ಬೆಂಗಳೂರು: ಜೀವನ ಚಿಕ್ಕದಾಗಿದೆ, ನಕಾರಾತ್ಮಕತೆಯನ್ನು ತೊಡೆದುಹಾಕಿ ಎಂದು ಚಂದನವನದ ನಟಿ ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಯನ್ನು ಹಾಕಿದ್ದಾರೆ.
ಮೇಘನಾ ತಮ್ಮ ಇನ್‍ಸ್ಟಾದಲ್ಲಿ, ಜೀವನ ಚಿಕ್ಕದಾಗಿದೆ, ನಕಾರಾತ್ಮಕತೆಯನ್ನು ತೊಡೆದುಹಾಕಿ, ಗಾಸಿಪ್ ಮರೆತುಬಿಡಿ. ಕಾಳಜಿಯಿಲ್ಲದ ಜನರಿಗೆ ವಿದಾಯ ಹೇಳಿ, ಯಾವಾಗಲೂ ಇರುವ ಜನರೊಂದಿಗೆ ಸಮಯ ಕಳೆಯಿರಿ ಎಂದು ಚಿರು ಫೋಟೋ ಇರುವ ಪೋಸ್ಟ್ ಗೆ ಈ ಲೈನ್ ಗಳನ್ನು ಬರೆದು ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪುರನ್ನು ಪ್ರತಿ ದಿನವೂ ಆರಾಧಿಸೋಣ: ರಮ್ಯಾ
Advertisement
Advertisement
ಈ ಪೋಸ್ಟ್ ಅನ್ನು ಇನ್‍ಸ್ಟಾದಲ್ಲಿ ಎಂಸಿಫೋರೆವೆರ್008 ಎನ್ನುವ ಚಿರು – ಮೇಘನಾ ಅಭಿಮಾನಿಗಳು ಪೋಸ್ಟ್ ಮಾಡಿದ್ದು, ಮೇಘನಾ ಅವರನ್ನು ಟ್ಯಾಗ್ ಮಾಡಿದ್ದರು. ಅದಕ್ಕೆ ಮೇಘನಾ ತಮ್ಮ ಸ್ಟೋರಿಯಲ್ಲಿ ಈ ಪೋಸ್ಟ್ ತಮ್ಮ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
Advertisement
View this post on Instagram
Advertisement
ಮೇಘನಾ ಇತ್ತೀಚೆಗೆ ತನ್ನ ಮುದ್ದು ಕಂದ ರಾಯನ್ ರಾಜ್ ಸರ್ಜಾ 1ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಜಂಗಲ್ ಥೀಮ್ ಅಲ್ಲಿ ‘ರಾಯನ್ ಕಿಂಗ್ಡಮ್’ ಎಂಬ ಸುಂದರವಾದ, ಅದ್ದೂರಿಯಾದ ಕಾನ್ಸೆಪ್ಟ್ ನಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿದ್ದರು. ಈ ವೇಳೆ ಮೇಘನಾ, ನನ್ನ ಮಗ ದೊಡ್ಡವನಾಗಿ ತನ್ನ ಮೊದಲನೇ ವರ್ಷದ ಹುಟ್ಟುಹಬ್ಬ ಎಷ್ಟು ಚೆನ್ನಾಗಿ ಮಾಡಿದ್ರು ನನ್ನ ಅಮ್ಮ ಎಂದು ಖುಷಿ ಪಡಬೇಕು ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಮುದ್ರಣಾ ಕಾಶಿ, ಸಂಗೀತದ ನಾಡಿಗೆ ಈ ಬಾರಿ 2 ರಾಜ್ಯೋತ್ಸವ ಪ್ರಶಸ್ತಿ
View this post on Instagram