ ಪ್ರತಿಯೊಂದು ಕಷ್ಟ ದುಃಖಗಳಲ್ಲಿ ನಾವುಗಳು ಯಾವಾಗಲು ನಿಮ್ಮ ಜೊತೆ ಸದಾ ಇರುತ್ತವೆ ಎಂದು ಧೈರ್ಯ ತುಂಬಲು ಹೋಗಿದ್ದು ಸ್ವಾಮಿ” ಎಂದು ಮೇಘರಾಜ್24 ಎಂಬವರು ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ಮರು ಟ್ವೀಟ್ ಮಾಡಿ ಜಗ್ಗೇಶ್ ಈ ಮೇಲಿನಂತೆ ತಮ್ಮ ಅಭಿಪ್ರಾಯವನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್: ಎಲ್ಲಿ ಬಂದ್? ಏನ್ ಇರುತ್ತೆ? ಏನ್ ಇರಲ್ಲ?

https://www.youtube.com/watch?v=hzIeun7Lix8

 

 

Click to comment

Leave a Reply

Your email address will not be published. Required fields are marked *