ತುಮಕೂರು: ಗುಬ್ಬಿ ಕ್ಷೇತ್ರ 15 ವರ್ಷಗಳ ಕಾಲ ಜೆಡಿಎಸ್ (JDS) ಭದ್ರಕೋಟೆಯಾಗಿತ್ತು. ಜೆಡಿಎಸ್‍ನಿಂದ ಉಚ್ಛಾಟನೆಗೊಂಡು ಈಗ ಕಾಂಗ್ರೆಸ್ (Congress) ಸೇರಿದ ಎಸ್.ಆರ್. ಶ್ರೀನಿವಾಸ್ (SR Srinivas) 4 ಅವಧಿಗೆ ಶಾಸಕರಾಗಿದ್ದರು. ಈ ಕ್ಷೇತ್ರದಲ್ಲಿ ಇಷ್ಟು ದಿನ ಜೆಡಿಎಸ್ ಮತ್ತು ಬಿಜೆಪಿ (BJP) ನಡುವೆ ಮಾತ್ರ ಫೈಟ್ ಇತ್ತು. ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಿತ್ತು. ಆದರೆ ಈ ಬಾರಿ ಮಾಜಿ ಶಾಸಕ ಎಸ್.ಆರ್. ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿ ಆಗಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈ ಬಾರಿಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ತ್ರಿಕೋನ ಫೈಟ್ ಇರಲಿದೆ. ಹೇಳಿಕೇಳಿ ಗುಬ್ಬಿ ಕ್ಷೇತ್ರ ಲಿಂಗಾಯತರ ಪ್ರಾಬಲ್ಯ ಇರುವ ಕ್ಷೇತ್ರ. ಸುಮಾರು 35 ಸಾವಿರ ಲಿಂಗಾಯತ ಮತದಾರರು ಇದ್ದಾರೆ. ಬಿಜೆಪಿಯಲ್ಲಿ ಪ್ರತಿಬಾರಿಯೂ ಟಿಕೆಟ್ ಗೊಂದಲ ಉಂಟಾಗಿ ಬಂಡಾಯ ಅಭ್ಯರ್ಥಿ ಸ್ಪರ್ಧಿಸುತ್ತಾರೆ. ಪರಿಣಾಮ ಮತ ವಿಭಜನೆ ಉಂಟಾಗಿ ಜೆಡಿಎಸ್ ಗೆಲುವು ಸಾಧಿಸುತ್ತಿತ್ತು. ಈ ಬಾರಿ ಕೂಡ ಬಿಜೆಪಿಯಲ್ಲಿ ಬಂಡಾಯ ಎದ್ದಿದೆ.
Advertisement
Advertisement
ಬೆಟ್ಟಸ್ವಾಮಿ ಅವರಿಗೆ ಟಿಕೆಟ್ ಕೈ ತಪ್ಪಿದಕ್ಕೆ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ಪ್ರಬಲ ಗೊಲ್ಲ ಸಮುದಾಯದ ಬೆಟ್ಟಸ್ವಾಮಿಯನ್ನು ಹಿಂದುಳಿದ ವರ್ಗಗಳ ಹುಲಿ ಎಂದೇ ಕರೆಯಲಾಗುತ್ತದೆ. ಬೆಟ್ಟಸ್ವಾಮಿ ಜೆಡಿಎಸ್‍ಗೆ ಸೇರಿರುವುದರಿಂದ ಆನೆ ಬಲ ಬಂದಿದೆ. ಇನ್ನೊಂದೆಡೆ ಕಾಂಗ್ರೆಸ್‍ನ ಅತೃಪ್ತ ಮುಖಂಡ ಹೊನ್ನಗಿರಿ ಗೌಡ ಕೂಡ ಕಾಂಗ್ರೆಸ್ ತೊರೆದು ತೆನೆ ಹೊತ್ತಿದ್ದಾರೆ. ಇಬ್ಬರೂ ನಾಯಕರ ಆಗಮನದಿಂದ ಜೆಡಿಎಸ್ ಇನ್ನಷ್ಟು ಬಲಗೊಂಡಿದೆ. ಜೆಡಿಎಸ್‍ಗೆ ಹೊಸದಾಗಿ ಸೇರ್ಪಡೆಗೊಂಡ ಬೆಟ್ಟಸ್ವಾಮಿ ಹಾಗೂ ಹೊನ್ನಗಿರಿ ಗೌಡರ ಏಕಮೇವ ಉದ್ದೇಶ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಶ್ರೀನಿವಾಸ್ ಅವರನ್ನು ಸೋಲಿಸುವುದಾಗಿದೆ.
Advertisement
ಅತ್ತ ಜೆಡಿಎಸ್ ವರಿಷ್ಠರ ಕುಮಾರಸ್ವಾಮಿ ಅವರ ಯೋಜನೆಯೂ ಶ್ರೀನಿವಾಸ್ ಅವರಿಗೆ ಖೆಡ್ಡಾ ತೋಡುವುದೇ ಆಗಿದೆ. ಹಾಗಾಗಿ ಶತ್ರುವಿನ ಶತ್ರು ಮಿತ್ರ ಎಂದ ಹಾಗೆ ಎಲ್ಲ ಮುಖಂಡರು 4 ಬಾರಿ ಗೆದ್ದು ಶಾಸಕರಾಗಿ ಮತ್ತೆ ಐದನೇ ಬಾರಿಗೆ ಸ್ಪರ್ಧೆ ಮಾಡಿರುವ ಎಸ್.ಆರ್ ಶ್ರೀನಿವಾಸ್ ಅವರನ್ನು ಸೋಲಿಸುವ ಪಣ ತೊಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಕೂಡ ಬಿರುಸಿನ ಪ್ರಚಾರ ಆರಂಭಿಸಿದ್ದು, ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ.
Advertisement
ಬಿಜೆಪಿ ಧನಾತ್ಮಕ ಅಂಶಗಳು: ಗುಬ್ಬಿಯಲ್ಲಿ ಬಿಜೆಪಿಯ ಪಕ್ಷ ಸಂಘಟನೆ ಉತ್ತಮ ಆಗಿದೆ. ಜೊತೆಗೆ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿಯ ಕೈ ಹಿಡಿಯುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ಕ್ಷೇತ್ರವು ಬಿಜೆಪಿ ಸಂಸದ ಜಿ.ಎಸ್ ಬಸವರಾಜ ಅವರ ಹಿಡಿತದಲ್ಲಿ ಇದೆ.
ಋಣಾತ್ಮಕ ಅಂಶಗಳು: ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಉಂಟಾಗಿತ್ತು. ಈ ಗೊಂದಲದಿಂದಾಗಿಯೇ ಗೊಲ್ಲ ಸಮುದಾಯದ ಪ್ರಬಲ ನಾಯಕ ಬೆಟ್ಟಸ್ವಾಮಿ ಪಕ್ಷ ತೊರೆದಿರುವುದು ಬಿಜೆಪಿಗೆ ಹೊಡೆತ ಬಿದ್ದಿದೆ. ಇನ್ನೂ ಪಕ್ಷದಲ್ಲಿ ಒಳ ಏಟು ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಾಂಗ್ರೆಸ್ ಧನಾತ್ಮಕ ಅಂಶಗಳು: ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್‍ಗೆ ಸೇರಿರುವುದು ಪಕ್ಷಕ್ಕೆ ಆನೆ ಬಲ ಬಂದಿದೆ. ಕಾಂಗ್ರೆಸ್‍ನ ಸಾಂಪ್ರದಾಯಿಕ ಮತ ಹಾಗೂ ಎಸ್.ಆರ್ ಶ್ರೀನಿವಾಸ್ ವೈಯಕ್ತಿಕ ವರ್ಚಸ್ಸು ಕಾಂಗ್ರೆಸ್‍ಗೆ ಧನಾತ್ಮಕ ಅಂಶವಾಗಲಿದೆ. ಸುಮಾರು 10 ಸಾವಿರ ಇರುವ ಕುರುಬರು ಕೈ ಹಿಡಿಯುವ ಸಾಧ್ಯತೆಯಿದೆ.
ಕಾಂಗ್ರೆಸ್ ಋಣಾತ್ಮಕ ಅಂಶಗಳು: ಎಸ್.ಆರ್ ಶ್ರೀನಿವಾಸ್ 20 ವರ್ಷ ಶಾಸಕರಾಗಿ ಅಭಿವೃದ್ಧಿ ಮಾಡದೇ ಇರುವುದು ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಕಾಂಗ್ರೆಸ್‍ನಲ್ಲಿ ಬಂಡಾಯ ಸಾಧ್ಯತೆಯಿದ್ದು, ಮೂಲ ಕಾಂಗ್ರೆಸ್ ಮತ್ತು ವಲಸಿಗರ ನಡುವೆ ಜಟಾಪಟಿ ನಡೆಯುತ್ತಿದೆ. ಅಷ್ಟೇ ಅಲ್ಲದೇ ಒಕ್ಕಲಿಗ ನಾಯಕರಾದ ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಮಾತನಾಡಿರುವುದು ಕಾಂಗ್ರೆಸ್ ಮೇಲೆ ಪರಿಣಾಮ ಬೀರಲಿದೆ.
ಜೆಡಿಎಸ್ ಧನಾತ್ಮಕ ಅಂಶಗಳು: ಜೆಡಿಎಸ್ ಭದ್ರಕೋಟೆಯಾಗಿದ್ದ ಗುಬ್ಬಿ ಕ್ಷೇತ್ರದಲ್ಲಿ ಎರಡನೇ ಪ್ರಬಲ ಸಮುದಾಯವಾಗಿ ಒಕ್ಕಲಿಗ ಮತದಾರರಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಸೌಮ್ಯ ಸ್ವಭಾವದವರಾಗಿರುವುದು ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಕಾಂಗ್ರೆಸ್‍ನ ಹೊನ್ನಗಿರಿ ಗೌಡ, ಬಿಜೆಪಿಯ ಬೆಟ್ಟಸ್ವಾಮಿ ಜೆಡಿಎಸ್ ಸೇರಿರುವುದು ಪಕ್ಷಕ್ಕೆ ಮತ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಯುವಕನಿಗೆ ಕಪಾಳ ಮೋಕ್ಷ ಮಾಡಿದ ಎಂ.ಬಿ.ಪಾಟೀಲ್
ಜೆಡಿಎಸ್ ಋಣಾತ್ಮಕ ಅಂಶಗಳು: ಈ ಹಿಂದಿನ ಜೆಡಿಎಸ್ ಶಾಸಕ ಶ್ರೀನಿವಾಸ್ ಅಭಿವೃದ್ಧಿ ಮಾಡದೇ ಇರುವುದು ಪಕ್ಷಕ್ಕೆ ಕಳಂಕ ತಂದಿದೆ. ಅಭ್ಯರ್ಥಿ ಬಿ.ಎಸ್ ನಾಗರಾಜು ಹೊಸ ಮುಖವಾಗಿದ್ದು ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲದೇ ಮೂಲ ಜೆಡಿಎಸ್ ಮುಖಂಡರ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ನಷ್ಟವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ನಾಗಪುರದಿಂದ ಯಾರೇ ಬಂದರೂ ಚುನಾವಣೆ ಮಾಡಲು ಆಗಲ್ಲ: ಬಿಜೆಪಿ ನಾಯಕರಿಗೆ ಶೆಟ್ಟರ್ ತಿರುಗೇಟು
ಗುಬ್ಬಿ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ:
ಗುಬ್ಬಿ ಕ್ಷೇತ್ರದಲ್ಲಿ ಒಟ್ಟು 1,79,798 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಈವರೆಗೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರೇ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ.
ಯಾರ ವೋಟು ಎಷ್ಟು?:
ಲಿಂಗಾಯತರು- 50,000
ಒಕ್ಕಲಿಗರು- 30,000
ಗೊಲ್ಲರು- 26,000
ಎಸ್ಸಿ ಎಸ್ಟಿ – 25,000
ಮುಸ್ಲಿಂ- 12,000
ಕುರುಬರು- 8,000
ತಿಗಳರು- 12,000
ಮಡಿವಾಳ- 4,000
ಬ್ರಾಹ್ಮಣ- 2,000